ಮತ್ತೆ ಕನ್ನಡಕ್ಕೆ ಬಂದ್ರು 'ಜಾಗ್ವರ್' ನಾಯಕಿ ದೀಪ್ತಿ ಸತಿ

ನಟ ನಿಖಿಲ್ ಕುಮಾರ್ ಮೊದಲ ಸಿನಿಮಾ 'ಜಾಗ್ವರ್'. ಈ ಸಿನಿಮಾಗೆ ನಾಯಕಿ ಆಗಿದ್ದು ದೀಪ್ತಿ ಸತಿ. ಇದೀಗ ಈ ನಟಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

'ಲೆಗಸಿ' ಎನ್ನುವ ಹೊಸ ಸಿನಿಮಾದಲ್ಲಿ ದೀಪ್ತಿ ಸತಿ ನಟಿಸುತ್ತಿದ್ದಾರೆ. 'ಜಾಗ್ವರ್' ಚಿತ್ರದ ನಂತರ ಮಲೆಯಾಳಂ ಭಾಷೆಯಲ್ಲಿ ಬ್ಯುಸಿಯಾಗಿದ್ದ ದೀಪ್ತಿ ಸತಿ ಕಳೆದ ವರ್ಷ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದರು. 'ರಾಜ ಮಾರ್ತಾಂಡ' ಸಿನಿಮಾದಲ್ಲಿ ಚಿರಂಜೀವಿ ಸರ್ಜಾಗೆ ಜೋಡಿಯಾಗಿದ್ದರು. ಆದರೆ, ಆ ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ. ಆ ಬಳಿಕ ವರ್ಷದ ನಂತರ ಕನ್ನಡಕ್ಕೆ ದೀಪ್ತಿ ಬಂದಿದ್ದಾರೆ.

ವಿಹಾನ್ ಗೌಡ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ದೀಪ್ತಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸಿನಿಮಾದಲ್ಲಿ ಗ್ಲಾಮರಸ್ ಪಾತ್ರದಲ್ಲಿ ದೀಪ್ತಿ ಕಾಣಿಸಿಕೊಳ್ಳುತ್ತಿದ್ದಾರೆ. ಎಂ ಸುಭಾಸ್ ಚಂದ್ರ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.

Actress Deepti Sati Playing Lead Role With Vihan Gowda

ಸುಭಾಸ್ ಈ ಹಿಂದೆ ದರ್ಶನ್ ನಟನೆಯ 'ಕುರುಕ್ಷೇತ್ರ' ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಆ ಚಿತ್ರದಲ್ಲಿ ಸುಭಾಸ್ ಸಹ ನಿರ್ದೇಶಕರಾಗಿದ್ದರು. ಇದೇ ತಿಂಗಳಿನಿಂದ ಸಿನಿಮಾದ ಚಿತ್ರೀಕರಣ ಶುರು ಆಗುತ್ತಿದೆ.

'ಪಂಚತಂತ್ರ' ಸಿನಿಮಾದ ನಂತರ ವಿಹಾನ್ 'ಲೆಟ್ಸ್ ಬ್ರೇಕ್ ಅಪ್' ಹಾಗೂ ಈ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.

More from Filmibeat

English summary
Actress Deepti Sati playing lead role with Vihan Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X