ಶ್ರುತಿ - ಸರ್ಜಾ ಮೀಟೂ ಸಮರ : ಹರಿಪ್ರಿಯಾ ಯಾರ ಪರ?

Recommended Video

ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಆರೋಪದ ಬಗ್ಗೆ ನಟಿ ಹರಿಪ್ರಿಯಾ ಹೇಳಿದ್ದು ಹೀಗೆ | Filmibeat Kannada

ಇಂದು ಯಾವ ಸಿನಿಮಾದ ಕೆಲಸ ನಡೆಯುತ್ತಿದೆ, ಈ ವಾರ ಯಾವ ಸಿನಿಮಾ ಬಿಡುಗಡೆ ಇದೆ..? ಈ ರೀತಿಯ ಮಾತುಗಳಿಂದ ತುಂಬಿದ್ದ ಕನ್ನಡ ಚಿತ್ರರಂಗದಲ್ಲಿ ಈಗ ಬರೀ ಮೀ ಟೂ ಬಗ್ಗೆಯೇ ಚರ್ಚೆ ನಡೆಯುತ್ತಿದೆ.

ಬೆಳಗ್ಗೆ ಎದ್ದರೆ ಸಾಕು ಯಾರಾದರೂ ಒಬ್ಬರು ಮೀ ಟೂ ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲಿಯೂ ಕನ್ನಡ ಚಿತ್ರರಂಗದಲ್ಲಿ ಈಗ ಎರಡು ತಂಡಗಳು ಆಗಿ ಹೋಗಿವೆ. ಒಂದು ತಂಡ ಸರ್ಜಾ ಅವರಿಗೆ ಬೆಂಬಲ ಸೂಚಿಸಿದರೆ, ಇನ್ನೊಂದು ತಂಡ ಶ್ರುತಿಗೆ ಸಾಥ್ ನೀಡುತ್ತಿದೆ.

ಸದ್ಯ, ಈ ಘಟನೆಯ ಬಗ್ಗೆ ನಟಿ ಹರಿಪ್ರಿಯಾ ಮಾತನಾಡಿದ್ದಾರೆ. ಅರ್ಜುನ್ ಸರ್ಜಾ ಜೊತೆಗೆ ಒಂದು ಸಿನಿಮಾ ಮಾಡಿರುವ ಹರಿಪ್ರಿಯಾ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅರ್ಜುನ್ ಸರ್ ಆ ರೀತಿಯ ವ್ಯಕ್ತಿ ಅಲ್ಲ ಎಂದಿರುವ ಹರಿಪ್ರಿಯಾ ಸರ್ಜಾ ಪರ ಧ್ವನಿ ಎತ್ತಿದ್ದಾರೆ. ಮುಂದೆ ಓದಿ...

ಎಂಟು ವರ್ಷಗಳಿಂದ ಅವರು ಗೊತ್ತು

ಎಂಟು ವರ್ಷಗಳಿಂದ ಅವರು ಗೊತ್ತು

''ಅರ್ಜುನ್ ಸರ್ ಅವರ ಮೇಲೆ ಈಗ ಬಂದಿರುವ ಆರೋಪ ಕೇಳಿ ತುಂಬ ಬೇಜಾರಾಗಿದೆ. ಯಾಕೆಂದರೆ, ಎಂಟು ವರ್ಷಗಳಿಂದ ಅವರು ನನಗೆ ಚೆನ್ನಾಗಿ ಗೊತ್ತು. ಅವರ ಜೊತೆಗೆ ಒಂದು ತಮಿಳು ಸಿನಿಮಾ ಮಾಡಿದ್ದೇನೆ. ನಾನು ಆಗ ಚಿತ್ರರಂಗಕ್ಕೆ ಬಂದು ಕೇವಲ ಎರಡು ವರ್ಷ ಆಗಿತ್ತು ಅಷ್ಟೇ.'' - ಹರಿಪ್ರಿಯಾ, ನಟಿ

ಚಿತ್ರತಂಡ ನನ್ನ ಪಾಲಿಗೆ ಹೊಸದಾಗಿತ್ತು

ಚಿತ್ರತಂಡ ನನ್ನ ಪಾಲಿಗೆ ಹೊಸದಾಗಿತ್ತು

''ಆ ವೇಳೆ ನನಗೆ ಚಿತ್ರರಂಗದ ಬಗ್ಗೆ ನನಗೆ ಹೆಚ್ಚು ಗೊತ್ತಿರಲಿಲ್ಲ. ತಮಿಳು ಮಾತನಾಡಲೂ ಬರುತ್ತಿರಲಿಲ್ಲ. ತಮಿಳು ಚಿತ್ರತಂಡ ನನ್ನ ಪಾಲಿಗೆ ಹೊಸದಾಗಿತ್ತು. ಆಗ ಅರ್ಜುನ್ ಸರ್ ನನ್ನ ಜೊತೆಗೆ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಫಾರಿನ್ ನಲ್ಲಿ ಕೂಡ ಶೂಟಿಂಗ್ ಮಾಡಿದ್ವೀ. ಆಗ ನನಗೂ ನಮ್ಮ ತಾಯಿಗೆ ಚೆನ್ನಾಗಿ ನೋಡಿಕೊಂಡರು.'' - ಹರಿಪ್ರಿಯಾ, ನಟಿ

ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಿದ್ದರು

ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಿದ್ದರು

''ಶೂಟಿಂಗ್ ಸೆಟ್ ನಲ್ಲಿ ಯಾವುದೇ ಹೆಣ್ಣು ಮಕ್ಕಳು ಬಂದರೂ ತುಂಬ ಗೌರವವಾಗಿ ನಡೆದುಕೊಳ್ಳುತ್ತಿದ್ದರು. ಅವರು ತುಂಬ ಒಳ್ಳೆ ಒಳ್ಳೆ ಸಿನಿಮಾವನ್ನು ಕೊಟ್ಟಿದ್ದಾರೆ. ನಾನು ಅವರ ಸಿನಿಮಾಗಳನ್ನು ನೋಡುತ್ತ ಬೆಳೆದಿದ್ದೇನೆ. ಅವರೊಂದಿಗೆ ಕೆಲಸ ಮಾಡುವಾಗ ಅವರು ನಡೆದುಕೊಳ್ಳುತ್ತಿದ್ದ ರೀತಿ ಇನ್ನು ಹೆಚ್ಚು ಗೌರವ ಬರುವಂತೆ ಮಾಡಿತ್ತು.'' - ಹರಿಪ್ರಿಯಾ, ನಟಿ

ನನ್ನ ಸಂಪೂರ್ಣ ಬೆಂಬಲ ಅರ್ಜುನ್ ಸರ್ ಗೆ

ನನ್ನ ಸಂಪೂರ್ಣ ಬೆಂಬಲ ಅರ್ಜುನ್ ಸರ್ ಗೆ

''ಈಗ ಅವರ ಬಗ್ಗೆ ಬಂದಿರುವ ಆರೋಪ ಕೇಳಿ ನೋವಾಗಿದೆ. ಈ ರೀತಿ ಆಗಬಾರದಿತ್ತು. ನಾನು ಅರ್ಜುನ್ ಸರ್ ಅವರಿಗೆ ಸಂಪೂರ್ಣ ಬೆಂಬಲ ಸೂಚಿಸುತ್ತೇನೆ. ಎಂಟು ವರ್ಷಗಳಿಂದ ಇಲ್ಲಿಯವರೆಗೆ ನಮ್ಮ ಸ್ನೇಹ ಅದೇ ರೀತಿ ಉಳಿದಿದೆ. ಇವತ್ತೂ ನಾನು, ನಮ್ಮ ತಾಯಿ ಎಲ್ಲೇ ಸಿಕ್ಕರು ಅಷ್ಟೇ ಗೌರವದಿಂದ ಮಾತನಾಡುತ್ತಾರೆ.'' - ಹರಿಪ್ರಿಯಾ, ನಟಿ

ಅವರು ಆ ರೀತಿಯ ವ್ಯಕ್ತಿ ಅಲ್ಲ

ಅವರು ಆ ರೀತಿಯ ವ್ಯಕ್ತಿ ಅಲ್ಲ

''ನಾನು ನೋಡಿರುವ ಹಾಗೆ ಸುತ್ತ ಮುತ್ತ ಇರುವ ಹೆಂಗಸರ ಜೊತೆಗೆ ತುಂಬ ಗೌರವದಿಂದ ಮಾತನಾಡುತ್ತಾರೆ. ಅವರು ಆ ರೀತಿಯ ವ್ಯಕ್ತಿ ಅಲ್ಲ.'' ಎಂದಿರುವ ಹರಿಪ್ರಿಯಾ ತಮ್ಮ ಮಾತುಗಳ ಮೂಲಕ ಅರ್ಜುನ್ ಸರ್ಜಾ ಅವರ ಮೇಲೆ ಬಂದಿರುವ ಆರೋಪ ಸುಳ್ಳು ಎಂದು ಹೇಳಿದ್ದಾರೆ.

More from Filmibeat

English summary
Kannada actress Haripriya reaction about Sruthi Hariharan's allegation. Kannada actress Sruthi Hariharan has accused actor Arjun Sarja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X