ಅಮ್ಮ ಆಗ್ತಿದ್ದಾರೆ ಕಿರುತೆರೆ ನಟಿ ದಿಶಾ ಮದನ್
Recommended Video
ತಾಯಿ ಆಗುವ ಖುಷಿಯಲ್ಲಿ ಇದ್ದಾರೆ ಕಿರುತೆರೆಯ ಮತ್ತೊಬ್ಬ ನಟಿ | FILMIBEAT KANNADA
ನಟಿ ರಾಧಿಕಾ ಪಂಡಿತ್ ಇತ್ತೀಚಿಗಷ್ಟೆ ಎರಡನೇ ಮಗುವಿನ ಬಗ್ಗೆ ಸಿಹಿ ಸುದ್ದಿ ನೀಡಿದ್ದರು. ಈಗ ಕನ್ನಡ ಕಿರುತೆರೆಯ ಮತ್ತೊಬ್ಬ ನಟಿ ತಾಯಿ ಆಗುವ ಖುಷಿಯಲ್ಲಿ ಇದ್ದಾರೆ.
ನಟಿ ದಿಶಾ ಮದನ್ 'ಕುಲವಧು' ಧಾರಾವಾಹಿಯಲ್ಲಿ ನಟಿಸಿದ್ದರು. ಅನೇಕ ರಿಯಾಲಿಟಿ ಶೋಗಳ ಮೂಲಕವೂ ಗಮನ ಸೆಳೆದಿದ್ದರು. ಒಳ್ಳೆಯ ನೃತ್ಯಗಾರ್ತಿಯಾಗಿರುವ ಅವರು 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು.
ದಿಶಾ ಮದನ್ ಈಗ ತಾಯಿ ಆಗುತ್ತಿದ್ದಾರೆ. ಅವರ ಈ ಸಂತಸದ ವಿಷಯವನ್ನು ಇತ್ತೀಚಿಗಷ್ಟೆ ಸೀಮಂತದ ಫೋಟೋಗಳ ಮೂಲಕ ಹಂಚಿಕೊಂಡಿದ್ದರು. ಈಗ ಅವರಿಗೆ 8 ತಿಂಗಳು ತುಂಬಿದೆಯಂತೆ.

ಗರ್ಬಿಣಿಯಾದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು ''ತಾಯಿಯಾಗುವ ಗಳಿಗೆಯ ಭಾವನೆಗಿಂತ ದೊಡ್ಡದು ಯಾವುದು ಇಲ್ಲ'' ಎಂದು ಹೇಳಿದ್ದಾರೆ.
ದಿಶಾ ಮದನ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಇದ್ದಾರೆ. ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ವೆಬ್ ಸೀರಿಸ್ ಐ ಹೇಟ್ ರೋಮಿಯೋ'ಗೆ ಇವರೇ ನಾಯಕಿಯಾಗಿದ್ದಾರೆ.
More from Filmibeat
English summary
Kannada tv actress Disha Madan expecting a baby. She says 'there is no better feeling than the movement of life inside of you'.


Click it and Unblock the Notifications











