Exclusive: ನಡತೆಗೆಟ್ಟವಳು ಎಂದಿದ್ದಾರೆ, ಕೊಲೆ ಬೆದರಿಕೆ ಹಾಕಿದ್ದಾರೆ: ವಿವಾದದ ಬಗ್ಗೆ ಚೈತ್ರಾ ಪ್ರತಿಕ್ರಿಯೆ
ನಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟೂರು ಮದುವೆ ಈಗ ವಿವಾದದಲ್ಲಿ ಸಿಲುಕಿದೆ. ನಿನ್ನೆ (ಮಾರ್ಚ್ 28) ಬೆಳಗ್ಗೆ ಬೆಂಗಳೂರಿನ ದೇವಸ್ಥಾನದಲ್ಲಿ ಮಂಡ್ಯ ಮೂಲದ ನಾಗಾರ್ಜುನ್ ಎನ್ನುವವರ ಜೊತೆ ಮದುವೆಯಾಗಿದ್ದ ಚೈತ್ರಾ ರಾತ್ರಿ ವೇಳೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ.
Recommended Video
ಚೈತ್ರಾ ನಾಗಾರ್ಜುನನನ್ನು ಬಲವಂತವಾಗಿ ಮದುವೆ ಆಗಿದ್ದಾರೆ, ಸಂಘಟನೆಯವರನ್ನು ಕರೆಸಿ ದೇವಸ್ಥಾನದಲ್ಲಿ ಕೂಡಿಹಾಕಿ ತಾಳಿಕಟ್ಟಿಸಿಕೊಂಡಿದ್ದಾರೆ, ಚೈತ್ರಾ ಜೊತೆ ಬದುಕಲು ನಾಗಾರ್ಜುನನಿಗೆ ಇಷ್ಟ ಇಲ್ಲ ಎಂದು ನಾಗಾರ್ಜುನ್ ಕಡೆಯವರು ತಗಾದೆ ತೆಗೆದಿದ್ದರು. ಈ ಬಗ್ಗೆ ಈಗ ಸ್ವತಃ ಚೈತ್ರಾ ಕೊಟೂರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಫಿಲ್ಮಿ ಬೀಟ್ ಕನ್ನಡದ ಜೊತೆ ಮಾತನಾಡಿದ ಚೈತ್ರಾ, ನಿನ್ನೆ (ಮಾರ್ಚ್ 28) ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. ಮುಂದೆ ಓದಿ..

ಮದುವೆಗೆ ನಾಗಾರ್ಜುನ್ ಮನೆಯವರ ಒಪ್ಪಿಗೆ ಇರಲಿಲ್ಲ
'ನಾಗಾರ್ಜುನ್ ಮನೆಯವರಿಗೆ ಮದುವೆ ಆಗುವುದು ಇಷ್ಟ ಇರಲಿಲ್ಲ. ಮೊದಲಿನಿಂದನೂ ಮದುವೆ ವಿರೋಧಿಸುತ್ತಿದ್ದರು. ನಾಗಾರ್ಜನ್ ಕೂಡ ಒಂದೊಂದು ಸರಿ ಒಂದೊಂದು ರೀತಿ ಆಡುತ್ತಿದ್ದರು. ಒಮ್ಮೆ ಪ್ರೀತಿಸುತ್ತೇನೆ ಎನ್ನುತ್ತಿದ್ದರು, ಮತ್ತೊಮ್ಮೆ ಮನೆಯವರು ಏನಾದರು ಹೇಳಿದರೆ ಮಾತನಾಡುತ್ತಿರಲಿಲ್ಲ. ಹಾಗಾಗಿ ಹೀಗೆ ಬಿಟ್ಟರೆ ಆಗಲ್ಲ ಎಂದು ಮದುವೆ ಆಗುವ ನಿರ್ಧಾರ ಮಾಡಿದೆವು. ಸಂಘಟನೆಯವರ ಸಮ್ಮುಖದಲ್ಲಿ ಇಬ್ಬರು ಮದುವೆ ಆದೆವು' ಎಂದಿದ್ದಾರೆ.

ನಡತೆಗೆಟ್ಟವಳು ಎಂದಿದ್ದಾರೆ, ಕೊಲೆ ಬೆದರಿಕೆ ಹಾಕಿದ್ದಾರೆ
'ಮದುವೆ ಆಗುತ್ತಿದ್ದಂತೆ ನಾಗಾರ್ಜುನ್ ಮನೆಯವರೆಲ್ಲರೂ ಬೆಂಗಳೂರಿಗೆ ಬಂದರು. ಬರುತ್ತಿದ್ದಂತೆ ಅವರ ಕಡೆಯವರೆಲ್ಲ ಗಲಾಟೆ ಮಾಡಲು ಪ್ರಾರಂಭಿಸಿದರು. ನಡತೆ ಗೆಟ್ಟವಳು, ಸಿನಿಮಾದವಳು ಎಂದು ಬಾಯಿಗೆ ಬಂದ ಹಾಗೆ ಬೈದು, ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದರು. ಬಳಿಕ ಇಲ್ಲಿ ಮಾತನಾಡುವುದು ಬೇಡ, ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಕೋಲಾರಕ್ಕೆ ಹೋರಟು ಹೋದೆವು'

ಅಣ್ಣನ ಮೇಲೆ ಕೈಮಾಡಿ, ತಂದೆ-ತಾಯಿಯನ್ನು ತಳ್ಳಾಡಿದ್ದಾರೆ
ಕೋಲಾರಕ್ಕೆ ಹೋಗುತ್ತಿದ್ದಂತೆ ನಾಗಾರ್ಜುನ್ ಮನೆಯವರು ಜೋರಾಗಿ ಗಲಾಟೆ ಶುರುಮಾಡಿದರು. ಮಾತುಕತೆಗೆ ಅಂತ ಬಂದವರು ಗಲಾಟೆ ಪ್ರಾರಂಭಿಸಿದರು. ರಸ್ತೆಯಲ್ಲೇ ಜೋರಾಗಿ ಕೂಗಾಡಿ, ನನ್ನ ಅಣ್ಣನಿಗೆ ಹೊಡೆಯಲು ಪ್ರಾರಂಭಿಸಿದ್ರು. ಅಪ್ಪ-ಅಮ್ಮನನ್ನು ತಳ್ಳಾಡಿ ಗಲಾಟೆ ಮಾಡಿದ್ದಾರೆ. ಅವರ ತಂದೆ ನನ್ನ ಮಗನ ತಂಟೆಗೆ ಬಂದರೆ ಇಲ್ಲ ಎನ್ನುವ ಹಾಗೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ' ಎಂದು ಚೈತ್ರಾ ಹೇಳಿದ್ದಾರೆ.

ನಾಗಾರ್ಜುನ್ ಸಹೋದರಿಯ ಅವಾಜ್
'ನಾಗಾರ್ಜುನ್ ಸಹೋದರಿ ಮಾತನಾಡಿ, ತಮ್ಮನ ಜೊತೆ ಹೇಗೆ ಸಂಸಾರ ಮಾಡುತ್ತಿಯಾ ಎಂದು ನೋಡುತ್ತೇನೆ. ನೀನು ಬಣ್ಣ ಹಚ್ಚುವವಳು, ಸರಿ ಇಲ್ಲ ಎಂದು ರಸ್ತೆಯಲ್ಲೇ ನಿಂತು ಜೋರಾಗಿ ಕೂಗಾಡಿದ್ರು. ಅವರ ಕಡೆಯವರು ಮಂಡ್ಯಗೆ ಬಂದರೆ ನೋಡಿಕೊಳ್ಳುತ್ತೀವಿ ಅಂತ ಅವಾಜ್ ಹಾಕಿದ್ದಾರೆ'

ಪೋಲಿಸರಿಗೆ ದೂರು ನೀಡಿದೆ
ಇಷ್ಟೆಲ್ಲ ಆದಮೇಲೆ ಮಹಿಳಾ ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ನೀಡಿದ್ದೀನಿ. ಕೊಲೆ ಬೆದರಿಕೆ , ತಳ್ಳಾಟ, ಹೊಡೆದಾಟ, ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ ಎಂದು ದೂರು ನೀಡಿದ್ದೀನಿ. ಆದರೆ ಅವರು ಬುಧವಾರದ ವರೆಗೂ ಸಮಯ ನೀಡಿದ್ದಾರೆ. ಮಾತುಕತೆ ಮಾಡಿಕೊಂಡು ಬನ್ನಿ ಎಂದಿದ್ದಾರೆ.

ನಾಗಾರ್ಜುನನನ್ನು ಬ್ರೈನ್ ವಾಶ್ ಮಾಡಿದ್ದಾರೆ
ಕೂಡಿಹಾಕಿ ಮದುವೆ ಆಗಲಿಕ್ಕೆ ಅವನೇನು ಚಿಕ್ಕವನಾ ಅವನಿಗೆ ಗೊತ್ತಾಗಲ್ವಾ ಎಂದು ಚೈತ್ರಾ ಪ್ರಶ್ನಿಸಿದ್ದಾರೆ. ನಾಗಾರ್ಜುನನನ್ನು ಸಂಪೂರ್ವಾಗಿ ಬ್ರೈನ್ ವಾಶ್ ಮಾಡಿದ್ದಾರೆ. ಕುಟುಂಬದವರು ಹೀಗೆ ಹೇಳು ಎಂದು ಹೇಳಿಕೊಟ್ಟಿದ್ದಾರೆ ಹಾಗಾಗಿ ಅವನು ಹೀಗೆ ಮಾಡುತ್ತಿದ್ದಾರೆ. ಒಂದು ವರ್ಷದಿಂದ ಪ್ರೀತಿಸಿದ್ದೇನೆ ಅವನ ಬಗ್ಗೆ ಗೊತ್ತು ಎನ್ನುತ್ತಾರೆ ಚೈತ್ರಾ.

ನಾನು ಅವನ ಜೊತೆಯೇ ಸಂಸಾರ ಮಾಡುತ್ತೇನೆ
ಮಾತಕತೆ ಮೂಲಕ ಬಗೆಹರಿಸಿಕೊಳ್ಳಲು ಸಿದ್ಧರಿದ್ದೀರಾ ಎಂದು ಕೇಳಿದ್ರೆ, 'ನಾಗಾರ್ಜುನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದು ಹಾಗಾಗಿ ನಾನು ಅವರ ಪತ್ನಿಯಾಗಿ ಅವರ ಜೊತೆಯೇ ಇರುತ್ತೇನೆ' ಎಂದು ಚೈತ್ರಾ ಹೇಳಿದ್ದಾರೆ.


Click it and Unblock the Notifications