ಕೆಜಿಎಫ್ 2 ಟೀಸರ್‌ನಲ್ಲಿ ಬಯಲಾದ ಈ ಹೊಸ ಪಾತ್ರ ಯಾವುದು, ಯಾರು ಈ ನಟಿ?

ಭಾರತೀಯ ಚಿತ್ರಜಗತ್ತಿನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ಟೀಸರ್ ಮೂಲಕ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಿದೆ. ರಾಕಿ ಭಾಯ್, ಅಧೀರ, ರಮಿಕಾ ಸೇನ್, ಇನಾಯತ್ ಖಲೀಲ್ ಪಾತ್ರಗಳ ಮೇಲೆ ಎಲ್ಲರ ಗಮನ ಇದೆ. ಟೀಸರ್‌ನಲ್ಲೂ ಈ ಪಾತ್ರಗಳೇ ಪ್ರಮುಖ ಆಕರ್ಷಣೆ. ಆದರೆ, ಚಾಪ್ಟರ್ 2ನಲ್ಲಿ ಕೆಲವು ಪಾತ್ರಗಳು ಹೊಸದಾಗಿ ಸೇರಿದೆ.

Recommended Video

26 ವರ್ಷದ ಬಳಿಕ ಕನ್ನಡ ಚಿತ್ರದಲ್ಲಿ ನಟಿಸಿದ ರಜನಿಕಾಂತ್ ಚಿತ್ರದ ನಾಯಕಿ | Filmibeat Kannada

ಅನಂತ್ ನಾಗ್ ಅವರು ಈ ಚಿತ್ರದಲ್ಲಿಲ್ಲ, ಅವರ ಬದಲಾಗಿ ಪ್ರಕಾಶ್ ರಾಜ್ ನಟಿಸಿರುವುದು ಈಗಾಗಲೇ ತಿಳಿದಿರುವ ಸಂಗತಿ. ಇತ್ತೀಚಿಗಷ್ಟೆ ಬಿಡುಗಡೆಯಾದ ಟೀಸರ್‌ನಲ್ಲಿ ಮಹಿಳೆಯೊಬ್ಬರು ಕಾಣಿಸಿಕೊಳ್ಳುತ್ತಾರೆ. ಚಾಪ್ಟರ್ 1 ರಲ್ಲಿ ಈ ನಟಿ ಇರಲಿಲ್ಲ, ಆ ಪಾತ್ರವೂ ಇರಲಿಲ್ಲ. ಈಗ ಎರಡನೇ ಭಾಗದಲ್ಲಿ ಹೊಸದಾಗಿ ಎಂಟ್ರಿಯಾಗಿದೆ. ಅಷ್ಟಕ್ಕೂ, ಟೀಸರ್‌ನಲ್ಲಿ ರಾಜಮಾತೆಯಂತೆ ಕಾಣಿಸಿಕೊಂಡ ಈ ನಟಿ ಯಾರು? ಈಕೆಯ ಪಾತ್ರವೇನು? ಮುಂದೆ ಓದಿ...

ಕೆಜಿಎಫ್ ಚಿತ್ರದಲ್ಲಿ ಈಶ್ವರಿ ರಾವ್

ಕೆಜಿಎಫ್ ಚಿತ್ರದಲ್ಲಿ ಈಶ್ವರಿ ರಾವ್

ಕೆಜಿಎಫ್ ಚಾಪ್ಟರ್ 2 ಟೀಸರ್‌ನ ದೃಶ್ಯವೊಂದರಲ್ಲಿ ತುಂಬಾ ಪವರ್ ಫುಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಈ ನಟಿ ಈಶ್ವರಿ ರಾವ್. ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ಹೆಚ್ಚು ನಟಿಸಿದ್ದಾರೆ. ಸದ್ಯ ಟೀಸರ್‌ನಲ್ಲಿ ಬಹಿರಂಗವಾಗಿರುವಂತೆ ಕೆಜಿಎಫ್ ಚಿತ್ರದಲ್ಲಿ ಈಶ್ವರಿ ರಾವ್ ಬಹಳ ಪ್ರಮುಖ ಪಾತ್ರವೊಂದರಲ್ಲಿ ಬಣ್ಣ ಹಚ್ಚಿದ್ದಾರೆ.

ಈಶ್ವರಿ ರಾವ್ ಪಾತ್ರ ಏನು?

ಈಶ್ವರಿ ರಾವ್ ಪಾತ್ರ ಏನು?

ಚಾಪ್ಟರ್ 1ರಲ್ಲಿ ನಟಿ ಅರ್ಚನಾ ಜೋಯಿಸ್ ರಾಕಿ ಭಾಯ್ ತಾಯಿ ಪಾತ್ರ ನಿರ್ವಹಿಸಿದ್ದರು. ಚಾಪ್ಟರ್ 2ರಲ್ಲಿ ಅವರ ಪಾತ್ರ ಮುಂದುವರಿದಿದೆ. ಆದ್ರೆ, ಟೀಸರ್‌ನಲ್ಲಿ ಒಂದೇ ಸೆಕೆಂಡ್ ಬಂದು ಹೋಗುವ ಈಶ್ವರಿ ರಾವ್ ಅವರನ್ನು ಫಟ್ ಎಂದು ನೋಡಿದಾಗ ಅರ್ಚನಾ ಜೋಯಿಸ್ ಎಂದೇ ಅಂದುಕೊಂಡವರು ಹೆಚ್ಚು. ಆದರೆ, ಇದು ಬೇರೆಯದ್ದೇ ಮಾತ್ರ ಎಂಬ ಅನುಮಾನ ಮೂಡಿದೆ. ಅಥವಾ ಅರ್ಚನಾ ಜೋಯಿಸ್ ಅವರ ಪಾತ್ರದ ಮುಂದುವರಿದ ಪಾತ್ರವೂ ಇರಬಹುದು. ಅದರ ಬಗ್ಗೆ ಸ್ಪಷ್ಟನೆ ಇಲ್ಲ. ಈಶ್ವರಿ ರಾವ್ ಹಿಂದೆ ನಟಿ ಶ್ರೀನಿಧಿ ಶೆಟ್ಟಿ ಹಾಗೂ ಹರೀಶ್ ರೈ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಟ್ವಿಸ್ಟ್ ಕೊಡುವ ಪಾತ್ರ!

ಚಿತ್ರದಲ್ಲಿ ಟ್ವಿಸ್ಟ್ ಕೊಡುವ ಪಾತ್ರ!

ಕೆಜಿಎಫ್ ಚಿತ್ರದಲ್ಲಿ ಈಶ್ವರಿ ರಾವ್ ನಟಿಸುತ್ತಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಚಿತ್ರಕ್ಕೆ ಟ್ವಿಸ್ಟ್ ನೀಡುವಂತಹ ಪಾತ್ರ ಇದಾಗಿದೆ. ಬಹಳ ಪ್ರಮುಖವಾದ ಸನ್ನಿವೇಶದಲ್ಲಿ ಈ ಪಾತ್ರ ಬರುತ್ತೆ ಎಂದು ಹೇಳಲಾಗಿತ್ತು. ಈಶ್ವರಿ ರಾವ್ ಅವರ ಲುಕ್ ಗಮನಿಸಿದರೂ ಇದು ಬಹಳ ಪ್ರಮುಖ ಪಾತ್ರ ಇರಬಹುದು ಎಂದು ನಿರೀಕ್ಷಿಸಲಾಗಿದೆ.

1994ರಲ್ಲಿ ಮೊದಲ ಕನ್ನಡ ಸಿನಿಮಾ

1994ರಲ್ಲಿ ಮೊದಲ ಕನ್ನಡ ಸಿನಿಮಾ

ಈಶ್ವರಿ ರಾವ್‌ಗೆ ಕೆಜಿಎಫ್ ಎರಡನೇ ಕನ್ನಡ ಚಿತ್ರ. ಇದಕ್ಕೆ ಮೊದಲು 1994ರಲ್ಲಿ ಎಸ್ ನಾರಾಯಣ್ ನಿರ್ದೇಶನದ ಮೇಘಮಾಲೆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಸುಮಾರು 26 ವರ್ಷದ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಈಶ್ವರಿ ರಾವ್ ಕಾಣಿಸಿಕೊಳ್ಳುತ್ತಿದ್ದಾರೆ.

ಕಾಲಾ ಚಿತ್ರದಲ್ಲಿ ರಜನಿಗೆ ಜೋಡಿ!

ಕಾಲಾ ಚಿತ್ರದಲ್ಲಿ ರಜನಿಗೆ ಜೋಡಿ!

1990ರಲ್ಲಿ ಸಿನಿ ಜರ್ನಿ ಆರಂಭಿಸಿದ ಈಶ್ವರಿ ರಾವ್ ಆರಂಭದಲ್ಲಿ ನಾಯಕಿಯಾಗಿ ಕೆಲವು ಚಿತ್ರಗಳಲ್ಲಿ ನಟಿಸಿದರು. ಬಳಿಕ ಪೋಷಕ ನಟಿಯಾಗಿ ಅನೇಕ ವರ್ಷದಿಂದ ಇಂಡಸ್ಟ್ರಿಯಲ್ಲಿದ್ದಾರೆ. ಸೂಪರ್ ಸ್ಟಾರ್ ರಜನಿ ಜೊತೆ ಹಲವು ಸಿನಿಮಾ ಮಾಡಿದ್ದಾರೆ. 2018ರಲ್ಲಿ ತೆರೆಕಂಡಿದ್ದ ಕಾಲಾ ಚಿತ್ರದಲ್ಲಿ ರಜನಿ ಪತ್ನಿ ಪಾತ್ರದಲ್ಲಿ ಈಶ್ವರಿ ರಾವ್ ನಟಿಸಿದ್ದು ಹೆಚ್ಚು ಗಮನ ಸೆಳೆದಿದ್ದರು.

ರಮೇಶ್ ರಾವ್ ನಟನೆ

ರಮೇಶ್ ರಾವ್ ನಟನೆ

ತೆಲುಗಿನ ಪ್ರಮುಖ ಕಲಾವಿದ ರಾವ್ ರಮೇಶ್ ಸಹ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದಾರೆ. ಟೀಸರ್‌ನಲ್ಲಿ ರಾವ್ ರಮೇಶ್ ಅವರ ಲುಕ್ ಬಹಿರಂಗವಾಗಿದೆ. ಇವರ ಪಾತ್ರ ಏನು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ, ಆದರೆ ಸಿಬಿಐ ಕಚೇರಿ ಎದುರುಗಡೆ ನಿಂತಿರುವ ರಾವ್ ರಮೇಶ್ ಮೇಲೂ ಹೆಚ್ಚಿನ ನಿರೀಕ್ಷೆ ಇದೆ.

More from Filmibeat

English summary
South actress Easwari Rao acted prominent role in Kgf Chapter 2. which character played easwari rao in yash movie?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X