ಬಾಯ್ತಪ್ಪಿ ತಮ್ಮ ವಯಸ್ಸು ಹೇಳಿದ ಹರಿಪ್ರಿಯಾ ಈಗ್ಲೂ ಅಮ್ಮನ ಪಕ್ಕ ಮಲಗ್ತೀನಿ ಎಂದು ನಾಚಿಕೊಂಡಿದ್ದೇಕೆ?
ನಟ ವಸಿಷ್ಠ ಸಿಂಹ ಜೊತೆ ಮದುವೆಯಾಗಿ ನಟಿ ಹರಿಪ್ರಿಯಾ ಸಿನಿಮಾಗಳಿಂದ ಕೊಂಚ ಬಿಡುವು ಪಡೆದಿದ್ದಾರೆ. ಹರಿಪ್ರಿಯಾ ತಮ್ಮದೇ ಯೂಟ್ಯೂಬ್ ಚಾನಲ್ ಶುರು ಮಾಡಿದ್ದು ಅಭಿಮಾನಿಗಳ ಇಂಟ್ರೆಸ್ಟಿಂಗ್ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದಾರೆ. ಅಭಿಮಾನಿಗಳಿಗೆ ನಟಿಯ ಬಗ್ಗೆ ಗೊತ್ತಿಲ್ಲದ 10 ವಿಚಾರಗಳ ಬಗ್ಗೆ ಆಕೆಯೇ ಉತ್ತರ ಕೊಟ್ಟಿದ್ದಾರೆ. ಸದ್ಯ ಆ ವಿಡಿಯೋ ವೈರಲ್ ಆಗಿದೆ.
2007ರಲ್ಲಿ 'ಬಡಿ' ಎನ್ನುವ ತುಳು ಸಿನಿಮಾ ಮೂಲಕ ನಟಿ ಹರಿಪ್ರಿಯ ಚಿತ್ರರಂಗ ಪ್ರವೇಶಿಸಿದರು. ಆಕೆಗೆ ಸಿನಿಮಾ ನಟಿಯಾಗುವ ಆಸೆ ಇರಲಿಲ್ಲವಂತೆ. ಪಿಯುಸಿ ಓದು ಸಮಯದಲ್ಲಿ ತಾವು ಮಾಡಿದ ಡ್ಯಾನ್ಸ್ ನೋಡಿ ಸಿನಿಮಾ ಮ್ಯಾನೇಜರ್ ತುಳು ಸಿನಿಮಾದಲ್ಲಿ ನಟಿಸುವ ಅವಕಾಶ ಕೊಟ್ಟರು. ಆಗಿನ್ನು ನನಗೆ 16 ವರ್ಷ ವಯಸ್ಸು. ಮೊದಲಿಗೆ ನಟಿಸಲ್ಲ ಎಂದರಂತೆ. ಕೊನೆಯ ಪೋಷಕರ ಒಪ್ಪಿಗೆ ಪಡೆದು ಒಪ್ಪಿದರಂತೆ.

ಮಂಗಳೂರಿನಲ್ಲಿ ಫಿಶ್ ಕರಿ ತಿಂದು ಮೊದಲಿಗೆ ಸಿನಿಮಾ ಚಿತ್ರೀಕರಣ ಆರಂಭಿಸಿದ್ದು ನೆನಪಿದೆ. ಅಲ್ಲಿಂದ ಮುಂದೆ 15 ವರ್ಷಗಳಿಂದ ಈ ಜರ್ನಿ ಮುಂದುವರೆದಿದೆ ಎಂದರು. ಅಯ್ಯೋ ಬಾಯ್ತಪ್ಪಿ ನನ್ನ ವಯಸ್ಸು ಹೇಳಿಬಿಟ್ನಾ ಪರವಾಗಿಲ್ಲ ಎಂದು ಹರಿಪ್ರಿಯಾ ಸುಮ್ಮನಾಗಿದ್ದಾರೆ. 16ನೇ ವಯಸ್ಸಿನಲ್ಲಿ ನಟಿಸಲು ಆರಂಭಿಸಿದ ಚೆಲುವೆ ಈಗ ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ್ದಾರೆ. ಅಂದರೆ ಈಗ ಹರಿಪ್ರಿಯಾ ವಯಸ್ಸು 31 ವರ್ಷ.
ಫಸ್ಟ್ ಲವ್ ಬಗ್ಗೆ ಹರಿಪ್ರಿಯಾ ಮಾತನಾಡಿದ್ದಾರೆ. 17 ವರ್ಷ ವಯಸ್ಸಿನಲ್ಲಿ ಕೆಲವು ತಿಂಗಳ ಕಾಲ ಒಬ್ಬರ ಮೇಲೆ ಲವ್ವಾಗಿತ್ತು. ಅದು ಟೀನೆಜ್‌ನಲ್ಲಿ ಆಗಿದ್ದ ಲವ್. ಅದನ್ನು ಲವ್, ಇನ್‌ಪ್ಯಾಕ್ಚುಯೇಷನ್ ಏನ್ ಬೇಕಾದರೂ ಕರೆಯಬಹುದು. ಇನ್ನು ತಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ ಹೇಳಿ ಎನ್ನುವ ಪ್ರಶ್ನೆಗೆ ಹರಿಪ್ರಿಯಾ ನಾಚಿಕೊಂಡಿದ್ದಾರೆ. ಇದು ಬಹಳ ಜನಕ್ಕೆ ಗೊತ್ತಿಲ್ಲ. ಏನೇನೋ ಕಾಮೆಂಟ್ ಮಾಡಬೇಡಿ. ಹೇಳಿಬಿಡ್ತೀನಿ ಎಂದು ಹೇಳಿದ್ದಾರೆ.
"ನಾನು ಈಗ್ಲೂ ಅಮ್ಮ ಪಕ್ಕ ಮಲಗಿಕೊಳ್ತೀನಿ" ಎಂದು ಹೇಳಿ ಹರಿಪ್ರಿಯಾ ನಾಚಿ ನೀರಾಗಿದ್ದಾರೆ. "ನನ್ನ ಕ್ಲೋಸ್ ಫ್ರೆಂಡ್ಸ್ ಒಬ್ಬಿಬ್ಬರಿಗೆ ಮಾತ್ರ ಇದು ಗೊತ್ತು. ಅವರು ರೇಗಿಸುತ್ತಿರ್ತಾರೆ. ನನಗೆ ಅಮ್ಮನ ಪಕ್ಕ ಮಲಗಿಕೊಳ್ಳುವುದು ಎಂದರೆ ಇಷ್ಟ. ಹೌದು ಅದನ್ನು ಎಲ್ಲರೂ ಮಾಡ್ತಾರೆ. ರಾತ್ರಿ ಅವರವರ ರೂಮ್ ಅಲ್ಲಿ ಅವರು ಮಲಗಬೇಕು ಅಂತ ಎಲ್ಲರೂ ಹೇಳ್ತಾರೆ. ನನಗೆ ನನ್ನ ಅಮ್ಮನ ಜೊತೆ ಮಲಗುವುದು ಎಂದರೆ ಇಷ್ಟ. ಆಕೆಯನ್ನು ತಬ್ಬಿ ಮಲಗುವುದು ಅಭ್ಯಾಸ. ಆಕೆಯನ್ನು ತಬ್ಬಿ ಮಲಗಿದರೆ ಧೈರ್ಯ ಇರುತ್ತದೆ" ಎಂದು ಹೇಳಿದ್ದಾರೆ.

ಫಸ್ಟ್ ಕಿಸ್ ಬಗ್ಗೆ ಮಾತನಾಡಿರುವ ಹರಿಪ್ರಿಯಾ "ನನ್ನ ಆರಂಭದ ದಿನಗಳಲ್ಲಿ ಚಿತ್ರವೊಂದರಲ್ಲಿ ನಾನು ಫಸ್ಟ್ ಕಿಸ್ ಮಾಡಿದ್ದೆ. ನಾನು ಕಂಫರ್ಟಬಲ್ ಆಗಿರಲಿಲ್ಲ. ಮೇಕರ್ಸ್ ನನಗೆ ಬಹಳ ಒತ್ತಾಯ ಮಾಡಿದರು. ಆ ಸೀನ್‌ನಲ್ಲಿ ನೀವು ನೋಡಿರ್ತಾರೆ. ಬರೀ ಕಿಸ್ ಆಗುತ್ತೆ. ಆದರೆ ಅದರ ಹೊರಗೆ ನಾನು ಅಳ್ತಾ ಇದ್ದೆ. ಕಿಸ್ ಮಾಡ್ಬೇಕಂತೆ. ಶಾಟ್‌ನಲ್ಲಿ ಸಿನಿಮಾಗಾಗಿ ಮಾಡ್ಬೇಕಂತೆ ಅಂತ ಅಳ್ತಿದ್ದೆ ಎಂದು ಆ ದಿನವನ್ನು ನೆನೆದು ನಕ್ಕಿದ್ದಾರೆ. ಫಸ್ಟ್ ಕಿಸ್ ಹಂಗಿರುತ್ತೆ ಹಿಂಗಿರುತ್ತೆ ಅಂತ ಎಲ್ಲರೂ ಅಂದುಕೊಳ್ತಾರೆ. ಆದರೆ ಅದು ನನಗೆ ಕೆಟ್ಟ ನೆನಪು" ಎಂದಿದ್ದಾರೆ.
2008ರಲ್ಲಿ ನಟಿ ಹರಿಪ್ರಿಯಾ 'ಮನಸುಗಳ ಮಾತು ಮಧುರ' ಎನ್ನುವ ಕನ್ನಡ ಚಿತ್ರದಲ್ಲಿ ನಟಿಸಿದ್ದರು. ಅದು ಆಕೆಯ ಚೊಚ್ಚಲ ಕನ್ನಡ ಸಿನಿಮಾ. ಆ ಚಿತ್ರದ ನಾಯಕ ಆನಂದ್ ಜೊತೆ ಕಿಸ್ ಸೀನ್‌ನಲ್ಲಿ ನಟಿಸಿದ್ದರು.


Click it and Unblock the Notifications











