For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬವಲ್ಲ ಹಾಗಾದ್ರೆ ಹರಿಪ್ರಿಯಾ ಕೇಕ್ ಕಟ್ ಮಾಡಿದ್ದು ಯಾಕೆ?

  |

  ನಟಿ ಹರಿಪ್ರಿಯಾ ಈಗ ಕೇಕ್ ಕಟ್ ಮಾಡಿ ಸಂಭ್ರಮ ಪಟ್ಟಿದ್ದಾರೆ. ಆದರೆ, ಇಂದು ಅವರ ಹುಟ್ಟುಹಬ್ಬವಲ್ಲ. ಅವರ 'ಕನ್ನಡ್ ಗೊತ್ತಿಲ್ಲ' ಸಿನಿಮಾದ ಚಿತ್ರೀಕರಣ ಮುಗಿದಿದೆ.

  ಹರಿಪ್ರಿಯಾ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಆ ಪೈಕಿ 'ಕನ್ನಡ್ ಗೊತ್ತಿಲ್ಲ' ಕೂಡ ಒಂದಾಗಿತ್ತು. ಈಗ ಈ ಸಿನಿಮಾದ ಶೂಟಿಂಗ್ ಮುಗಿದಿದೆ. ಈ ಸಂಭ್ರಮದಲ್ಲಿ ಇಡೀ ಚಿತ್ರತಂಡ ಒಟ್ಟಿಗೆ ಫೋಟೋ ತೆಗೆದುಕೊಂಡಿದೆ. ಕುಂಬಳಕಾಯಿ ಒಡೆದು ಕೇಕ್ ಕಟ್ ಮಾಡಿದೆ.

  'ಕನ್ನಡ್ ಗೊತ್ತಿಲ್ಲ' ಎನ್ನುತ್ತಿದ್ದಾರೆ ಕನ್ನಡ ಹುಡುಗಿ ಹರಿಪ್ರಿಯಾ

  ಈ ಸಂಭ್ರಮದ ಕ್ಷಣಗಳನ್ನ ಹರಿಪ್ರಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇನ್ನು ಸೈಕಲಾಜಿಕಲ್ ಥ್ರಿಲ್ಲರ್

  ಜಾನರ್ ನಲ್ಲಿ ಸಿನಿಮಾ ಇರಲಿದ್ದು, ಇಂದಿನ ದಿನಕ್ಕೆ ತುಂಬ ಹತ್ತಿರ ಆಗಲಿದೆಯಂತೆ. ಕನ್ನಡ ಹಾಗೂ ಕರ್ನಾಟಕದ ಸುತ್ತ ಸುತ್ತುವ ಭಾವನಾತ್ಮಕ ಸಿನಿಮಾ ಇದಾಗಲಿದೆಯಂತೆ.

  ಆರ್ ಜೆ ಮಯೂರ್ ರಾಘವೇಂದ್ರ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಬಿಗ್ ಸ್ಕ್ರೀನ್ ಸಿನಿಮಾವಾಗಿದೆ. ಧರ್ಮಣ್ಣ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ನಕುಲ್ ಸಂಗೀತ, ಗಿರಿಧರ್ ದಿವಾನ್ ಕ್ಯಾಮೆರಾ ಈ ಚಿತ್ರಕ್ಕಿದೆ.

  English summary
  Actress Haripriya 'Kannad Gothilla movie shooting completed. The movie is directing by RJ Mayur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X