For Quick Alerts
  ALLOW NOTIFICATIONS  
  For Daily Alerts

  ಹರಿಪ್ರಿಯಾ ಮೂಲ ಹೆಸರು ಗೊತ್ತೆ? ಹೆಸರಿನೊಂದಿಗೆ ಉಳಿದಿದೆ ನೋವಿನ ಛಾಯೆ

  |

  ನಟಿ ಹರಿಪ್ರಿಯಾ ಪ್ರತಿಭೆಯಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಭಿನ್ನ ಪಾತ್ರಗಳ ಪ್ರಯೋಗ ಮಾಡುತ್ತಲಿರುವ ಅವರು, ತಮಗೆ ತಾವೇ ಸ್ಪರ್ಧೆಯನ್ನೊಡ್ಡಿಕೊಂಡು ಸಿನಿಮಾದಿಂದ ಸಿನಿಮಾಕ್ಕೆ ಪ್ರಬುದ್ಧವಾಗಿದ್ದಾರೆ.

  ಇರ್ಫಾನ್ ಖಾನ್ ರನ್ನು ಮಿಸ್ ಮಾಡಿಕೊಳ್ತಿರೋ ದೀಪಿಕಾ ಪಡುಕೋಣೆ ಏನ್ ಮಾಡಿದ್ರು?

  ಬೆಂಗಳೂರಿನಿಂದ ತುಸು ದೂರದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ ಜನಿಸಿದ ಹರಿಪ್ರಿಯಾ ಪ್ರಥಮ ಪಿಯುಸಿಯಲ್ಲಿದ್ದಾಗಲೇ ಚಿತ್ರರಂಗಕ್ಕೆ ಕಾಲಿಟ್ಟವರು. ಅಲ್ಲಿನಿಂದಲೂ ಅವರ ಸಿನಿಮಾ ಪ್ರಯಾಣ ನಡೆಯುತ್ತಲೇ ಇದೆ.

  ಉಗ್ರಂ, ನೀರ್‌ ದೋಸೆ, ಸೂಜಿದಾರಾ, ಬೆಲ್‌ ಬಾಟಮ್, ಕಥಾ ಸಂಗಮ, ಡಾಟರ್ ಆಫ್ ಪಾರ್ವತಮ್ಮ ಹೀಗೆ ಭಿನ್ನ-ಭಿನ್ನ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರ ಮನಗೆದ್ದಿರುವ ಹರಿಪ್ರಿಯಾ ನಿಜವಾದ ಹೆಸರು ಬೇರೆಯೇ ಇದೆ. ಆ ಹೆಸರಿಗೆ ಸಂಬಂಧಿಸಿದಂತೆ ಸಣ್ಣ ಕೊರಗೂ ಸಹ ನಟಿಗೆ ಇದೆ.

  ಮೊದಲ ಸಿನಿಮಾ ನಂತರ ಹೆಸರು ಬದಲಾವಣೆ

  ಮೊದಲ ಸಿನಿಮಾ ನಂತರ ಹೆಸರು ಬದಲಾವಣೆ

  ಹರಿಪ್ರಿಯಾ ಮೊದಲ ಸಿನಿಮಾ ತುಳುವಿನ ಬಡಿ. ಆ ಸಿನಿಮಾದಲ್ಲಿ ಹರಿಪ್ರಿಯ ಮೂಲ ಹೆಸರು ಶ್ರುತಿ ಎಂತಲೇ ಇತ್ತು. ಆದರೆ ಸಿನಿಮಾ ಬಿಡುಗಡೆಯಾಗುವ ವೇಳೆಗೆ ಕನ್ನಡದಿಂದ ಆಫರ್‌ ಒಂದು ಬಂದಿತ್ತು. ಈಗಾಗಲೇ ಶ್ರುತಿ ಹೆಸರಿನ ನಾಯಕಿ ಕನ್ನಡದಲ್ಲಿ ಖ್ಯಾತರು. ಹಾಗಾಗಿ ಹೆಸರು ಬದಲಾಯಿಸಿಕೊಳ್ಳಿ ಎಂದು ಸಲಹೆ ಕೊಟ್ಟರಂತೆ ತುಳು ಸಿನಿಮಾದ ಸಹ ನಿರ್ದೇಶಕ.

  H ಅಕ್ಷರದಿಂದಲೇ ಹೆಸರು ಬೇಕೆಂದು ಹುಡುಕಾಟ

  H ಅಕ್ಷರದಿಂದಲೇ ಹೆಸರು ಬೇಕೆಂದು ಹುಡುಕಾಟ

  ಹಾಗಾಗಿ ಸಂಖ್ಯಾಶಾಸ್ತ್ರ ಇನ್ನಿತರೆಗಳನ್ನೆಲ್ಲಾ ಹುಡುಕಿ, H ಅಕ್ಷರಿಂದ ಆರಂಭವಾಗುವ ಹೆಸರಿನ ಪಟ್ಟಿ ತಯಾರಿಸಿ ಕೊನೆಗೆ ಹೆಸರು ಚೆನ್ನಾಗಿದೆಯೆಂದು ಈಗಿರುವ ಹೆಸರನ್ನು ಹರಿಪ್ರಿಯಾ ಅವರೇ ಆರಿಸಿದರಂತೆ. ಹರಿಪ್ರಿಯಾ ಎಂದರೆ ದೇವತೆ ಲಕ್ಷ್ಮಿ.

  ಶ್ರುತಿ ಈಗಲೂ ನನ್ನ ಮನದಲ್ಲಿದ್ದಾಳೆ

  ಶ್ರುತಿ ಈಗಲೂ ನನ್ನ ಮನದಲ್ಲಿದ್ದಾಳೆ

  12 ವರ್ಷಗಳ ಹಿಂದೆ ಇರದೇ ಇದ್ದ ಹರಿಪ್ರಿಯಾ ಈಗಿದ್ದಾಳೆ. ಹೊರ ಜಗತ್ತಿಗೆ ಹರಿಪ್ರಿಯಾ ಗೊತ್ತು ಆದರೆ ಶ್ರುತಿ ನನ್ನ ಮನದ ಮೂಲೆಯಲ್ಲಿ ಜೀವಂತವಾಗಿದ್ದಾಳೆ ಎಂದು ಹರಿಪ್ರಿಯಾ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಮನೆಯವರು ಬಿಟ್ಟು ಇನ್ಯಾರೂ ಶ್ರುತಿ ಎಂದು ಕರೆಯುವುದಿಲ್ಲವಂತೆ.

  ಹೆಸರಿನ ಜೊತೆಗೆ ಒಂದು ಕೊರಗು ಸಹ ಇದೆ

  ಹೆಸರಿನ ಜೊತೆಗೆ ಒಂದು ಕೊರಗು ಸಹ ಇದೆ

  ಹರಿಪ್ರಿಯಾ ಹೆಸರಿನ ಬಗ್ಗೆ ಒಂದು ಕೊರಗು ಸಹ ಇದೆ. 'ಹರಿಪ್ರಿಯಾ' ಹೆಸರನ್ನು ಒಂದು ಬಾರಿಯೂ ಅಪ್ಪ ಕರೆದೇ ಇಲ್ಲ. ಅಥವಾ ಅವರಿಗೆ ಮಗಳಿಗೆ ಈ ಹೆಸರಿದೆ ಎಂಬುದು ಸಹ ಗೊತ್ತಿಲ್ಲ ಎಂದು ನೋವಿನಿಂದ ಬರೆದುಕೊಂಡಿದ್ದಾರೆ ಹರಿಪ್ರಿಯಾ. ತಂದೆ ಚಂದ್ರಸೇನಾ ಹರಿಪ್ರಿಯ ಸಣ್ಣವರಿದ್ದಾಗಲೇ ತೀರಿಕೊಂಡರು. ಅವರ ನೆನಪು ಹರಿಪ್ರಿಯಾ ಅವರಿಗೆ ಇನ್ನೂ ಹಚ್ಚಹಸಿರು.

  ನನ್ನ ತಂದೆ ನನ್ನನ್ನು ನೋಡುತ್ತಿದ್ದಾರೆ

  ನನ್ನ ತಂದೆ ನನ್ನನ್ನು ನೋಡುತ್ತಿದ್ದಾರೆ

  ನನ್ನ ತಂದೆ ಮೇಲಿನಿಂದಲೇ ನನ್ನನ್ನು ನೋಡುತ್ತಿರುತ್ತಾರೆ. ನನ್ನನ್ನು ನೋಡಿ ಮುಗುಳ್ನಗುತ್ತಾ ನನ್ನ ಹೆಸರನ್ನು ಸಣ್ಣಗೆ ಗುನುಗುತ್ತಿರುತ್ತಾರೆ ಎಂದು ಕಾವ್ಯಾತ್ಮಕವಾಗಿ ಬರೆದುಕೊಂಡಿದ್ದಾರೆ ನಟಿ ಹರಿಪ್ರಿಯಾ.

  English summary
  Actress Haripriya changed her birth name for movies. Her father did not know her new name and did not called her name once.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X