ಸಿನಿಮಾದಲ್ಲಿ ಚಾನ್ಸ್ ಬೇಕು ಅಂದ್ರೆ ಮಗು ಬಲಿ ಕೊಡಬೇಕು.!
ಸಿನಿಮಾದಲ್ಲಿ ಅವಕಾಶ ಸಿಗಬೇಕು ಅಂದ್ರೆ, ನಿರ್ಮಾಪಕರು/ನಿರ್ದೇಶಕರ ಜೊತೆಗೆ ಕಾಂಪ್ರೊಮೈಸ್ ಮಾಡಿಕೊಳ್ಳಬೇಕು ಎಂಬ 'ಕಾಸ್ಟಿಂಗ್ ಕೌಚ್' ಪದ್ಧತಿ ಹೇಗೆ ತೆರೆಮರೆಯಲ್ಲಿ ಚಾಲ್ತಿಯಲ್ಲಿ ಇದ್ಯೋ, ಅದರಂತೆ ಸಿನಿಮಾದಲ್ಲಿ ಚಾನ್ಸ್ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣ ಪೀಕುವವರೂ ಗಾಂಧಿನಗರದಲ್ಲಿ ಇದ್ದಾರೆ.
ಇಲ್ಲಿಯವರೆಗೂ ಸ್ಯಾಂಡಲ್ ವುಡ್ ನಲ್ಲಿ ಹಲವಾರು ವಂಚನೆ ಪ್ರಕರಣಗಳನ್ನ ಕೇಳಿದ್ದೇವೆ, ನೋಡಿದ್ದೇವೆ. ಇದೀಗ 'ವಾಮಾಚಾರ' ಹಾಗೂ 'ಮೂಢನಂಬಿಕೆ'ಗಳ ಮೂಲಕ ಸಹ ನಟಿಯೊಬ್ಬರು ಮೋಸ ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕ್ರೇಜಿ ಸ್ಟಾರ್, ಕನಸುಗಾರ ರವಿಚಂದ್ರನ್ ರವರ ಕನಸಿನ ಕೂಸು 'ಮಂಜಿನ ಹನಿ' ಚಿತ್ರದ ಸಹ ನಿರ್ಮಾಪಕನಿಂದ ವಂಚನೆ ನಡೆದಿದೆ ಎಂದು ಸಹ ನಟಿ ಚೇತನಾ ದೂರು ನೀಡಿದ್ದಾರೆ.
ಹಾಗ್ನೋಡಿದ್ರೆ, 'ಮಂಜಿನ ಹನಿ' ಸಿನಿಮಾ ಸೆಟ್ಟೇರಿ ವರ್ಷಗಳೇ ಉರುಳಿದೆ. ಆರ್ಥಿಕ ಸಮಸ್ಯೆಯಿಂದ 'ಮಂಜಿನ ಹನಿ' ಚಿತ್ರೀಕರಣ ಅರ್ಧಕ್ಕೆ ನಿಂತು ಹೋಗಿದೆ. 'ಮಂಜಿನ ಹನಿ' ಪ್ರಾಜೆಕ್ಟ್ ಗೆ ರವಿಚಂದ್ರನ್ ಮತ್ತೆ ಯಾವಾಗ ಜೀವ ಕೊಡ್ತಾರೋ, ಗೊತ್ತಿಲ್ಲ. ಆದ್ರೆ, ಸದ್ಯಕ್ಕೆ ಮಾತ್ರ 'ಮಂಜಿನ ಹನಿ' ಸಿನಿಮಾ ವಿವಾದದ ಕೇಂದ್ರ ಬಿಂದುವಾಗಿದೆ. ಮುಂದೆ ಓದಿರಿ....

ಎಂಟುವರೆ ಲಕ್ಷ ರೂಪಾಯಿ ವಂಚನೆ
''ಮಂಜಿನ ಹನಿ' ಸಿನಿಮಾದಲ್ಲಿ ನಾಯಕನ ತಂಗಿ ಪಾತ್ರ ಕೊಡಿಸುವೆ'' ಎಂದು ನಂಬಿಸಿ ನನ್ನಿಂದ 'ಮಂಜಿನ ಹನಿ' ಚಿತ್ರದ ಸಹ ನಿರ್ಮಾಪಕ ನಾಗೇಶ್ ಎಂಟುವರೆ ಲಕ್ಷ ರೂಪಾಯಿ ಹಣ ಪಡೆದಿದ್ದಾರೆ'' ಎಂದು ಸಹ ನಟಿ ಚೇತನಾ ಆರೋಪಿಸಿದ್ದಾರೆ.

ವ್ಯವಸ್ಥಿತವಾಗಿ ವಂಚನೆ
ಸಹ ನಟಿ ಚೇತನಾ ಜೊತೆಗೆ ಸಹ ನಿರ್ಮಾಪಕ ನಾಗೇಶ್ ವಾಟ್ಸ್ ಆಪ್ ನಲ್ಲಿ 'ಮನು' ಎಂಬ ಹೆಸರಿನಲ್ಲಿ ಚಾಟಿಂಗ್ ನಡೆಸಿದ್ದರಂತೆ. ''ಗೌರಿ ಜೊತೆಗೆ ಮಾತನಾಡು, ಗೌರಿ ನಿನಗೆ ಸಹಾಯ ಮಾಡುತ್ತಾಳೆ'' ಎಂದು ನಾಗೇಶ್ ಹೇಳಿದ್ದರಂತೆ.

ಮಗು ಬಲಿ ಕೊಡಬೇಕು.!
''ನಿನಗೆ ದೋಷ ಇದೆ. ಪೂಜೆ ಮಾಡಿಸಬೇಕು, ಮಗು ಬಲಿ ಕೊಡಬೇಕು'' ಅಂತ ವಾಮಾಚಾರದ ಕಥೆ ಹೇಳಿ ಮೂರು ವರ್ಷಗಳಿಂದ ಎಂಟುವರೆ ಲಕ್ಷ ಹಣ ರೂಪಾಯಿಯನ್ನ ಚೇತನಾ ರಿಂದ ಪಡೆದಿದ್ದಾರಂತೆ ನಾಗೇಶ್ ಮತ್ತು ತಂಡ.

ದೂರು ನೀಡಿದ ಚೇತನಾ
ಮೂರು ವರ್ಷಗಳಿಂದ ವಂಚನೆಗೆ ಒಳಗಾದ ಚೇತನಾ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೊಸಕೋಟೆ ಮೂಲದ ನಾಗೇಶ್ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 419, 417, 420 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಗೇಶ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


Click it and Unblock the Notifications











