'ಸಾವಿರ ಗುಂಗಲಿ' ಹಾಡುತ್ತ ಹೊರಟ ಸ್ಯಾಂಡಲ್‌ವುಡ್ ನಟಿ ಬೃಂದಾ ಆಚಾರ್ಯ; ಈ ಹಾಡಿನ ಸ್ಪೆಷಲ್ ಏನು?

By ಅನಿತಾ ಬನಾರಿ

ಆಲ್ಬಂ ಸಾಂಗ್‌ಗಳ ಹಾವಳಿ ಇತ್ತೀಚೆಗೆ ಬಹಳ ಕಡಿಮೆಯಾಗಿದೆ. ಮೊದಲು ಬಾಲಿವುಡ್‌ನಲ್ಲಿ ಬಹಳಷ್ಟು ಆಲ್ಬಂ ಸಾಂಗ್‌ಗಳು ಬಿಡುಗಡೆಯಾಗುತ್ತಿದ್ದರೂ ಕನ್ನಡದಲ್ಲಿ ಮೊದಲಿನಿಂದಲೂ ಆಲ್ಬಂ ಸಾಂಗುಗಳು ಬಿಡುಗಡೆಯಾಗಿದ್ದು ಕಮ್ಮಿಯೇ. ಇದೀಗ ಕನ್ನಡದಲ್ಲಿ ಹೊಸದೊಂದು ಆಲ್ಬಂ ಸಾಂಗ್ ಬಿಡುಗಡೆಯಾಗಿದ್ದು ಬಹಳಷ್ಟು ಖ್ಯಾತಿ ಪಡೆಯುತ್ತಿದೆ.

ಕಿರುತೆರೆ ನಟಿ ಬೃಂದಾ ಆಚಾರ್ಯ ಹಾಗೂ ಕಿರುತೆರೆ ನಟ ಭರತ್ ಬೋಪಣ್ಣ ಅವರು 'ಸಾವಿರ ಗುಂಗಲಿ' ಎಂಬ ಹೊಸ ಆಲ್ಬಂ ಸಾಂಗ್‌ನಲ್ಲಿ ನಟಿಸಿದ್ದಾರೆ. 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾದಲ್ಲಿ ಶಿವಾನಿ ಆಗಿ ನಟಿಸಿರುವ ನಟಿ ಬೃಂದಾ ಆಚಾರ್ಯ ಅವರು ಈ ಆಲ್ಬಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ಹಾಗೇ ಬೃಂದಾ ಆಚಾರ್ಯ ಅವರಿಗೆ ಜೋಡಿಯಾಗಿ ನಟಿಸಿದ್ದು ಕೂಡಾ ಕಿರುತೆರೆ ನಟನೇ. ಅವರೇ ಭರತ್ ಬೋಪಣ್ಣ.

Actress Brinda Acharya and Bharat Bopanna appeared as a couple in the album song

'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕ ಲಕ್ಷ್ಮಣ್ ಆಲಿಯಾಸ್ ಲಕ್ಕಿ ಆಗಿ ನಟಿಸಿದ್ದ ಭರತ್ ಬೋಪಣ್ಣ ಈ ಆಲ್ಬಂ ಸಾಂಗ್‌ನಲ್ಲಿ ಅಭಿನಯಿಸಿದ್ದಾರೆ. ಇನ್ನು ಬೃಂದಾ ಆಚಾರ್ಯ ಹಾಗೂ ಭರತ್ ಬೋಪಣ್ಣ ಅವರು ಈ ಆಲ್ಬಂನಲ್ಲಿ ಗಂಡ ಹೆಂಡತಿಯಾಗಿ ಅಭಿನಯಿಸಿದ್ದಾರೆ. 'ಸಾವಿರ ಗುಂಗಲಿ' ಎಂಬ ಟೈಟಲ್‌ನ ಈ ಆಲ್ಬಂ ಸಾಂಗ್ ನಿಸರ್ಗ ಸೌಂದರ್ಯವನ್ನು ಕ್ಯಾಮೆರಾ ಕಣ್ಣಿಂದ ಚೆನ್ನಾಗಿ ಹಿಡಿದುಕೊಟ್ಟಿದೆ.

ಬೃಂದಾ ಆಚಾರ್ಯ ಅವರು ಡಾಕ್ಟರ್ ನೇತ್ರಾ ಆಗಿ ಈ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ‌. ಅವರು ಕಾರಿನಲ್ಲಿ ಓಡಾಡುವ ದೃಶ್ಯ ಬಹಳ ಅದ್ಭುತವಾಗಿ ಸೆರೆಯಾಗಿದೆ. ಡ್ರೋನ್‌ನಿಂದ ಹಿಡಿದು ನಾನಾ ರೀತಿಯ ಶೂಟಿಂಗ್ ಟೆಕ್ನಿಕ್ಸ್ ಬಳಸಿದ್ದು, ಇಡೀ ಆಲ್ಬಂ ಸಾಂಗ್ ಬಹಳ ಚೆನ್ನಾಗಿ ರೂಪುಗೊಂಡಿದೆ.

ಯಾವುದೋ ಒಂದು ಸಿನಿಮಾದ ಹಾಡಿನಂತೆ ಈ ಸಾಂಗ್ ಮೂಡಿ ಬಂದಿದೆ. ಮದುವೆ ನಂತರವೂ ಗಂಡ ಹೆಂಡತಿ ಎಷ್ಟು ಸುಖ ಸಂತೋಷದಿಂದ ಇರಬಹುದು ಎಂಬುದನ್ನು ತೋರಿಸುವ ಈ ಹಾಡು, ಕೊನೆಗೆ ಒಂದು ದೊಡ್ಡ ಮೆಸೇಜ್ ಅನ್ನು ನೀಡಿದೆ. ಹೆಂಡತಿ ಗಂಡನಿಗಾಗಿ ಪ್ರೀತಿಯಿಂದ ಕೊಡಿಸುವ ಬೈಕ್‌ನಿಂದ ಆಗುವ ಅವಾಂತರಗಳ ಬಗ್ಗೆ ಕೇಳಿರುವ ಈ ಹಾಡು, ಒಂದೊಮ್ಮೆ ನಟ ಡಾಕ್ಟರ್ ರಾಜಕುಮಾರ್ ಅವರ ನನ್ನ ನೆನಪಿಸುವುದೂ ಹೌದು.

Actress Brinda Acharya and Bharat Bopanna appeared as a couple in the album song

ಪ್ರೇಕ್ಷಕರಿಗೆ ಬಹಳ ಒಳ್ಳೆಯ ಮೆಸೇಜನ್ನು ಕೊಟ್ಟಿರುವ ಈ ಹಾಡಿನ ಟೀಮ್‌ನಲ್ಲಿ ಬೃಂದಾ ಆಚಾರ್ಯ, ಭರತ್ ಭೋಪಣ್ಣ, ಕೃತಿಕಾ ಗೌಡ, ಮಾನಸಿ ಪಿ ರಾವ್ ಮುಂತಾದವರು ನಟಿಸಿದ್ದಾರೆ.

ಸದ್ಯಕ್ಕೆ ಈ ಸಾಂಗ್ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದ್ದು, ಪ್ರೇಕ್ಷಕರಿಗಂತೂ ಬಹಳ ಖುಷಿ ನೀಡಿದೆ. ಈ ಹಾಡು ಮನರಂಜನೆಗೆ ಅಷ್ಟೇ ಅಲ್ಲದೆ ಒಂದೊಳ್ಳೆಯ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ಮೂಡಿಬಂದಿರೋದು ಶ್ಲಾಘನೀಯ.

More from Filmibeat

English summary
Actress Brinda Acharya's Saavira Gungali album song is making news:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X