For Quick Alerts
  ALLOW NOTIFICATIONS  
  For Daily Alerts

  ವಿಷ್ಣು ಜತೆ 'ಸಕ್ಕರೆ' ಹಂಚಿಕೊಂಡಿದ್ದವರೀಗ 'ಕೆಂಡಸಂಪಿಗೆ'

  By Harshitha
  |

  ಸೂಪರ್ ಹಿಟ್ ಸಿನಿಮಾ 'ಚೆಲುವೆ ನೀನು ನಕ್ಕರೆ' ಸಿನಿಮಾ ನೆನಪಿದೆಯಾ..? ಚಿತ್ರದಲ್ಲಿ ಚಂದ್ರಿಕಾ ತುಟಿ ಅಂಚಲ್ಲಿ ಮೂಡುವ ನಗು ನೋಡಿ, ಸಾಹಸಸಿಂಹ ಡಾ.ವಿಷ್ಟುವರ್ಧನ್ ಹಾಡುವ ಹಾಡು ಹೇಗೆ ತಾನೆ ಮರೆಯೋಕೆ ಸಾಧ್ಯ ಹೇಳಿ...

  ಡಾ.ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಷ್, ಅನಂತ್ ನಾಗ್, ಶಂಕರ್ ನಾಗ್...ಹೀಗೆ ಒಂದ್ಕಾಲದ ಎಲ್ಲಾ ಟಾಪ್ ನಟರ ಜೊತೆ ತೆರೆಹಂಚಿಕೊಂಡಿದ್ದ ಚಂದ್ರಿಕಾ ಇದೀಗ ವರ್ಷಗಳ ನಂತ್ರ ಮತ್ತೆ ನಿಮ್ಮೆಲ್ಲರ ಮುಂದೆ ಬಂದು ನಿಂತಿದ್ದಾರೆ. [ಐಟಂ ಸಾಂಗ್ ಮೂಲಕ ಚಂದ್ರಿಕಾ ಸೆಕೆಂಡ್ ಇನ್ನಿಂಗ್ಸ್]

  'ಬಿಗ್ ಬಾಸ್' ಮತ್ತು 'ಡ್ಯಾನ್ಸಿಂಗ್ ಸ್ಟಾರ್-2' ಮೂಲಕ ಮತ್ತೆ ಕನ್ನಡ ಸಿನಿ ಪ್ರಿಯರಿಗೆ ಹತ್ತಿರವಾಗಿರುವ ಚಂದ್ರಿಕಾಗೆ ಮತ್ತೆ ಬೆಳ್ಳಿತೆರೆ ಮೇಲೆ ಮಿಂಚುವ ಆಸಕ್ತಿ ಇದೆ. ಆದ್ರೆ, ಪಾತ್ರಗಳ ಆಯ್ಕೆ ಬಗ್ಗೆ ತುಂಬಾ ಚ್ಯೂಸಿಯಾಗಿರುವ ಚಂದ್ರಿಕಾ, ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳುತ್ತಿಲ್ಲ.

  ಹೊಸಬರಿಗೆ ಸಪೋರ್ಟ್ ಮಾಡುವ ಸಲುವಾಗಿ 'ಚತುರ್ಭುಜ' ಚಿತ್ರದ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದ ಚಂದ್ರಿಕಾ ಇದೀಗ ದುನಿಯಾ ಸೂರಿ ನಿರ್ದೇಶನದ 'ಕೆಂಡಸಂಪಿಗೆ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

  ಬಹುತೇಕ ಹೊಸಬರೇ ತುಂಬಿರುವ 'ಕೆಂಡಸಂಪಿಗೆ' ಚಿತ್ರದಲ್ಲಿ ಚಂದ್ರಿಕಾರದ್ದು ತುಂಬಾ ಪವರ್ ಫುಲ್ ರೋಲ್. ತಮ್ಮ ಎಂದಿನ ಕಾರ್ಪರೇಟ್ ಲುಕ್ ನಲ್ಲಿ ಚಂದ್ರಿಕಾ 'ಕೆಂಡಸಂಪಿಗೆ' ಚಿತ್ರದಲ್ಲಿ ಮಿಂಚಿದ್ದಾರೆ. ಆದ್ರೆ, ಅವರ ಪಾತ್ರ ಪರಿಚಯವನ್ನ ಸೂರಿ ಸಾಹೇಬ್ರು ಇನ್ನೂ ಗುಟ್ಟಾಗಿಟ್ಟಿದ್ದಾರೆ. [ದುನಿಯಾ ಸೂರಿ 'ಕೆಂಡಸಂಪಿಗೆ'ಯಲ್ಲಿ ಅಂಥದ್ದೇನಿದೆ..?]

  ದುನಿಯಾ ಸೂರಿ ಮೇಕಿಂಗ್ ಶೈಲಿ ಬಗ್ಗೆ ತಿಳಿದಿದ್ದ ಚಂದ್ರಿಕಾ 'ಕೆಂಡಸಂಪಿಗೆ' ಚಿತ್ರವನ್ನ ಓಕೆ ಮಾಡಿದ್ರಂತೆ. ಅಂತೂ ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿರುವ ಚಂದ್ರಿಕಾ ಹಳೇ ಫಾರ್ಮ್ ಗೆ ಮರಳಿದ್ದಾರೆ.

  English summary
  Kannada Actress Chandrika is Back Again. After gaining popularity in Bigg Boss and Dancing Star-2, the Actress has bagged an important role in Duniya Soori's upcoming directorial venture 'Kendasampige'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X