For Quick Alerts
  ALLOW NOTIFICATIONS  
  For Daily Alerts

  ನಕಲಿ ಸಹಿ ಬಳಸಿ ಲಕ್ಷಾಂತರ ವಂಚನೆ, ಪತಿ-ಮಾವನ ವಿರುದ್ಧ ನಟಿ ದೂರು

  |

  ಕನ್ನಡ ಸಿನಿಮಾ ನಟಿ ಚೈತ್ರಾ ಹಳ್ಳಿಕೆರಿ ತಮ್ಮ ಪತಿ ಹಾಗೂ ಮಾವನ ವಿರುದ್ಧವೇ ವಂಚನೆ ಪ್ರಕರಣ ದಾಖಲಿಸಿದ್ದಾರೆ.

  ತಮ್ಮ ಸಹಿಯನ್ನು ನಕಲು ಮಾಡಿ ಲಕ್ಷಾಂತರ ರುಪಾಯಿ ಹಣ ವಂಚಿಸಿರುವುದು ಮಾತ್ರವೇ ಅಲ್ಲದೆ, 'ನನ್ನ ಬ್ಯಾಂಕ್ ಖಾತೆಯನ್ನು ತಮ್ಮ ಹಣಕಾಸು ವ್ಯವಹಾರಕ್ಕೆ ಅಕ್ರಮವಾಗಿ, ನಿಯಮಬಾಹಿರವಾಗಿ ಬಳಸಿಕೊಂಡಿದ್ದಾರೆ' ಎಂದು ನಟಿ ದೂರು ನೀಡಿದ್ದಾರೆ.

  ಬಿಗ್‌ಬಾಸ್ ಖ್ಯಾತಿಯ ಚೈತ್ರಾ ನಿಜ ಜೀವನದಲ್ಲಿ ಯಶಸ್ವಿ ಉದ್ಯಮಿ ಎಂಬುದು ಗೊತ್ತೆ?ಬಿಗ್‌ಬಾಸ್ ಖ್ಯಾತಿಯ ಚೈತ್ರಾ ನಿಜ ಜೀವನದಲ್ಲಿ ಯಶಸ್ವಿ ಉದ್ಯಮಿ ಎಂಬುದು ಗೊತ್ತೆ?

  ಮೈಸೂರಿನ ಎಸ್‌ಪಿಗೆ ದೂರು ಸಲ್ಲಿಸಿರುವ ಚೈತ್ರಾ ಹಳ್ಳಿಕೆರೆ, ಬಾಲಾಜಿ ಪೋತರಾಜು ಎಂಬುವರೊಟ್ಟಿಗೆ 2006ರಲ್ಲಿ ವಿವಾಹವಾಗಿ ಮೈಸೂರಿನಲ್ಲಿ ನೆಲೆಸಿದ್ದು, ಆ ಸಮಯದಲ್ಲಿ ಪತಿಯ ಒತ್ತಾಯದ ಮೇರೆಗೆ ಸೌಥ್ ಇಂಡಿಯಾ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದಾಗಿ ಹೇಳಿದ್ದಾರೆ.

  ತನ್ನ ಪತಿ ಬಾಲಾಜಿ ಪೋತುರಾಜು ಹಾಗೂ ಮಾವ ಇಬ್ಬರೂ ಮದ್ಯ ಸರಬರಾಜು ವ್ಯಾಪಾರಿಗಳಾಗಿದ್ದು, ದೊಡ್ಡ ಮಟ್ಟದ ವ್ಯವಹಾರವನ್ನು ಆ ಬ್ಯಾಂಕ್‌ನೊಂದಿಗೆ ಇಟ್ಟುಕೊಂಡಿದ್ದಾರೆ. ಆ ಬ್ಯಾಂಕ್‌ಗೆ ಅವರು ಮಹತ್ವದ ವಿಐಪಿ ಗ್ರಾಹಕ ಆಗಿರುವ ಕಾರಣ ಅಲ್ಲಿನ ಮ್ಯಾನೇಜರ್ ಸಹ ಅವರ ಅವರ ಹೇಳಿದಂತೆಯೇ ನಡೆದುಕೊಳ್ಳುತ್ತಾರೆ ಎಂದಿದ್ದಾರೆ ನಟಿ ಚೈತ್ರಾ.

  ಸಹಿ ನಕಲು ಮಾಡಿ ವಂಚನೆ: ಚೈತ್ರಾ ಆರೋಪ

  ಸಹಿ ನಕಲು ಮಾಡಿ ವಂಚನೆ: ಚೈತ್ರಾ ಆರೋಪ

  ''ನಾನು ಮೈಸೂರಿನಲ್ಲಿದ್ದಾಗ ನನ್ನ ಪತಿ ಹಾಗೂ ಮಾವ ಅವರ ನಗದು ಹಣವನ್ನು ನನ್ನ ಖಾತೆಗೆ ಜಮಾ ಮಾಡಿ ಅಲ್ಲಿಂದ ಡ್ರಾ ಮಾಡುತ್ತಿದ್ದರು. ನನ್ನ ಅನುಮತಿ ಇಲ್ಲದೆ, ನನಗೆ ತಿಳಿಸದೆ ನನ್ನ ಖಾತೆಯನ್ನು ಅವರ ಹಣದ ವರ್ಗಾವಣೆಗೆ ಹಲವು ವರ್ಷಗಳ ಕಾಲ ಬಳಸಿಕೊಂಡರು. ನನ್ನ ಪತಿಗೆ ನನ್ನ ಸಹಿಯನ್ನು ನಕಲು ಮಾಡಿ ನನ್ನ ಖಾತೆ ಬಳಸುವ ಅಭ್ಯಾಸವೇ ಆಗಿಬಿಟ್ಟಿದೆ'' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಚೈತ್ರಾ.

  ತಮ್ಮ ಅಕೌಂಟೆಂಟ್‌ನ ಮೊಬೈಲ್ ಸಂಖ್ಯೆ ನೀಡಿದ್ದಾರೆ: ಚೈತ್ರಾ

  ತಮ್ಮ ಅಕೌಂಟೆಂಟ್‌ನ ಮೊಬೈಲ್ ಸಂಖ್ಯೆ ನೀಡಿದ್ದಾರೆ: ಚೈತ್ರಾ

  2014 ರಲ್ಲಿ ನಾನು ಮೈಸೂರಿನಿಂದ ಬೆಂಗಳೂರಿಗೆ ವಾಸ್ತವ್ಯ ಬದಲಾಯಿಸಿದಾಗಿನಿಂದಲೂ ನಾನು ಮೈಸೂರಿನ ಸೌಥ್ ಇಂಡಿಯಾ ಬ್ಯಾಂಕ್‌ನಲ್ಲಿ ವ್ಯವಹಾರವೇ ನಡೆಸಿಲ್ಲ. ಅಲ್ಲದೆ ಬ್ಯಾಂಕ್‌ಗೂ ಸಹ ಭೇಟಿ ನೀಡಿಲ್ಲ. ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕಾಗದ ಪತ್ರಗಳಿಗೂ ನಾನು ಸಹಿ ಹಾಕಿಲ್ಲ. ಆರ್‌ಬಿಐನಿಂದ ಕೆವೈಸಿ ಕಡ್ಡಾಯ ಮಾಡಿದಾಗಲೂ ಸಹ ನನ್ನ ಪತಿ ನನ್ನ ಬ್ಯಾಂಕ್ ಖಾತೆಗೆ ಅವರ ಅಕೌಂಟೆಟ್ ಮೊಬೈಲ್ ಸಂಖ್ಯೆ ನೀಡಿ ಕೆವೈಸಿ ಪೂರ್ಣ ಮಾಡಿಸಿದ್ದಾರೆ. ನನ್ನ ಬ್ಯಾಂಕ್ ಖಾತೆಗೆ ನನ್ನ ಮೊಬೈಲ್ ಸಂಖ್ಯೆ ಬದಲು ಬೇರೆಯವರ ಮೊಬೈಲ್ ಸಂಖ್ಯೆ ನೀಡಲಾಗಿದೆ.

  ಕೆಲವು ಪತ್ರಗಳಿಗೆ ಸಹಿ ಹಾಕಿಸಿಕೊಳ್ಳಲು ಯತ್ನ

  ಕೆಲವು ಪತ್ರಗಳಿಗೆ ಸಹಿ ಹಾಕಿಸಿಕೊಳ್ಳಲು ಯತ್ನ

  ಈ ಎಲ್ಲದರ ಬಗ್ಗೆ ನನಗೆ ಮಾಹಿತಿ ಸಹ ಇರಲಿಲ್ಲ. ಆದರೆ ಇತ್ತೀಚೆಗೆ ಫ್ಯಾಮಿಲಿ ಕೋರ್ಟ್ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ನನ್ನ ಬ್ಯಾಂಕ್ ಸ್ಟೇಟ್‌ಮೆಂಟ್ ಸಲ್ಲಿಕೆ ಮಾಡಬೇಕಾಗಿದ್ದ ಕಾರಣ ಬ್ಯಾಂಕ್‌ಗೆ ಭೇಟಿ ನೀಡಿದ್ದೆ. ಸ್ಟೇಟ್‌ಮೆಂಟ್ ಕೊಡಿರೆಂದು ಕೇಳಿದಾಗ ಬ್ಯಾಂಕ್ ಮ್ಯಾನೇಜರ್‌ ನನ್ನಿಂದ ಕೆಲವು ಕಾಗದ ಪತ್ರಗಳಿಗೆ ಸಹಿ ಹಾಕಿಸಿಕೊಳ್ಳಲು ಯತ್ನಿಸಿದರು. ಆದರೆ ನಾನು ಸಹಿ ಹಾಕಲಿಲ್ಲ. ನಂತರ ಕೆಲವು ದಾಖಲೆಗಳನ್ನು ನೀಡಿದರು. ಅದನ್ನು ಕಂಡು ನನಗೆ ಆಶ್ಚರ್ಯವಾಯಿತು ಎಂದಿದ್ದಾರೆ ಚೈತ್ರಾ.

  ಅನುಮತಿ ಇಲ್ಲದೆ 13 ಲಕ್ಷ ಮೌಲ್ಯದ ಚಿನ್ನದ ಸಾಲ ನವೀಕರಣ

  ಅನುಮತಿ ಇಲ್ಲದೆ 13 ಲಕ್ಷ ಮೌಲ್ಯದ ಚಿನ್ನದ ಸಾಲ ನವೀಕರಣ

  ನನ್ನ ಪತಿ ನನ್ನ ಅನುಮತಿ ಇಲ್ಲದೆ 13 ಲಕ್ಷದ ಚಿನ್ನದ ಸಾಲವನ್ನು ಪಡೆದುಕೊಂಡಿದ್ದಾರಲ್ಲದೆ, ಪ್ರತಿ ವರ್ಷವೂ ಅದನ್ನು ರಿನೀವಲ್ ಮಾಡಿಸುತ್ತಲೇ ಬಂದಿದ್ದಾರೆ ಅದೂ ನನ್ನ ಬ್ಯಾಂಕ್ ಖಾತೆಯ ಮೂಲಕ. ನನ್ನ ಸಹಿಯನ್ನು ಫೋರ್ಜರಿ ಮಾಡಿರುವುದಲ್ಲದೆ ಬ್ಯಾಂಕ್ ಮ್ಯಾನೇಜರ್ ಅನ್ನು ತಮ್ಮ ಅಕ್ರಮದಲ್ಲಿ ಬಳಸಿಕೊಂಡಿದ್ದಾರೆ ಎಂದು ಚೈತ್ರಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

  English summary
  Kannada movie actress Chaithra Hallikeri gave complaint against her husband and father in law for forging her signature in bank.
  Tuesday, May 24, 2022, 11:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X