twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೆ ಕನ್ನಡಕ್ಕೆ ಬಂದ್ರು 'ಜಾಗ್ವರ್' ನಾಯಕಿ ದೀಪ್ತಿ ಸತಿ

    |

    ನಟ ನಿಖಿಲ್ ಕುಮಾರ್ ಮೊದಲ ಸಿನಿಮಾ 'ಜಾಗ್ವರ್'. ಈ ಸಿನಿಮಾಗೆ ನಾಯಕಿ ಆಗಿದ್ದು ದೀಪ್ತಿ ಸತಿ. ಇದೀಗ ಈ ನಟಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

    'ಲೆಗಸಿ' ಎನ್ನುವ ಹೊಸ ಸಿನಿಮಾದಲ್ಲಿ ದೀಪ್ತಿ ಸತಿ ನಟಿಸುತ್ತಿದ್ದಾರೆ. 'ಜಾಗ್ವರ್' ಚಿತ್ರದ ನಂತರ ಮಲೆಯಾಳಂ ಭಾಷೆಯಲ್ಲಿ ಬ್ಯುಸಿಯಾಗಿದ್ದ ದೀಪ್ತಿ ಸತಿ ಕಳೆದ ವರ್ಷ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದರು. 'ರಾಜ ಮಾರ್ತಾಂಡ' ಸಿನಿಮಾದಲ್ಲಿ ಚಿರಂಜೀವಿ ಸರ್ಜಾಗೆ ಜೋಡಿಯಾಗಿದ್ದರು. ಆದರೆ, ಆ ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ. ಆ ಬಳಿಕ ವರ್ಷದ ನಂತರ ಕನ್ನಡಕ್ಕೆ ದೀಪ್ತಿ ಬಂದಿದ್ದಾರೆ.

    'ಬ್ರೇಕಪ್' ಮಾಡಿಕೊಳ್ಳಲು ಸಿದ್ಧವಾದ 'ಕಿಸ್' ನಟಿ ಶ್ರೀಲೀಲಾ'ಬ್ರೇಕಪ್' ಮಾಡಿಕೊಳ್ಳಲು ಸಿದ್ಧವಾದ 'ಕಿಸ್' ನಟಿ ಶ್ರೀಲೀಲಾ

    ವಿಹಾನ್ ಗೌಡ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ದೀಪ್ತಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸಿನಿಮಾದಲ್ಲಿ ಗ್ಲಾಮರಸ್ ಪಾತ್ರದಲ್ಲಿ ದೀಪ್ತಿ ಕಾಣಿಸಿಕೊಳ್ಳುತ್ತಿದ್ದಾರೆ. ಎಂ ಸುಭಾಸ್ ಚಂದ್ರ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.

    Actress Deepti Sati Playing Lead Role With Vihan Gowda

    ಸುಭಾಸ್ ಈ ಹಿಂದೆ ದರ್ಶನ್ ನಟನೆಯ 'ಕುರುಕ್ಷೇತ್ರ' ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಆ ಚಿತ್ರದಲ್ಲಿ ಸುಭಾಸ್ ಸಹ ನಿರ್ದೇಶಕರಾಗಿದ್ದರು. ಇದೇ ತಿಂಗಳಿನಿಂದ ಸಿನಿಮಾದ ಚಿತ್ರೀಕರಣ ಶುರು ಆಗುತ್ತಿದೆ.

    ಚೊಚ್ಚಲ ಚಿತ್ರದಲ್ಲೇ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ಲಿಪ್ ಲಾಕ್ ಭಾಗ್ಯ!ಚೊಚ್ಚಲ ಚಿತ್ರದಲ್ಲೇ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ಲಿಪ್ ಲಾಕ್ ಭಾಗ್ಯ!

    'ಪಂಚತಂತ್ರ' ಸಿನಿಮಾದ ನಂತರ ವಿಹಾನ್ 'ಲೆಟ್ಸ್ ಬ್ರೇಕ್ ಅಪ್' ಹಾಗೂ ಈ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.

    English summary
    Actress Deepti Sati playing lead role with Vihan Gowda.
    Thursday, January 23, 2020, 16:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X