'ನೀರ್ ದೋಸೆ'ಯಲ್ಲಿ ಮರ್ಲಿನ್ ಮನ್ರೋಳನ್ನು ಹಿಂದಿಕ್ಕಿದ 'ಉಗ್ರಂ' ಬೆಡಗಿ
'ಉಗ್ರಂ' ಖ್ಯಾತಿಯ ಬೆಡಗಿ ಹರಿಪ್ರಿಯಾ ಅವರು 'ನೀರ್ ದೋಸೆ' ಚಿತ್ರದಲ್ಲಿ ಸಖತ್ ಗ್ಲಾಮರ್ ಲುಕ್ ನಲ್ಲಿ ಮಿಂಚಿರುವ ವಿಷಯ ನಿಮಗೆ ತಿಳಿದೇ ಇದೆ. ನಿರ್ದೇಶಕ ವಿಜಯ್ ಪ್ರಸಾದ್ ಆಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ನಟಿ ಹರಿಪ್ರಿಯಾ ಅವರು ತಮ್ಮನ್ನು ತಾವು ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ.
ಹಾಲಿವುಡ್ ಸಿನಿಮಾ 'ಸೆವೆನ್ ಇಯರ್ ಈಚ್' ನಲ್ಲಿ ಹಾಲಿವುಡ್ ತಾರೆ ಮರ್ಲಿನ್ ಮನ್ರೋ ಧರಿಸಿದ್ದ, ಮಾದರಿಯ ಉಡುಪುಗಳನ್ನು ಅನುಕರಿಸುವ ಮೂಲಕ ಸದ್ಯಕ್ಕೆ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ.['ನೀರ್ ದೋಸೆ' ಬೆಡಗಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಇಲ್ಲಿದೆ ಅವಕಾಶ!]
'ನನ್ನನ್ನು ನಾನು ಬೋಲ್ಡ್ ಪಾತ್ರಕ್ಕೆ ಒಗ್ಗಿಸಿಕೊಳ್ಳಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧಳಾಗಿದ್ದೆ. ಸಖತ್ ಗ್ಲಾಮರ್ ಬಟ್ಟೆಗಳನ್ನು ತೊಡುವುದು ನನಗೆ ಗೊತ್ತು ಆದರೂ ಈ ಪಾತ್ರವನ್ನು ಮಾಡುವಾಗ, ಪಕ್ಕದ ಮನೆ ಹುಡುಗಿಯ ಪಾತ್ರದ ಪರಿಕಲ್ಪನೆಯನ್ನು ತೊರೆಯಬೇಕಾಯಿತು. ಎಂದು 'ನೀರ್ ದೋಸೆ' ಚಿತ್ರದಲ್ಲಿ ವೈಶೈಯ ಪಾತ್ರದಲ್ಲಿ ಮಿಂಚಿರುವ ನಟಿ ಹರಿಪ್ರಿಯಾ ಹೇಳುತ್ತಾರೆ.
ತೆಲುಗಿನ 'ಅಬ್ಬಾಯಿ ಕ್ಲಾಸ್ ಅಮ್ಮಾಯಿ ಮಾಸ್' ಸಿನಿಮಾದಲ್ಲಿ ಇಂತಹದೇ ಪಾತ್ರದಲ್ಲಿ ಕಾಣಿಸಿಕೊಂಡ ಅನುಭವ ನಟಿ ಹರಿಪ್ರಿಯಾ ಅವರಿಗೆ ಇದೆ. 'ಕಾಲ್ ಗರ್ಲ್ ಪಾತ್ರಕ್ಕೆ ಇನ್ನು ಹೆಚ್ಚಿನ ಭಾವನೆ ತುಂಬಲು ನಾನು ಸಿಗರೇಟ್ ಸೇದಬೇಕಾಯಿತು. ಇದು ನನಗೆ ಅಭ್ಯಾಸ ಇಲ್ಲವಾದರಿಂದ ಕೊಂಚ ಕಷ್ಟವಾಯಿತು. ಸಿಗರೇಟ್ ಸೇದುವವರಿಂದ ಸಲಹೆಗಳನ್ನು ಪಡೆಯಬೇಕಾಗಿ ಬಂತು ಎಂದು ಹರಿಪ್ರಿಯಾ ನುಡಿಯುತ್ತಾರೆ.[ಬಿಸಿ ಬಿಸಿ 'ನೀರ್ ದೋಸೆ'ಗೆ ಮಸಾಲೆ ಹಾಕಿದ ಹರಿಪ್ರಿಯಾ]
ಈಗಾಗಲೇ ಚಿತ್ರದ ಶೇ 40 ರಷ್ಟು ಭಾಗ ಚಿತ್ರೀಕರಣ ಮುಗಿದಿದ್ದು, ದತ್ತಣ್ಣ ಅವರ ಭಾಗದ ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಬೇಗ ಬೇಗ ಮುಗಿದರೆ ಮುಂದಿನ ವರ್ಷದ ಸಂಕ್ರಾತಿಗೆ ಘಮ ಘಮಿಸುವ ನೀರ್ ದೋಸೆ ತಿನ್ನಲು ರೆಡಿಯಾಗುತ್ತದೆ.


Click it and Unblock the Notifications













