For Quick Alerts
  ALLOW NOTIFICATIONS  
  For Daily Alerts

  ತೂಕ ಇಳಿಸಿಕೊಂಡ ಪಡುವಾರಳ್ಳಿ ಪಾಂಚಾಲಿ ಚಾರ್ಮಿ

  By ಅನಂತರಾಮು, ಹೈದರಾಬಾದ್
  |

  ದಕ್ಷಿಣದ ಬೆಡಗಿ ಚಾರ್ಮಿ ಕೌರ್ ತೂಕದಲ್ಲಿ ಭಾರಿ ಇಳಿಕೆಯಾಗಿದೆ. ಈಗ ಅವರ ದೇಹದ ತೂಕ ಹೂವಿನಷ್ಟೇ ಹಗುರವಂತೆ. ಇತ್ತೀಚೆಗೆ ಚಾರ್ಮಿ ಅಭಿನಯದ 'ಪ್ರೇಮ ಮೈಕಂ' ಎಂಬ ಚಿತ್ರದಲ್ಲಿ ನಟಿ ನಮಿತಾ ಅವರ ಗಾತ್ರಕ್ಕೆ ಸರಿಸಮನಾಗಿ ಕಾಣಿಸಿಕೊಂಡಿದ್ದರು.

  ಈಗ ಸಾಕಷ್ಟು ವರ್ಕ್ ಔಟ್ ಮಾಡಿ ತಮ್ಮ ದೇಹದ ತೂಕವನ್ನು 9 ಕೆ.ಜಿಗಳಷ್ಟು ಇಳಿಸಿಕೊಂಡಿದ್ದಾರೆ. ತೂಕ ಇಳಿಸಿಕೊಂಡು ಈಗ ಹೇಗಿದ್ದೇನೆ ನೋಡಿ ಎಂದು ತಮ್ಮ ಅದ್ಭುತ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

  ಇನ್ನು ಮುಂದೆ ರಾತ್ರಿ ಶೂಟಿಂಗ್ ಗಳಲ್ಲಿ ಚಾರ್ಮಿ ಪಾಲ್ಗೊಳ್ಳ ಎಂದು ನಿರ್ಧರಿಸಿದ್ದಾರೆ. ಈ ಹಿಂದೊಮ್ಮೆ ರಾತ್ರಿ ಚಿತ್ರೀಕರಣದಲ್ಲಿ ಕೆಲವು ಅಹಿತಕರ ಘಟನೆಗಳು ನಡೆದದ್ದೇ ಇದಕ್ಕೆ ಕಾರಣವಂತೆ. ರಾತ್ರಿ ಶೂಟಿಂಗ್ ನಲ್ಲಿ ಅದೇನಾಗುತ್ತದೋ ಏನೋ ಎಂಬುದನ್ನು ಮಾತ್ರ ಚಾರ್ಮಿ ಬಾಯ್ಬಿಟ್ಟು ಹೇಳಿಲ್ಲ.

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಯಾರೇ ಕೂಗಾಡಲಿ' ಚಿತ್ರದಲ್ಲಿ ಪಡುವಾರಳ್ಳಿ ಪಾಂಚಾಲಿ ಎಂದು ಕುಣಿದು ಪಡ್ಡೆಗಳ ಹೃದಯ ಬೆಚ್ಚಗೆ ಮಾಡಿದ ಬೆಡಗಿ ಚಾರ್ಮಿ ಕೌರ್. ಕನ್ನಡದಲ್ಲಿ ಹಾಗೆ ಬಂದು ಹೀಗೆ ಕುಣಿದು ಚಾರ್ಮಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದಕ್ಕೂ ಮುನ್ನ ಸನ್ ಆಫ್ ಮುದ್ದೇಗೌಡ ಚಿತ್ರದಲ್ಲಿ ಸೊಂಟ ಬಳುಕಿಸಿದ್ದರು.

  English summary
  Charmi hot look after losing 9 kgs weight. Charmi faced severe criticism regarding her plump look. Charmi realized the truth struggling hard on workouts for past few months. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X