ವಿಚಾರಣೆ ಎದುರಿಸಿದ ನಟಿ ಗೀತಾ ಭಟ್ ಹೇಳಿದ್ದು ಹೀಗೆ
ಆಂತರಿಕ ಭದ್ರತಾ ಇಲಾಖೆಯ ವಿಚಾರಣೆ ಎದುರಿಸಿದ ಧಾರಾವಾಹಿ ನಟಿ ಗೀತಾ ಭಟ್ 'ತಮಗೂ ಮಾದಕ ವಸ್ತು ಜಾಲಕ್ಕೂ ತಮಗೆ ಸಂಬಂಧವಿಲ್ಲ' ಎಂದರು.
Recommended Video
ಧಾರಾವಾಹಿ ನಟರಾದ ರಶ್ಮಿಕಾ ಚಂಗಪ್ಪ, ಅಭಿಷೇಕ್ ದಾಸ್, ಗೀತಾ ಭಟ್ ಅವರಿಗೆ ಆಂತರಿಕಾ ಭದ್ರತಾ ವಿಭಾಗವು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಟೀಸ್ ನೀಡಿ ವಿಚಾರಣೆಗೆ ಕರೆದಿತ್ತು. ಅಂತೆಯೇ ಗೀತಾ ಭಟ್ ಇಂದು ವಿಚಾರಣೆ ಎದುರಿಸಿದರು.
ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಗೀತಾ ಭಟ್ ಹೊರಗೆ ಬಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. 'ಇದೊಂದು ಹೊಸ ಅನುಭವ, ಬಹಳ ಲೈವ್ಲಿಯಾದ ಮಾತುಕತೆ ಇದಾಗಿತ್ತು' ಎಂದರು.

'ಅಧಿಕಾರಿಗಳಿಗೆ ನಾನು ಕೊಟ್ಟ ಉತ್ತರ ಸಮಾಧಾನ ತಂದಿದೆ, ನನಗೂ ಸಹ ಇಂದಿನ ವಿಚಾರಣೆ ನೆಮ್ಮದಿ ತಂದಿದೆ. ಸರಳವಾದ ಪ್ರಶ್ನೆಗಳನ್ನು ಕೇಳಿದರು ಅದಕ್ಕೆ ಸೂಕ್ತ ಉತ್ತರ ನೀಡಿದ್ದೇನೆ' ಎಂದರು.
'ಯಾವ ಪಾರ್ಟಿಗಳಿಗೆ ಹೋಗಿದ್ದೆ, ಯಾರು ಗೆಳೆಯರು, ಯಾರಿಗೆ ಕರೆ ಮಾಡಿದ್ದೆ, ಪಾರ್ಟಿ ಆಯೋಜನೆ ಇತರೆ ಸರಳ ಪ್ರಶ್ನೆಗಳನ್ನು ಕೇಳಿದರು, ಅದಕ್ಕೆ ಸೂಕ್ತ ಉತ್ತರ ಕೊಟ್ಟೆ' ಎಂದರು ಗೀತಾ ಭಟ್.
ನನಗೂ ಮಾದಕ ವಸ್ತು ಜಾಲಕ್ಕೂ ಸಂಬಂಧವಿಲ್ಲ, ನಾನು ಯಾವುದೇ ಪಾರ್ಟಿಗಳಿಗೆ ಹೋಗುವುದಿಲ್ಲ, ಚಾನೆಲ್ ನ ಕೆಲವು ಪಾರ್ಟಿಗಳು, ಮನೆಯ ಖಾಸಗಿ ಕಾರ್ಯಕ್ರಮಗಳಿಗೆ ಮಾತ್ರವೇ ನಾನು ಹೋಗುತ್ತೇನೆ' ಎಂದು ಗೀತಾ ಭಟ್ ಹೇಳಿದರು.


Click it and Unblock the Notifications











