ಕಿಸ್ ಕೊಟ್ಟು ಬಾಟಲ್ ಓಪನ್ ಮಾಡಿದ ಹರಿಪ್ರಿಯಾ
ಬಾಟಲ್ ಓಪನ್ ಚಾಲೆಂಜ್ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಟ್ರೆಂಡ್ ಆಗಿದೆ. ತಮ್ಮ ತಮ್ಮ ಸ್ಟೈಲ್ ಗಳಲ್ಲಿ ಬಾಟಲ್ ಓಪನ್ ಮಾಡುವ ಮೂಲಕ ಸ್ಟಾರ್ ಗಳು ಗಮನ ಸೆಳೆಯುತ್ತಾರೆ.
ಕನ್ನಡದ ನಟಿ ಹರಿಪ್ರಿಯಾ ಡಿಫರೆಂಟ್ ಆಗಿ ಬಾಟಲ್ ಓಪನ್ ಮಾಡಿದ್ದಾರೆ. ಎಷ್ಟೇ ಆಗಲಿ ಹರಿಪ್ರಿಯಾ ಡಿಫರೆಂಟ್ ಸಿನಿಮಾ ಮಾಡುವ ನಾಯಕಿ. ಅದೇ ರೀತಿ ಡಿಫರೆಂಟ್ ಆಗಿ ಬಾಟಲ್ ಓಪನ್ ಚಾಲೆಂಜ್ ಮಾಡಿ ಮುಗಿಸಿದ್ದಾರೆ.

ಮುತ್ತು ಕೊಡುವ ಮೂಲಕ ಬಾಟಲ್ ಮೇಲಿನ ಕ್ಯಾಪ್ ಅನ್ನು ಬೀಳಿಸಿ ಯಶಸ್ವಿಯಾಗಿ ಈ ಸವಾಲನ್ನು ಎದುರಿಸಿದ್ದಾರೆ. ಫನ್ನಿಯಾಗಿ ಬಾಟಲ್ ಓಪನ್ ಮಾಡಿ ಗಮನ ಸೆಳೆದಿದ್ದಾರೆ. ತಮ್ಮ ಈ ಡಿಫರೆಂಟ್ ಶೈಲಿ ಕಂಡು ಅವರಿಗೆನೇ ನಗು ಬಂದಿದೆ.
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಕೂಡ ಬ್ಯಾಡ್ಮಿಂಟನ್ ಬ್ಯಾಟ್ ನಲ್ಲಿ ಬಾಟಲ್ ಓಪನ್ ಮಾಡಿದ್ದರು. ಸೈನಾ ನೆಹ್ವಾಲ್ ಬಯೋಪಿಕ್ ನಲ್ಲಿ ನಟಿಸುತ್ತಿರುವ ಪರಿಣಿತಿ ಚೋಪ್ರಾ ಅದೇ ಸ್ಟೈಲ್ ನಲ್ಲಿ ಬಾಟಲ್ ಓಪನ್ ಮಾಡಿದ್ದರು.
ಅಂದಹಾಗೆ, ಹರಿಪ್ರಿಯಾ ಕೂಡ ವಿಭಿನ್ನವಾಗಿ ಬಾಟಲ್ ಓಪನ್ ಚಾಲೆಂಜ್ ಪೂರ್ಣ ಮಾಡಿದ್ದಾರೆ. 'ಬೆಲ್ ಬಾಟಂ' ಚಿತ್ರದ ಯಶಸ್ಸಿನ ನಂತರ ಅವರ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











