Just In
Don't Miss!
- Lifestyle
ಭಾನುವಾರದ ದಿನ ಭವಿಷ್ಯ 15-12-2019
- News
ಆಟಿಕೆ ಬಂದೂಕು ತೋರಿಸಿ ಮುಖ್ಯಮಂತ್ರಿ ಅಣ್ಣನನ್ನೇ ಅಪಹರಿಸಿದ ಐನಾತಿಗಳು
- Finance
ಫಾಸ್ಟ್ಟ್ಯಾಗ್ ಡೆಡ್ಲೈನ್ಗೆ ಸ್ವಲ್ಪ ವಿನಾಯಿತಿ
- Sports
ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ
- Technology
ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ನಟಿ ಚೈತ್ರಾ

ಖುಷಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಭರವಸೆ ನಾಯಕಿ ಎಂದೇ ಹೆಸರು ಪಡೆದುಕೊಂಡಿದ್ದ ನಟ ಚೈತ್ರಾ ಪೋತ್ ರಾಜ್ ಮದುವೆ ಆಗಿ ಸಿನಿಮಾರಂಗದಿಂದ ದೂರ ಸರಿದಿದ್ದರು. ಬೆರೆಳೆಣಿಕೆ ಸಿನಿಮಾಗಳಲ್ಲಿ ಅಭಿನಯಿಸಿದ ನಂತರ ಲಿಕ್ಕರ್ ಬ್ಯುಸಿನೆಸ್ ಮ್ಯಾನ್ ಬಾಲಾಜಿ ಅವರನ್ನ ಚೈತ್ರಾ ಮದುವೆ ಆಗಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು.
ಮದುವೆ ನಂತರ ಸಿನಿಮಾ ಲೈಫ್ ಗೆ ಗುಡ್ ಬಾಯ್ ಹೇಳಿ ನಮ್ಮ ಸಂಸಾರ ಆನಂದ ಸಾಗರ ಎನ್ನುವಂತೆ ಜೀವನದ ಸೆಕೆಂಡ್ ಆಫ್ ಅನ್ನು ಸುಂದರವಾಗಿ ಕಟ್ಟಿಕೊಂಡಿದ್ದರು ಚೈತ್ರ ಮತ್ತು ಬಾಲಾಜಿ. ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ ಒಂದು ಗಂಡು ಮತ್ತೊಂದು ಹೆಣ್ಣು ಮಗು ಕೂಡ ಇದೆ. ಮಕ್ಕಳು ದೊಡ್ಡವರಾದ ನಂತರ ಚೈತ್ರ ತಮ್ಮ ಸೆಕೆಂಡ್ ಇನ್ನಿಂಗ್ಸ್ ಅನ್ನು ಕಿರುತೆರೆಯಲ್ಲಿ ಆರಂಭ ಮಾಡಿದ್ದರು.
2017ರಲ್ಲಿ ಒಂದಾದ ಮತ್ತು ಬೇರ್ಪಟ್ಟ ಸಿನಿಮಾ ತಾರೆಯರು
ಕಿಚ್ಚನ ಮಡದಿಯ ನಿರ್ಮಾಣ ಸಂಸ್ಥೆಯಲ್ಲಿ ಅಡುಗೆ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು .ಎಲ್ಲವೂ ಚೆನ್ನಾಗಿದೆ ಎನ್ನುವಾಗ ಒಮ್ಮೆಲೆ ಚೈತ್ರಾ ನನಗೆ ವಿಚ್ಛೇದನ ಬೇಕು ಎಂದು ಕೋರ್ಟ್ ಮೆಟ್ಟಿಲು ತುಳಿಯಲು ಸಿದ್ದರಾಗಿದ್ದಾರೆ. ತನ್ನ ಪತಿಯಿಂದ ನಿತ್ಯ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ಪೋಲಿಸರಿಗೆ ದೂರು ಕೊಟ್ಟಿದ್ದಾರೆ. ಹಾಗಾದ್ರೆ ಚೈತ್ರ ವಿಚ್ಛೇದನ ಕೇಳಲು ಕಾರಣವೇನು? ದೂರನಲ್ಲಿದಾಖಲು ಮಾಡಿರುವ ಅಂಧಗಳು ಯಾವುದು ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಖುಷಿ ನಟಿಯ ಬಾಳಲ್ಲಿ ಇಲ್ಲವಾಯ್ತು ಸಂತೋಷ
'ಖುಷಿ' ಹಾಗೂ 'ಶಿಷ್ಯ' ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಸಿನಿಮಾ ಪ್ರೇಕ್ಷಕರ ಮಧ್ಯೆ ಗುರುತಿಸಿಕೊಂಡಿದ್ದ ನಟಿ ಚೈತ್ರಾ ಪೋತರಾಜ್ ತಮ್ಮ ಐದು ವರ್ಷದ ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಡಲು ಮುಂದಾಗಿದ್ದಾರೆ. ಪತಿ ಬಾಲಾಜಿ ವಿರುದ್ದ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದಾರೆ.

ಅನುಮಾನದಿಂದ ಬೇಸತ್ತ ನಟಿ
2006ರಲ್ಲಿ ಚೈತ್ರಾ ಲಿಕ್ಕರ್ ಬ್ಯುಸಿನೆಸ್ ಮ್ಯಾನ್ ಬಾಲಾಜಿ ಪೋತರಾಜ್ ನನ್ನ ಪ್ರೀತಿಸಿ ಮದುವೆಯಾಗಿದ್ರು. ಈ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಆದರೆ ಬಾಲಾಜಿಗೆ ಪತ್ನಿ ಸಿನಿಮಾ ನಟಿಯಾಗಿದ್ರಿಂದ ಸಿಕ್ಕಾಪಟ್ಟೆ ಅನುಮಾನವಿತ್ತಂತೆ. ಎಲ್ಲಿಗೆ ಹೋದರು ಆಕೆಯೊಂದಿಗೆ ಗನ್ ಮ್ಯಾನ್ ನನ್ನ ಕಳುಹಿಸ್ತಿದ್ದರಂತೆ. ಹೀಗಾಗಿ ಪತಿಯ ಕಾಟದಿಂದ ಬೇಸತ್ತಿದ್ದಾರಂತೆ ನಟಿ ಚೈತ್ರಾ.

ಅಮೂಲ್ಯ ಎನ್ನುವವರ ಜೊತೆ ಸಂಬಂಧ
ಅಷ್ಟೇ ಅಲ್ಲದೆ ಅಮೂಲ್ಯ ಅನ್ನೋ ಯುವತಿಯೊಂದಿಗೆ ಪತಿ ಬಾಲಾಜಿ ಅಕ್ರಮ ಸಂಬಂಧ ಇಟ್ಕೊಂಡಿದ್ದಾರೆ ಎಂದು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಚೈತ್ರಾ. ಪತಿ ನನ್ನ ಸಂಪಾದನೆಯ ಹಣವನ್ನೂ ಪಡೆದು ಅಕ್ರಮಸಂಬಂಧ ಇರುವ ಯುವತಿಗೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರತಿನಿತ್ಯ ಹೊಡೆಯುತ್ತಿದ್ದ ಪತಿ ಬಾಲಾಜಿ
ಚೈತ್ರಾ ಮದುವೆ ಆಗುವ ಸಂದರ್ಭದಲ್ಲಿಯೇ ಸಿನಿಮಾಗಳಲ್ಲಿ ಅಭಿನಯಿಸಬಾರದು ಎಂದು ಮಾತಾಗಿರುತ್ತದೆ. ಅದರಂತೆ ಚೈತ್ರಾ ಅಭಿನಯಕ್ಕೆ ವಿದಾಯ ಹೇಳಿದ್ದರು. ಇತ್ತೀಚಿನ ದಿನಗಳಲ್ಲಿ ತವರು ಮನೆಯವರ ಸಹಾಯದಿಂದ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದರು ಅಂದಿನಿಂದ ಬಾಲಾಜಿ ಅವರು ಮಾನಸಿಕ ಹಾಗೂ ದೈಹಿಕವಾಗಿ ಚೈತ್ರಾ ಅವರಿಗೆ ಹಿಂಸೆ ನೀಡಲು ಶುರು ಮಾಡಿದ್ದಾರೆ. ಸಾಕಷ್ಟು ಸಲ ಚೈತ್ರಾ ಅವರ ಮೇಲೆ ಕೈ ಮಾಡಿದ್ದು ಹಲವು ಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ.