ದೀಪಾ ಸನ್ನಿಧಿ ಎಲ್ಲಿ ಹೋದ್ರು? ಮತ್ತೆ ಕಮ್ ಬ್ಯಾಕ್ ಯಾವಾಗ?
ಕನ್ನಡದ ಹೆಸರಾಂತ ನಟಿಯರಲ್ಲಿ ನಟಿ ದೀಪಾ ಸನ್ನಿಧಿ ಕೂಡ ಒಬ್ಬರು. ದೀಪಾ ಸನ್ನಿಧಿ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಈ ಮುದ್ದು ಮೊಗದ ಚೆಲುವೆ ನಾನಾ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈಗ ದೀಪಾ ಸನ್ನಿಧಿಯನ್ನು ನೆನಪಿಸಿಕೊಳ್ಳಲು ಕಾರಣ ದೀಪ ಸನ್ನಿಧಿ ಹುಟ್ಟು ಹಬ್ಬ.
ನಟಿ ದೀಪಾ ಸನ್ನಿಧಿಗೆ ಹುಟ್ಟು ಹಬ್ಬದ ಸಂಭ್ರಮ. ದೀಪಾ 32ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಆದರೆ ಅಭಿಮಾನಿಗಳ ಜೊತೆಗೆ ಆಗಲಿ, ಸಿನಿಮಾ ತಾರೆಯರ ಜೊತೆಗೆ ಆಗಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಾ ಇಲ್ಲ. ಯಾಕೆಂದರೆ ಸದ್ಯ ಚಿತ್ರರಂಗದಿಂದ ದೀಪಾ ಸನ್ನಿಧಿ ದೂರ ಉಳಿದಿದ್ದಾರೆ.
ನಟಿ ದೀಪಾ ಸನ್ನಿಧಿ ತಮ್ಮ ಪಾತ್ರಗಳ ಮೂಲಕವೇ ಜನರ ಮನಸಲ್ಲಿ ಉಳಿದಿದ್ದಾರೆ. ಆದರೆ ದೀಪಾ ಕಮ್ ಬ್ಯಾಕ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ದೀಪಾ ಸಿನಿಮಾಗಳು, ಕಮ್‌ಬ್ಯಾಕ್ ಬಗ್ಗೆ ಒಂದಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ ಮುಂದೆ ಓದಿ...

ಪರಮಾತ್ಮ ಬೆಡಗಿ ಕಲರ್‌ಫುಲ್ ಸಿನಿ ಪಯಣ!
ಮೊದಲ ಸಿನಿಮಾ 'ಸಾರಥಿ' ಚಿತ್ರೀಕರಣ ಸಮಯದಲ್ಲಿ 'ಪುನೀತ್ ರಾಜ್‌ಕುಮಾರ್' ಜೊತೆ 'ಪರಮಾತ್ಮ' ಸಿನಿಮಾಗೆ ಸಹಿ ಮಾಡಿದ್ದರು. ನಂತರ 2012ರಲ್ಲಿ ಯಶ್‌ಗೆ ಜೋಡಿಯಾಗಿ 'ಜಾನು' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಮೊದಲ ಚಿತ್ರ 'ಸಾರಥಿ'ಯೇ ದೀಪಾಗೆ ಬ್ರೇಕ್ ಕೊಟ್ಟಿತು. 'ಪರಮಾತ್ಮ', 'ಸಕ್ಕರೆ', 'ಚಕ್ರವರ್ತಿ' ದೀಪಾ ಸನ್ನಿಧಿಯ ಹಿಟ್ ಚಿತ್ರಗಳು.

ಚಿಕ್ಕಮಗಳೂರಿನ ಬೆಡಗಿ!
ಸಾರಥಿ ಬೆಡಗಿ ದೀಪಾ ಸನ್ನಿಧಿ, ಜೂನ್ 16, 1990 ಚಿಕ್ಕಮಗಳೂರಿನಲ್ಲಿ ಜನಿಸಿದರು. ತಮ್ಮ ಮುಗ್ಧ ನಟನೆಯ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದವರು. ಬೆರಳೆಣಿಕೆಯ ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ದೀಪಾ ಸನ್ನಿಧಿ ಅಪಾರ ಖ್ಯಾತಿ ಗಳಿಸಿದ್ದಾರೆ. ಮಾಡೆಲಿಂಗ್ ಮಾಡುತ್ತಿದ್ದ ದೀಪಾ ಸನ್ನಿಧಿ, ಬಳಿಕ ನಟನೆಗೆ ಬಂದರು. ಕನ್ನಡದ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಜುವೆಲರಿ ಡಿಸೈನರ್ ದೀಪಾ ಸನ್ನಿಧಿ!
ನಟನೆ, ಮಾಡಲಿಂಗ್ ಮಾತ್ರ ಅಲ್ಲ. ದೀಪಾ ಸನ್ನಿಧಿ ಜುವೆಲರಿ ಡಿಸೈನ್‌ನಲ್ಲಿ ಒಂದು ವರ್ಷದ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಅಗ್ರಿ ಕಲ್ಚರ್ ಇಂಜಿನಿಯರಿಂಗ್ ಕೂಡ ಮಾಡಿದ್ದಾರೆ. ಸಿನಿಮಾ ಮಾಡುತ್ತಲೇ ದೂರ ಶಿಕ್ಷಣದ ಮೂಲಕ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ ದೀಪಾ ಸನ್ನಿಧಿ. ಚಿಕ್ಕಮಗಳೂರಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿರುವ ದೀಪಾ ಮಾಡಲಿಂಗ್ ಕ್ಷೇತ್ರದಲ್ಲಿ ಮೊದಲು ಗುರುತಿಸಿಕೊಂಡರು.

ದೀಪಾ ಸನ್ನಿಧಿ ಕಮ್ ಬ್ಯಾಕ್ ಯಾವಾಗ?
2015ರಲ್ಲಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು ದೀಪಾ. 'ಎನಕ್ಕುಲ್ ಒರುವನ್' ಚಿತ್ರದಲ್ಲಿ ದಿವ್ಯಾ ಆಗಿ, 'ಯಚ್ಚನ್' ಸಿನಿಮಾದಲ್ಲಿ ಶ್ವೇತಾ ಆಗಿ ಮಿಂಚಿದ್ದಾರೆ. ಇನ್ನು ದೀಪಾ ಸನ್ನಿಧಿ ಕಮ್ ಬ್ಯಾ ಯಾವಾಗ ಎಂದು ಅಭಿಮಾನಿಗಳು ಕಾಯುತ್ತಾ ಇದ್ದರೆ. ಸದ್ಯ ಈ ಬಗ್ಗೆ ದೀಪಾ ಸುಳಿವು ಕೊಟ್ಟಿಲ್ಲ. ಆದರೆ ಮತ್ತೆ ಸಿನಿಮಾಗಳಲ್ಲಿ ಈಕೆಯನ್ನು ನೋಡಲು ಪ್ರೇಕ್ಷಕರು ಕಾಯ್ತಿದ್ದಾರೆ.


Click it and Unblock the Notifications











