ಭೂಮಿ ಶೆಟ್ಟಿ ಫೋಟೊಶೂಟ್‌ಗೆ "ಭೂಮಿ ಮೇಲಿನ ಹಾಟೆಸ್ಟ್ ಸುಂದರಿ" ಎಂದು ನೆಟ್ಟಿಗರು

By ಅನಿತಾ ಬನಾರಿ

'ಕಿನ್ನರಿ' ಧಾರಾವಾಹಿಯ ಮಣಿಯಾಗಿ ಕಿರುತೆರೆಗೆ ಕಾಲಿಟ್ಟ ಕುಂದಾಪುರದ ಕುವರಿಯ ಹೆಸರು ಭೂಮಿ ಶೆಟ್ಟಿ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಭೂಮಿ ಶೆಟ್ಟಿ ಮುಂದೆ ಕಾಣಿಸಿಕೊಂಡಿದ್ದು ಹಿರಿತೆರೆಯಲ್ಲಿ. ಕಿರುತೆರೆ, ಹಿರಿತೆರೆ ಎರಡರಲ್ಲೂ ನಟನಾ ಛಾಪನ್ನು ಪಸರಿಸುತ್ತಿರುವ ಭೂಮಿ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲೂ ಸಕತ್ ಆ್ಯಕ್ಟೀವ್ ಕೂಡ ಹೌದು.

ಸೋಶಿಯಲ್ ಮೀಡಿಯಾದಲ್ಲಿ ಕೊಂಚ ಮಟ್ಟಿಗೆ ಆ್ಯಕ್ಟೀವ್ ಆಗಿರುವ ಭೂಮಿ ಶೆಟ್ಟಿ ಸಮಯ ಸಿಕ್ಕಾಗಲೆಲ್ಲಾ ಫೋಟೋಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದರ ಜೊತೆಗೆ ವರ್ಕ್ಔಟ್ ಕೂಡಾ ಮಾಡುವ ಈಕೆ ಅದರ ಫೋಟೋ, ವಿಡಿಯೋಗಳನ್ನು ಕೂಡಾ ಶೇರ್ ಮಾಡುತ್ತಿರುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಮೂರು ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಅನ್ನು ಹೊಂದಿರುವ ಭೂಮಿ ಶೆಟ್ಟಿ ಹೊಸ ಫೋಟೋಶೂಟ್ ಒಂದು ಸಖತ್ ಸದ್ದು ಮಾಡುತ್ತಿದೆ.

Actress Bhoomi Shetty new photoshoot netizens call her the hottest diva

ಬೋಲ್ಡ್ ಅವತಾರದಲ್ಲಿ ಪಡ್ಡೆ ಹೈಕ್ಕಳ ಮನ ಕದಿಯುತ್ತಿದ್ದಾರೆ ಭೂಮಿ ಶೆಟ್ಟಿ. ಈ ನಟಿಯ ಹೇರ್ ಸ್ಟೈಲ್, ಕಾಸ್ಟ್ಯೂಮ್ ಎಲ್ಲವೂ ನೆಟ್ಟಿಗರ ಗಮನವನ್ನು ಸೆಳೆಯುತ್ತಿದೆ. ಭೂಮಿ ಶೆಟ್ಟಿ ಫೋಟೋ ಕಂಡಾಗ ಒಂದು ಕ್ಷಣ ಇದು ಯಾರು ಎಂಬ ಪ್ರಶ್ನೆ ಮೂಡಿದರೂ ಆಶ್ಚರ್ಯವಿಲ್ಲ. ಗುರುತು ಸಿಗದಷ್ಟರ ಮಟ್ಟಿಗೆ ಭೂಮಿ ಶೆಟ್ಟಿ ಅವರ ಸ್ಟೈಲ್‌ನಲ್ಲಿ ಬದಲಾವಣೆಯಾಗಿದೆ.

ಮೂರರಿಂದ ನಾಲ್ಕು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಭೂಮಿ ಶೆಟ್ಟಿ "ಜಡೆಗಳು ಹರಿಯುತ್ತಿದೆ, ಶಕ್ತಿ ಹೊಳೆಯುತ್ತಿದೆ" ಎಂದು ಕ್ಯಾಪ್ಶನ್ ಕೂಡಾ ಕೊಟ್ಟಿದ್ದಾರೆ. ಅಂದ ಹಾಗೇ ಭೂಮಿ ಶೆಟ್ಟಿ ಅವರು ಈ ರೀತಿ ಫೋಟೋಶೂಟ್ ಮಾಡುತ್ತಿರುವುದು ಇದು ಮೊದಲೇನಲ್ಲ. ಇದಕ್ಕಿಂತಲೂ ಮೊದಲು ಆಕೆ ಈ ರೀತಿ ಫೊಟೋಶೂಟ್ ಮಾಡಿಸಿಕೊಂಡಿದ್ದರು.

ಇದೀಗ ಈಗ ಈಕೆ ಹಂಚಿಕೊಂಡಿರುವ ಫೋಟೋವನ್ನು ಮೂರು ಸಾವಿರದಷ್ಟು ಜನ ಇಷ್ಟ ಪಟ್ಟಿದ್ದಾರೆ. 'ಉಫ್, ಹಾಟ್ಟಿ', 'ಹಾಟೆಸ್ಟ್ ದಿವಾ ಆನ್ ದಿ ಪ್ಲಾನೆಟ್', 'ವೆರ್ರಿ ಬ್ಯೂಟಿಫುಲ್', 'ಬ್ಯೂಟಿಫುಲ್ ಭೂಮಿ' ಎಂಬ ಹೊಗಳಿಕೆಯ ಸುರಿಮಳೆಯೇ ಬಂದಿದೆ. ಮಾತ್ರವಲ್ಲ "ಅಚ್ಚುಕಟ್ಟಾಗಿ ಲಕ್ಷಣವಾಗಿ ಸೀರೆ ಉಟ್ಕೊಂಡು ಫೋಟೋಶೂಟ್ ಮಾಡ್ಸಮ್ಮ. ಚೆನ್ನಾಗಿ ಕಾಣಿಸ್ತೀಯ. ಇದೇನಿದು ಅಸಹ್ಯವಾಗಿ ಫೋಟೋ ಮಾಡ್ತಿದ್ಯಲ್ಲಮ್ಮ, ಅಸಹ್ಯವಾಗಿ ಕಾಣಿಸ್ತಿದೆ" ಎಂಬ ನೆಗೆಟಿವ್ ಕಮೆಂಟ್ ಕೂಡಾ ಬಂದಿದೆ.

ಒಟ್ಟಿನಲ್ಲಿ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುವುದಲ್ಲದೇ ಪಡ್ಡೆ ಹೈಕ್ಕಳ ದಿಲ್ ಕದ್ದ ಕುಂದಾಪುರದ ಕುವರಿ ಟಾಲಿವುಡ್ ನಲ್ಲಿ ಮೋಡಿ ಮಾಡಿದ್ದಾರೆ. ಹೌದು, ಕಳೆದ ವರ್ಷ ತೆರೆ ಕಂಡ ತೆಲುಗು ಸಿನಿಮಾ "ಶರತುಲು ವರ್ತಿಸ್ತೈ"ದಲ್ಲಿ ಅಭಿನಯಿಸಿರುವ ಭೂಮಿ ಶೆಟ್ಟಿ ಬೆರಳೆಣಿಕೆಯಷ್ಟು ಸೀರಿಯಲ್, ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ನಟನೆಯ ಮೂಲಕ ಮನ ಸೆಳೆದ ಬೆಡಗಿ.

'ಕಿನ್ನರಿ' ಧಾರಾವಾಹಿಯ ಮಣಿಯಾಗಿ ಕನ್ನಡ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿದ್ದ ಭೂಮಿ ಶೆಟ್ಟಿ ನಂತರ ಕಾಣಿಸಿಕೊಂಡಿದ್ದು ತೆಲುಗು ಕಿರುತೆರೆಯಲ್ಲಿ. ತೆಲುಗಿನ 'ನಿನ್ನೆ ಪೆಳ್ಳಡಾತ' ಧಾರಾವಾಹಿಯಲ್ಲಿ ಮೃದುಲಾ ಆಗಿ ನಟಿಸಿದ ಈಕೆ ಮಗದೊಂದು ತೆಲುಗು ಧಾರಾವಾಹಿ 'ಅಕ್ಕ ಚೆಲ್ಲುಲು'ವಿನಲ್ಲಿ ಧರಣಿಯ ಪಾತ್ರಕ್ಕೆ ಜೀವ ತುಂಬಿದ್ದರು.

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಭೂಮಿ ಶೆಟ್ಟಿ ತಮ್ಮ ನಡೆ, ನುಡಿಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. 'ಇಕ್ಕಟ್' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಭೂಮಿ ಶೆಟ್ಟಿ ತನ್ನ ನಟನೆಯ ಮೂಲಕ ಸಿನಿಪ್ರಿಯರ ಮನ ಸೆಳೆದರು. ತೆಲುಗು ಸಿನಿಮಾದಲ್ಲಿ ನಟಿಸಿರುವ ಭೂಮಿ ಶೆಟ್ಟಿ ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದ ಮೂಲಕ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.

More from Filmibeat

English summary
Bhoomi Shetty captivates with new photo shoot.Netizens call her the hottest diva on the planet
Read more about: actress photoshoot sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X