ಮೀ ಟೂ ಅಭಿಯಾನಕ್ಕೆ ಬೆಂಬಲ ಸೂಚಿಸಿದ ಧನ್ಸಿಕಾ
ದೇಶದೆಲ್ಲಡೆ ಸದ್ಯ ಚರ್ಚೆಯ ವಿಷಯ ಆಗಿರುವ ಮೀ ಟೂ. ಈ ಬಗ್ಗೆ ಅನೇಕ ನಟಿಯರು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ನಟಿ ಧನ್ಸಿಕಾ ಕೂಡ ಈ ಬಗ್ಗೆ ಮಾತನಾಡಿದ್ದಾರೆ.
''ಮೀ ಟೂ ಎನ್ನುವುದು ಒಳ್ಳೆಯ ವಿಷಯ. ಮಹಿಳೆಗೆ ಗೌರವ ನೀಡುವುದು ಬಹಳದ ಅಗತ್ಯವಾಗಿದೆ. ಹೆಣ್ಣು ಜನ್ಮ ನೀಡುತ್ತಾಳೆ ಎನ್ನುವ ಕಾರಣಕ್ಕೆ ಅಲ್ಲ. ಮಹಿಳೆ ಎಂದ ಮೇಲೆ ಆಕೆಗೆ ಗೌರವ ನೀಡುವುದು ಎಲ್ಲರ ಕರ್ತವ್ಯ'' ಎಂದು ಮೀ ಟೂ ಗೆ ತಮ್ಮ ಸಾಥ್ ನೀಡಿದ್ದಾರೆ.
'ಉದ್ಘರ್ಷ' ಸಿನಿಮಾದ ಶೂಟಿಂಗ್ ತೊಡಗಿರುವ ಧನ್ಸಿಕಾ ''ಮೀ ಟೂ ಅಭಿಯಾನ ವೈರಲ್ ಆಗುತ್ತಿದೆ. ಹೆಣ್ಣು ಮಕ್ಕಳು ಅವರಿಗೆ ಆದ ಲೈಂಗಿಕ ದೌರ್ಜನ್ಯ ಹಾಗೂ ಕೆಟ್ಟ ಅನುಭವಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ನಾನು ಇದಕ್ಕೆ ಸಪೋರ್ಟ್ ನೀಡುತ್ತೇನೆ.'' ಎಂದು ಹೇಳಿದ್ದಾರೆ.

'ಕಬಾಲಿ' ಸೇರಿದಂತೆ ಸೌತ್ ಚಿತ್ರರಂಗದಲ್ಲಿ ಕೆಲ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಧನ್ಸಿಕಾ 'ಉದ್ಘರ್ಷ' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ.
English summary
Actress dhanshika supports Me Too campaign.


Click it and Unblock the Notifications