ಕೆಜಿಎಫ್ 2 ಗೆ ಎಂಟ್ರಿ ಕೊಟ್ಟ ಮತ್ತೊಬ್ಬ ಸ್ಟಾರ್ ಹಿರಿಯ ನಟಿ

ಕೆಜಿಎಫ್ ಸಿನಿಮಾ ಪವರ್‌ಫುಲ್ ಪಾತ್ರಗಳನ್ನು ಒಳಗೊಂಡಿತ್ತು. ಕೆಲವೇ ಪಾತ್ರಗಳನ್ನು ಬಳಸಿಕೊಂಡು ಥ್ರಿಲ್ ಆಗುವಂತೆ ಕತೆ ಹೇಳಿದ್ದರು ಪ್ರಶಾಂತ್ ನೀಲ್.

Recommended Video

ಅಪ್ಪನ ಜೊತೆ ಫೋಟೋಗೆ ಪೋಸ್ ಕೊಟ್ಟ ಜೂನಿಯರ್ ಯಶ್ | Yash Son | Yash & Radhika Pandit

ಕೆಜಿಎಫ್ ಮೊದಲ ಭಾಗಕ್ಕಿಂತಲೂ ಹೆಚ್ಚು ಪವರ್‌ಫುಲ್ ಪಾತ್ರಗಳು ಕೆಜಿಎಫ್ 2 ನಲ್ಲಿ ಇರಲಿವೆ. ಸಂಜಯ್ ದತ್, ರವೀನಾ ಟಂಡನ್ ಕೆಜಿಎಫ್‌ 2 ನ ಪ್ರಮುಖ ಆಕರ್ಷಣೆ. ಇದರ ಜೊತೆಗೆ ಇನ್ನೂ ಹಲವು ಪ್ರಮುಖ ನಟರು ಕೆಜಿಎಫ್ 2 ನಲ್ಲಿರಲಿದ್ದಾರೆ.

ಇದೀಗ ಮತ್ತೊಬ್ಬ ಸ್ಟಾರ್ ನಟಿ ಕೆಜಿಎಫ್ 2 ಸಿನಿಮಾದಲ್ಲಿರುವುದು ಗೊತ್ತಾಗಿದೆ. ತೆಲುಗು, ತಮಿಳಿನ ಹಿರಿಯ ನಟಿಯೂ ಆಗಿರುವ ಇವರದ್ದು ಕೆಜಿಎಫ್‌ನಲ್ಲಿ ಯಾವ ಪಾತ್ರ ಎಂಬುದು ಕುತೂಹಲ ಕೆರಳಿಸಿದೆ.

ರಜನೀಕಾಂತ್ ಸೇರಿ ಹಲವು ನಟರೊಂದಿಗೆ ನಟನೆ

ರಜನೀಕಾಂತ್ ಸೇರಿ ಹಲವು ನಟರೊಂದಿಗೆ ನಟನೆ

ರಜನೀಕಾಂತ್ ಸೇರಿದಂತೆ ಹಲವು ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡಿರುವ ಹಿರಿಯ ನಟಿ ಈಶ್ವರಿ ರಾವ್ ಅವರು ಕೆಜಿಎಫ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕೆಜಿಎಫ್ 2 ಗೆ ಪ್ರಮುಖ ತಿರುವು

ಕೆಜಿಎಫ್ 2 ಗೆ ಪ್ರಮುಖ ತಿರುವು

ಕೆಜಿಎಫ್ 2 ಕತೆಗೆ ಪ್ರಮುಖ ತಿರುವು ನೀಡುವ ಪಾತ್ರದಲ್ಲಿ ಈಶ್ವರಿ ರಾವ್ ನಟಿಸುತ್ತಿದ್ದು, ಅವರ ನಟನೆಗೆ ಪ್ರಶಸ್ತಿಗಳು ಬರುವುದು ಖಂಡಿತ ಎಂಬ ಮಾತುಗಳು ಕೆಜಿಎಫ್ 2 ಸೆಟ್‌ನಲ್ಲಿ ಕೇಳಿಬರುತ್ತಿದೆಯಂತೆ.

1995 ರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು

1995 ರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು

ಕಾಲಾ ಸಿನಿಮಾದಲ್ಲಿ ರಜನೀಕಾಂತ್ ಜೊತೆ ನಟಿಸಿರುವ ಈಶ್ವರಿ ರಾವ್ ಅವರಿಗೆ ಕೆಜಿಎಫ್ 2 ಮೊದಲ ಕನ್ನಡ ಸಿನಿಮಾ ಅಲ್ಲ. ಅವರು 1995 ರಲ್ಲಿ ಎಸ್.ನಾರಾಯಣ್ ನಿರ್ದೇಶನದ ಮೇಘ ಮಾಲೆ ಸಿನಿಮಾದಲ್ಲಿ ನಟಿಸಿದ್ದರು.

ಕೆಜಿಎಫ್ 2 ಸಿನಿಮಾದಲ್ಲಿ ಪ್ರತಿಭಾನ್ವಿತ ನಟರ ದಂಡು

ಕೆಜಿಎಫ್ 2 ಸಿನಿಮಾದಲ್ಲಿ ಪ್ರತಿಭಾನ್ವಿತ ನಟರ ದಂಡು

ಕೆಜಿಎಫ್‌ 2 ಸಿನಿಮಾದಲ್ಲಿ ಪ್ರತಿಭಾನ್ವಿತ ನಟರ ದಂಡೇ ಇದೆ. ಸಂಜಯ್ ದತ್‌, ರವೀನಾ ಟಂಡನ್, ಅನಂತ್‌ ನಾಗ್, ಅಚ್ಯುತ್ ಕುಮಾರ್ ಇನ್ನೂ ಹಲವು ಪ್ರತಿಭಾವಂತರು ಇದರಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Senior actress Eshwari Rao joins KGF 2 camp. She will be seen in very important role in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X