For Quick Alerts
ALLOW NOTIFICATIONS  
For Daily Alerts

  ಮಾದಕ ಚೆಲುವೆ ಕ್ಯಾಥರೀನ್ ಥ್ರೆಸಾ ಮಾಯಾ ಚಿತ್ರಗಳು

  By ಉದಯರವಿ
  |

  ಮಾದಕ ಚೆಲುವೆ ಕ್ಯಾಥರೀನ್ ಥ್ರೆಸಾ ಅಲೆಗ್ಜಾಂಡರ್ ಮೂರು ಕನ್ನಡ ಚಿತ್ರಗಳಲ್ಲಿ ಸೊಂಟ ಬಳುಕಿಸಿದ್ದಾರೆ. ಕನ್ನಡದ ಶಂಕರ್ ಐಪಿಎಸ್, ಗಾಡ್ ಫಾದರ್ ಹಾಗೂ ವಿಷ್ಣು ಚಿತ್ರಗಳಲ್ಲಿ ತಮ್ಮ ಮಾದಕ ಚೆಲುವನ್ನು ಅನಾರವರಣಗೊಳಿಸಿದ್ದರು.

  ಈಗ ಈ ಬ್ಯೂಟಿ ತೆಲುಗು ಚಿತ್ರರಂಗದಲ್ಲಿ ಬಿಜಿಯಾಗಿದ್ದಾರೆ. ಮಲಯಾಳಂ ಹಾಗೂ ತಮಿಳು ಚಿತ್ರಗಳಲ್ಲೂ ಅಭಿನಯಿಸಿದ ಈಗ ತೆಲುಗು ಚಿತ್ರರಂಗದಲ್ಲಿ ತಮ್ಮ ವರಸೆ ತೋರಿಸಲು ಬಂದಿದ್ದಾರೆ. ಅವರ ಮಾದಕ ನೋಟಕ್ಕೆ ತೆಲುಗು ಪ್ರೇಕ್ಷಕರು ಕುಳಿತಲ್ಲೇ ಔಟ್ ಆಗುವ ಎಲ್ಲಾ ಸೂಚನೆಗಳನ್ನೂ ನೀಡಿದ್ದಾರೆ.

  ಶಂಕರ್ ಐಪಿಎಸ್ ಚಿತ್ರ ಕ್ಯಾಥರೀನ್ ಅವರಿಗೆ ಚೊಚ್ಚಲ ಕನ್ನಡ ಸಿನಿಮಾ. ಚಿತ್ರದಲ್ಲಿ ಅವರದು ಮಿಸ್ ಇಂಡಿಯಾ ಸ್ಪರ್ಧಿ ಪಾತ್ರ. ಸಿಕ್ಕಿದ್ದ ಅವಕಾಶದಲ್ಲೇ ಅವರು ಮಿಂಚಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ ಗಾಡ್ ಫಾದರ್ ಚಿತ್ರದಲ್ಲೂ ಅವರು ಅಭಿನಯಿಸಿದ್ದರು. ಇತ್ತೀಚೆಗೆ ತಮ್ಮ ಮನಸ್ಸಿನ ಒಳಗಿನ ಮಾತುಗಳನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟರು.

  ಸ್ಕ್ರೀನ್ ನೇಮ್: ಕ್ಯಾಥರೀನ್
  ಪೂರ್ಣ ಹೆಸರು: ಕ್ಯಾಥರೀನ್ ಥ್ರೆಸಾ ಅಲೆಗ್ಜಾಂಡರ್
  ಹುಟ್ಟಿದ ದಿನಾಂಕ: 10 ಸೆಪ್ಟೆಂಬರ್ 1985
  ಹುಟ್ಟಿದ ಸ್ಥಳ: ಕೇರಳ, ಕೊಟ್ಟಾಯಂ
  ಮೊದಲ ಚಿತ್ರ: ಶಂಕರ್ ಐಪಿಎಸ್

  ಹುಟ್ಟಿದ್ದು ಕೇರಳದಲ್ಲಿ ಬೆಳೆದದ್ದು ದುಬೈನಲ್ಲಿ

  ನಾನು ಹುಟ್ಟಿದ್ದು ಕೇರಳದ ಕೊಟ್ಟಾಯಂನಲ್ಲಿ. ತಂದೆಯವರ ಬಿಜಿನೆಸ್ ಕಾರಣದಿಂದ ನಾನು ಚಿಕ್ಕಂದಿನಲ್ಲೇ ದುಬೈಗೆ ಸ್ಥಳಾಂತರವಾದೆ. ಪ್ಲಸ್ ಟೂ ವರೆಗೂ ದುಬೈನಲ್ಲೇ ಇದ್ದೆ. ಡಿಗ್ರಿ ಓದಲು ಬೆಂಗಳೂರಿಗೆ ಬಂದೆ.

  ಡಿಗ್ರಿ ಮಾಡಿದ್ದು ಸೇಂಟ್ ಜೋಸೆಫ್ ಕಾಲೇಜಲ್ಲಿ

  ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಓದುತ್ತಾ ಮಾಡೆಲಿಂಗ್ ಕ್ಷೇತ್ರಕ್ಕೆ ಅಂಬೆಗಾಲಿಟ್ಟೆ. ಈ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಲು ನನ್ನ ಫೋಟೋಗಳನ್ನು ಕೆಲವು ಕಂಪನಿಗಳಿಗೆ ಕಳುಹಿಸಿದೆ.

  ಫ್ಯಾಷನ್ ಲೋಕದಿಂದ ಜಾಹೀರಾಗುಗಳಿಗೆ

  ನನ್ನ ಫೋಟೋಗಳನ್ನು ಪ್ರಮುಖ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ನೋಡಿ ಕೆಲವು ಫ್ಯಾಷನ್ ಶೋಗಳಲ್ಲಿ ಅವಕಾಶ ಕಲ್ಪಿಸಿದರು. ಫ್ಯಾಷನ್ ಶೋಗಳ ಮೂಲಕ ಜಾಹೀರಾತುಗಳಲ್ಲೂ ಅಭಿನಯಿಸುವ ಚಾನ್ಸ್ ಸಿಕ್ಕಿತು. ನಲ್ಲಿ ಸಿಲ್ಕ್ಸ್, ಚೆನ್ನೈ ಸಿಲ್ಕ್ಸ್, ಫಾಸ್ಟ್ ಟ್ರಾಕ್, ಜೋಸ್ಕೋ ಜ್ಯುವೆಲರೀಸ್, ಡೆಕ್ಕನ್ ಕ್ರಾನಿಕಲ್ ಗಳಿಗೆ ಮಾಡೆಲಿಂಗ್ ಮಾಡಿದ್ದೇನೆ. ಫಾಸ್ಟ್ ಟ್ರ್ಯಾಕ್ ಜಾಹೀರಾತುಗಳಲ್ಲಿ ಎಲ್ಲರ ಗಮನಸೆಳೆದೆ.

  ತಂದೆಯವರಿಗೂ ಈಗ ಖುಷಿಯಾಗುತ್ತಿದೆ

  ಸಿನಿಮಾಗಳಲ್ಲಿ ಅಭಿನಯಿಸುವುದು ನನಗಿಷ್ಟವಿರಲಿಲ್ಲ. ನಾನು ಗೆಲುವುದಿಲ್ಲ ಎಂಬ ಅನುಮಾನ ನಮ್ಮ ತಂದೆಯವರದು. ಈಗವರು ಹ್ಯಾಪಿಯಾಗಿದ್ದಾರೆ. ಒಂದರ ಹಿಂದೆ ಒಂದು ದೊಡ್ಡ ದೊಡ್ಡ ಆಫರ್ ಗಳು ಬರುತ್ತಿದ್ದರೆ ಹೇಳಿಕೊಳ್ಳಲಾರದಷ್ಟು ಖುಷಿಯಾಗುತ್ತಿದೆ.

  ಸಿನಿಮಾ ನನ್ನ ಕನಸಾಗಿರಲಿಲ್ಲ

  ಮಾಡೆಲಿಂಗ್ ನಲ್ಲಿ ಗೆದ್ದ ಬಳಿಕ ಸಿನಿಮಾಗಳಲ್ಲಿ ಅವಕಾಶಗಳು ಬಂದವು. ಇಲ್ಲೂ ಒಂದು ಕೈ ನೋಡೋಣ ಎಂದು ಬಂದೆ. ಚಿಕ್ಕಂದಿನಿಂದ ಸಿನಿಮಾ ಮಾಡಬೇಕು ಎಂಬ ಕನಸು ನನಗಿರಲಿಲ್ಲ. ಕನ್ನಡದ ಶಂಕರ್ ಐಪಿಎಸ್ ನನ್ನ ಚೊಚ್ಚಲ ಚಿತ್ರ. ರಿಯಲ್ ಸ್ಟಾರ್ ಉಪೇಂದ್ರ ಜೊತೆ ಗಾಡ್ ಫಾದರ್ ಚಿತ್ರದಲ್ಲೂ ನಟಿಸಿದೆ.

  ಮುಮ್ಮುಟ್ಟಿ ಜೊತೆಗೂ ಅವಕಾಶ ಬಂದಿತ್ತು

  ಕನ್ನಡ, ಮಲಯಾಳಂ ಚಿತ್ರಗಳಲ್ಲಿ ಎರಡು ವರ್ಷಗಳ ಕಾಲ ಸಾಕಷ್ಟು ತಾಳ್ಮೆಯಿಂದ ಕೆಲಸ ಮಾಡಿದೆ. ಬಹಳಷ್ಟು ವಿಚಾರಗಳನ್ನು ತಿಳಿದುಕೊಂಡೆ. ಮಮ್ಮುಟ್ಟಿ ಜೊತೆಗೆ ಚಿತ್ರ ಮಾಡಲು ಅವಕಾಶ ಬಂತು. ಆದರೆ ಚಿಕ್ಕ ಹುಡುಗಿ ತರಹ ಕಾಣಿಸುತ್ತೇನೆ ಎಂಬ ಕಾರಣಕ್ಕೆ ಬೇಡ ಎಂದರು.

  ಆಯ್ಕೆಯಲ್ಲಿ ಅಮ್ಮನ ಸಹಾಯ ಇರುತ್ತದೆ

  ಸಿನಿಮಾಗಳ ಆಯ್ಕೆಯಲ್ಲಿ ಅಮ್ಮನ ಸಹಾಯ ಮಾಡುತ್ತಾರೆ. ಆಕೆ ಸಹ ನನ್ನೊಂದಿಗೆ ಕಥೆ ಕೇಳುತ್ತಾರೆ. ಆಗ ಇಬ್ಬರೂ ಒಂದು ನಿರ್ಣಯಕ್ಕೆ ಬರುತ್ತೇವೆ. ತಂದೆಯವರಿಗೆ ಸಿನಿಮಾಗಳ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಅವರು ಬಿಜಿನೆಸ್ ನಲ್ಲಿ ಬಿಜಿಯಾಗಿರುತ್ತಾರೆ.

  ತಂದೆಯವರು ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ

  ಮುಂದೆ ಇನ್ನಷ್ಟು ಉತ್ತಮ ಚಿತ್ರಗಳಲ್ಲಿ ಅಭಿನಯಿಸಿದ ಹೆಸರು ಸಂಪಾದಿಸಿಕೊಳ್ಳಬೇಕೆಂದಿದ್ದೇನೆ. ನನ್ನ ಸಿನಿಮಾಗಳ ಬಗ್ಗೆ ತಂದೆಯವರು ಅಷ್ಟಾಗಿ ಹಿಡಿಸಿಕೊಳ್ಳುವುದಿಲ್ಲ.

  ವಯಸ್ಸಿನಲ್ಲಿ ದೊಡ್ಡವರ ಜೊತೆ ಅಭಿನಯಿಸಿದ್ದೇನೆ

  ಸ್ಯಾಂಡಲ್ ವುಡ್ ನಲ್ಲಿ ನನಗಿಂತಲೂ ವಯಸ್ಸಿನಲ್ಲಿ ದೊಡ್ಡವರಾದ ನಟರ ಜೊತೆಗೆ ಅಭಿನಯಿಸಿದ್ದೇನೆ. ಈಗ ನನ್ನ ವಯಸ್ಸಿಗೆ ತಕ್ಕಂತಹ ಪಾತ್ರಗಳು ಬರುತ್ತಿವೆ. ಇನ್ನು ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಡುವೆ ಅಂತಹಾ ದೊಡ್ಡ ವ್ಯತ್ಯಾಸವಿಲ್ಲ.

  ನನಗೆ ಮಲಯಾಳಂ ಬರಲ್ಲ

  ನನ್ನ ಹುಟ್ಟೂರು ಕೇರಳ ಆದರೂ ನನಗೆ ಮಲಯಾಳಂ ಬರುವುದಿಲ್ಲ. ಮನೆಯಲ್ಲಿ ಇಂಗ್ಲಿಷ್ ಮಾತನಾಡುತ್ತೇವೆ. ಹಿಂದಿಯನ್ನು ನಿರರ್ಗಳವಾಗಿ ಮಾತನಾಡುತ್ತೇನೆ. ಈಗ ದಕ್ಷಿಣದ ಎಲ್ಲಾ ಭಾಷೆಗಳನ್ನು ಕಲಿಯುತ್ತಿದ್ದೇನೆ. ನಾನೇ ಡಬ್ಬಿಂಗ್ ಹೇಳಬೇಕೆಂಬ ಆಸೆ.

  ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಇದೆ

  ಸಿನಿಮಾಗಳನ್ನು ಬಿಟ್ಟರೆ ನಾನು ಹೆಚ್ಚಾಗಿ ಪರಿಸರದ ಬಗೆಗಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಗ್ರೀನ್ ಪೀಸ್ ಗೆ ಬೆಂಬಲ ನೀಡುತ್ತಿದ್ದೇನೆ.

  ಫೇಸ್ ಬುಕ್ ನಲ್ಲಿ ನಾನಿಲ್ಲ

  ನೀವು ಯಾರೂ ನಂಬುವುದಿಲ್ಲ ನಾನು ಫೇಸ್ ಬುಕ್ ನಲ್ಲಿ ಇಲ್ಲ. ಅದೊಂದು ಟೈಂ ವೇಸ್ಟ್ ವ್ಯವಹಾರ ಎಂಬುದು ನನ್ನ ಉದ್ದೇಶ. ನನಗೆ ಹೊಸ ವರ್ಷ, ಹುಟ್ಟಿದ ದಿನ, ಹಬ್ಬಗಳಂದು ವಿಶೇಷ ನಿರ್ಣಯಗಳನ್ನು ಕೈಗೊಳ್ಳುವ ಅಭ್ಯಾಸ ನನಗಿಲ್ಲ.

  ಪ್ರತಿ ದಿನ ಅಮೂಲ್ಯವಾದದ್ದು

  ನನ್ನ ಪ್ರಕಾರ ಪ್ರತಿ ದಿನ ಅಮೂಲ್ಯವಾದದ್ದು. ಯಾವುದಾರೂ ನಿರ್ಣಯ ಕೈಗೊಳ್ಳಬೇಕಿದ್ದರೆ ಅದೇ ದಿನ ತೆಗೆದುಕೊಳ್ಳುತ್ತೇನೆ. ಅದಕ್ಕಾಗಿ ಎದುರು ನೋಡುತ್ತಾ ಕುಳಿದುಕೊಳ್ಳುವುದಿಲ್ಲ.

  ನನ್ನ ಕಣ್ಣುಗಳು ಬಹಳ ಮುಗ್ಧ

  ಮುಗುಳ್ನಗುತ್ತಾ...ನನ್ನ ಕಣ್ಣುಗಳು ಬಹಳ ಮುಗ್ಧವಾಗಿರುತ್ತವೆ. ನನ್ನ ಫಿಜಿಕ್ ಸಹ ಬಹಳ ರೊಮ್ಯಾಂಟಿಕ್ ಆಗಿರುತ್ತದೆ ಎಂದು ನನ್ನ ಸ್ನೇಹಿತರು ಹೇಳುತ್ತಿರುತ್ತಾರೆ. ಸಂಗೀತ, ಡಾನ್ಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಐಸ್ ಸ್ಕೇಟಿಂಗ್ ಮಾಡುತ್ತೇನೆ. ಹತ್ತು ಮಂದಿ ಮುಂದೆ ಧೈರ್ಯವಾಗಿ ನಿಲ್ಲಬಲ್ಲ.

  ಮಾಡೆಲಿಂಗ್ ನಲ್ಲಿ ಗೆಲುವು ಸಾಧಿಸಿದೆ

  ಹಾಡಲು ಬರುತ್ತದೆ. ಪಿಯಾನೋ ನುಡಿಸುತ್ತೇನೆ. ಮಾಡೆಲಿಂಗ್ ನಲ್ಲಿ ಗೆಲುವು ಸಾಧಿಸಿದೆ.

  English summary
  Catherine Tresa is an Indian film actress and model, known for her works in South Indian film industry. Since 2010, She has acted in Kannada, Malayalam and Telugu films.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more