ಬೆಕ್ಕು ಕಾಣೆಯಾಗಿದೆ ಎಂದ ದೀಪಿಕಾ ದಾಸ್: ವಾಮಾಚಾರ ಮಾಡಿರಬಹುದು ಎಂದ ಸಂಜನಾ!

'ನಾಗಿಣಿ' ಧಾರಾವಾಹಿಯಿಂದ ಜನಪ್ರಿಯತೆ ಗಳಿಸಿದ ನಟಿ ದೀಪಿಕಾ ದಾಸ್. ಬಿಗ್‌ಬಾಸ್ ಮನೆಗೂ ಹೋಗಿಬಂದ ಈ ಚೆಲುವೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರ್ತಾರೆ. ಇತ್ತೀಚೆಗೆ ಕ್ರಿಸ್‌ಗೇಲ್ ಜೊತೆ ದುಬೈನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡು ದೀಪಿಕಾ ಹಿರಿಹಿರಿ ಹಿಗ್ಗಿದ್ದರು. ಇದೀಗ ಬೆಕ್ಕು ಕಾಣೆಯಾಗಿದೆ ಹುಡುಕಿಕೊಟ್ಟವರಿಗೆ ಭರ್ಜರಿ ಬಹುಮಾನ ಎಂದು ಪೋಸ್ಟ್ ಮಾಡಿದ್ದಾರೆ.

ಬೆಕ್ಕಿನ ಫೋಟೊ ಸಮೇತ ಪೋಸ್ಟ್ ಮಾಡಿರುವ ನಟಿ ದೀಪಿಕಾ ದಾಸ್ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. "ಬೆಕ್ಕಿನ ಹೆಸರು 'ಶ್ಯಾಡೋ'. 18-02- 2023 ಶನಿವಾರ ರಾತ್ರಿ ಉಲ್ಲಾಳು ವಿಶ್ವೇಶ್ವರಯ್ಯ ಲೇಔಟ್ 3ನೇ ಬ್ಲಾಕ್‌ನಿಂದ ಬೆಕ್ಕು ಕಾಣೆ ಆಗಿದೆ. ಕಪ್ಪು ಬಣ್ಣದ ಬೆಕ್ಕು ಇದಾಗಿದ್ದು, ಕತ್ತಿನ ಸುತ್ತ ಕಂದು ಬಣ್ಣವಿರುತ್ತದೆ. ಪರ್ಷಿಯನ್ ತಳಿಯ ಗಂಡು ಬೆಕ್ಕು. ವಯಸ್ಸು 9 ತಿಂಗಳು. ಹುಡುಕಿಕೊಟ್ಟವರಿಗೆ 10-15 ಸಾವಿರ ರೂಪಾಯಿ ಬಹುಮಾನ ಕೊಡಲಾಗುವುದು" ಎಂದು ಬರೆದು ಒಂದಷ್ಟು ಮೊಬೈಲ್ ನಂಬರ್ ಹಾಕಿದ್ದಾರೆ.

Actress Deepika Das urges to help find her missing pet cat

ನಟಿ ದೀಪಿಕಾ ದಾಸ್ ಪೋಸ್ಟ್‌ಗೆ ತರಹೇವಾರಿ ಕಾಮೆಂಟ್‌ಗಳು ಬರ್ತಿವೆ. ನಟಿ ಸಂಜನಾ ಗರ್ಲಾನಿ ಕಾಮೆಂಟ್ ಮಾಡಿ "ಸಂಪೂರ್ಣ ಕಪ್ಪು ಬಣ್ಣದ ಬೆಕ್ಕು ಆಗಿದ್ದರೆ ವಾಮಚಾರ ಮಾಡಿರುತ್ತಾರೆ. ನಮ್ಮ ಕಸೀನ್ ಬಳಿ ಕೂಡ ಒಂದು ಕಪ್ಪು ಬೆಕ್ಕು ಇತ್ತು. ಯಾರೋ ಅದನ್ನು ಕದ್ದು ಬಲಿ ಕೊಟ್ಟಿದ್ದರು." ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ತಿಳಿಸಿದ್ದಾರೆ.

ಇನ್ನು ದೀಪಿಕಾ ದಾಸ್ ಪೋಸ್ಟ್‌ಗೆ ಕೆಲವರು ವ್ಯಂಗ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ. "ಈ ಬೆಕ್ಕಿಗೆ ಇರೋ ಬೆಲೆ, ಮನುಷ್ಯರ್ಗೆ ಇಲ್ವಲ್ಲಾ" ಎಂದು ಒಬ್ಬರು ಬರೆದಿದ್ದರೆ ಮತ್ತೊಬ್ಬರು "ನನ್ನತ್ರ ಬಿಳಿ ಬಣ್ಣದ ಬೆಕ್ಕು ಇದೆ. ಅದಕ್ಕೆ ಬಣ್ಣ ಬಳಿದು ತಂದು ಕೊಡುತ್ತೇನೆ, ಅರ್ಜೆಂಟ್ ಆಗಿ ಹಣ ಬೇಕು" ಎಂದಿದ್ದಾರೆ. ಜನರನ್ನು ಹುಡುಕಲು ಆಗದ ಕಾಲದಲ್ಲಿ ಬೆಕ್ಕು ಸಿಗುತ್ತಾ" ಎಂದು ಮತ್ತೊಬ್ಬರು ಬರೆದಿದ್ದಾರೆ.

Actress Deepika Das urges to help find her missing pet cat

ಇತ್ತೀಚೆಗೆ ನಟಿ ಸುಧಾರಾಣಿ ತಮ್ಮ ಏರಿಯಾದ ನಾಯಿ ಗಂಗಮ್ಮ ಕಾಣೆಯಾಗಿದ್ದಾಳೆ. ಕುಡುಕಿಕೊಡಿ ಎಂದು ಮನವಿ ಮಾಡಿದ್ದರು. ಮನೆಯಲ್ಲಿ 2 ಗೋಲ್ಡನ್ ರೆಟ್ರೀವರ್ ಶ್ವಾನಗಳನ್ನು ಸಾಕಿದ್ದಾರೆ. ಜೊತೆಗೆ ತಮ್ಮ ಏರಿಯಾದ ಬೀದಿ ನಾಯಿ ಗಂಗಮ್ಮ ಅಂದರು ಅವರಿಗೆ ವಿಶೇಷ ಅಕ್ಕರೆ. ಬಿಬಿಎಂಪಿಗೂ ಈ ಬಗ್ಗೆ ದೂರು ಕೊಟ್ಟಿದ್ದರು. 15 ದಿನಗಳ ನಂತರ ಕೆಲವರು ಗಂಗಮ್ಮನನ್ನು ಹುಡಕಲು ಸುಧಾರಾಣಿ ಅವರಿಗೆ ಸಹಾಯ ಮಾಡಿದ್ದರು. ಗಂಗಮ್ಮ ಸಿಕ್ಕಿ ಖುಷಿಯನ್ನು ನಟಿ ಹಂಚಿಕೊಂಡಿದ್ದರು. ಜೊತೆಗೆ ಸಹಾಯ ಮಾಡಿದವರಿಗೆ ಧನ್ಯವಾದ ತಿಳಿಸಿದ್ದರು.

More from Filmibeat

English summary
Actress Deepika Das urges to help find her missing pet cat. She Also announced Rs 15,000 reward for anyone who finds her shadow. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X