twitter
    For Quick Alerts
    ALLOW NOTIFICATIONS  
    For Daily Alerts

    ರಾಜಕೀಯ ರಂಗಕ್ಕೆ ಇಳಿಯುತ್ತಾರಾ 'ನೀರ್ ದೋಸೆ' ಬೆಡಗಿ ಹರಿಪ್ರಿಯಾ?

    |

    ಚಿತ್ರರಂಗದ ನಟರು ಮಾತ್ರವಲ್ಲ, ಅನೇಕ ನಟಿಯರೂ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ನಟಿಯರಾದ ತಾರಾ, ಜಯಮಾಲಾ, ರಮ್ಯಾ, ಶ್ರುತಿ, ಪೂಜಾ ಗಾಂಧಿ, ರಕ್ಷಿತಾ ಪ್ರೇಮ್, ಮಾಳವಿಕಾ ಅವಿನಾಶ್ ಹೀಗೆ ಅನೇಕ ನಟಿಯರು ತಮ್ಮ ಸಿನಿಮಾ ರಂಗದ ಜನಪ್ರಿಯತೆಯ ಮಟ್ಟವನ್ನು ರಾಜಕೀಯದಲ್ಲಿಯೂ ಪರೀಕ್ಷಿಸುವ ಪ್ರಯತ್ನ ನಡೆಸಿದ್ದಾರೆ. ಅದರಲ್ಲಿ ಕೆಲವರು ಸೋಲು-ಗೆಲುವು ಎರಡನ್ನೂ ಕಂಡಿದ್ದಾರೆ.

    ಚಂದನವನದ ಹಾಲಿ ಬೇಡಿಕೆಯ ನಟಿಯರ ಸಾಲಿನಲ್ಲಿರುವ ಹರಿಪ್ರಿಯಾ ಕೂಡ ರಾಜಕೀಯಕ್ಕೆ ಬರುತ್ತಾರೆಯೇ? ಹೀಗೊಂದು ಕುತೂಹಲ ಮೂಡಿದೆ. ಅಭಿಮಾನಿಯೊಬ್ಬರು ಹರಿಪ್ರಿಯಾಗೆ ರಾಜಕೀಯ ಆಸಕ್ತಿಯ ಕುರಿತು ಪ್ರಶ್ನೆ ಮುಂದಿರಿಸಿದ್ದಾರೆ. ಅದಕ್ಕೆ ಹರಿಪ್ರಿಯಾ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರ ನೀಡಿದ್ದಾರೆ. ಅದರಲ್ಲಿ ಅವರು ರಾಜಕೀಯಕ್ಕೆ ಬರುವುದಿಲ್ಲ ಎಂಬ ಖಡಾಖಂಡಿತವಾಗಿ ಹೇಳಿಲ್ಲ. ಬಂದರೂ ಬರಬಹುದು ಎನ್ನುವ ಮೂಲಕ ರಾಜಕೀಯ ಚಟುವಟಿಕೆಗೆ ಧುಮುಕಿದರೂ ಅಚ್ಚರಿಯಿಲ್ಲ ಎಂಬ ಸುಳಿವು ನೀಡಿದ್ದಾರೆ. ಮುಂದೆ ಓದಿ...

    ಹರಿಪ್ರಿಯಾ ಮನೇಲಿ ನಡೀತಿದೆ ಕೊಡೋ ತಗೋಳೋ ಮಾತುಕತೆ: ಮದ್ವೆ ಆಗ್ತಾರಾ ಬೆಡಗಿ?ಹರಿಪ್ರಿಯಾ ಮನೇಲಿ ನಡೀತಿದೆ ಕೊಡೋ ತಗೋಳೋ ಮಾತುಕತೆ: ಮದ್ವೆ ಆಗ್ತಾರಾ ಬೆಡಗಿ?

    ರಾಜಕೀಯಕ್ಕೆ ಬರುವುದು...

    ರಾಜಕೀಯಕ್ಕೆ ಬರುವುದು...

    ನಾನು ಚಿತ್ರರಂಗಕ್ಕೆ ಬರುವಾಗಲೂ ಪ್ಲ್ಯಾನ್ ಮಾಡಿರಲಿಲ್ಲ. ಅದೇ ರೀತಿ ರಾಜಕೀಯಕ್ಕೆ ಹೋಗಬೇಕು ಎಂದು ಅಂದುಕೊಂಡಿಲ್ಲ. ನಾನು ರಾಜಕೀಯಕ್ಕೆ ಹೋಗಬೇಕು ಎಂದು ಏನಾದರೂ ಬರೆದಿದ್ದರೆ ಅದನ್ನು ಯಾರೂ ತಪ್ಪಿಸಿಕೊಳ್ಳೋಕಾಗೊಲ್ಲ ಎಂದು ಹರಿಪ್ರಿಯಾ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ್ದಾರೆ.

    ಶ್ರೀದೇವಿ ಬಯೋಪಿಕ್

    ಶ್ರೀದೇವಿ ಬಯೋಪಿಕ್

    'ನನಗೆ ನಾನಲ್ಲದಿರುವ ಎಲ್ಲ ಪಾತ್ರಗಳನ್ನೂ ಪ್ರಯತ್ನಿಸಬೇಕು ಎನ್ನುವ ಆಸೆ. ಅವುಗಳಲ್ಲಿ ಕೆಲವೊಂದಿಷ್ಟು ನೆರವೇರಿವೆ. ಇನ್ನೂ ತುಂಬಾ ಇವೆ. ಶ್ರೀದೇವಿ ಅವರ ಬಯೋಪಿಕ್ ಮಾಡಬೇಕು ಎಂಬ ಆಸೆ ಇದೆ ಎಂದು ತಮ್ಮ ಮಹತ್ವಾಕಾಂಕ್ಷೆಯ ಪಾತ್ರ ಯಾವುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

    ಮೊದಲ ಬಾರಿ ಉಪ್ಪಿಗೆ ಜೋಡಿಯಾಗ್ತಿದ್ದಾರೆ ಹರಿಪ್ರಿಯಾಮೊದಲ ಬಾರಿ ಉಪ್ಪಿಗೆ ಜೋಡಿಯಾಗ್ತಿದ್ದಾರೆ ಹರಿಪ್ರಿಯಾ

    ನೀರ್ ದೋಸೆ ಮಾಡಿದ್ದೇಕೆ?

    ನೀರ್ ದೋಸೆ ಮಾಡಿದ್ದೇಕೆ?

    ನಟಿ ರಮ್ಯಾ ಮಧ್ಯದಲ್ಲಿಯೇ ಕೈಬಿಟ್ಟು ಹೋದ ನೀರ್ ದೋಸೆ ಚಿತ್ರದ ಪಾತ್ರವನ್ನು ಹೇಗೆ ಮತ್ತು ಏಕೆ ಒಪ್ಪಿಕೊಂಡಿರಿ ಎಂಬ ಅಭಿಮಾನಿಯ ಕುತೂಹಲಕ್ಕೆ, 'ನನಗೆ ಮೊದಲಿನಿಂದಲೂ ಸವಾಲುಗಳೆಂದರೆ ಇಷ್ಟ. ಆಗಲ್ಲ ಎಂದು ಹೇಳಿದರೆ ಯಾಕೆ ಆಗೊಲ್ಲ ಎಂದು ಮಾಡುವವಳು ನಾನು. ಅದೇ ರೀತಿ ನೀರ್ ದೋಸೆಯನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡೆ' ಎಂದಿದ್ದಾರೆ.

    ಮದುವೆ ಆದ್ಮೇಲೆ ನಟಿಸುವುದಿಲ್ಲವಾ?

    ಮದುವೆ ಆದ್ಮೇಲೆ ನಟಿಸುವುದಿಲ್ಲವಾ?

    ಮದುವೆ ಎನ್ನುವುದು ನಟಿಯರ ಪಾಲಿಗೆ ಚಿತ್ರರಂಗದೊಂದಿಗೆ ಕಟ್ಟುವ ಗೋಡೆ. ಅವುಗಳನ್ನು ಮೀರಿ ಮತ್ತೆ ಬಣ್ಣ ಹಚ್ಚುವ ನಟಿಯರ ಸಂಖ್ಯೆ ಕಡಿಮೆ. ಹರಿಪ್ರಿಯಾ ಕೂಡ ಈ ಸೂಚನೆ ನೀಡಿದ್ದಾರೆ. 'ನಾನು ಇಂಡಸ್ಟ್ರಿಯಲ್ಲಿ ಇರೋವಾಗ ನನ್ನ ಹಂಡ್ರೆಡ್ ಪರ್ಸೆಂಟ್ ಡೆಡಿಕೇಷನ್ ಕೊಡ್ತೀನಿ. ಮದುವೆ ಆದಮೇಲೆ ನನ್ನ ಹಂಡ್ರೆಡ್ ಪರ್ಸೆಂಟ್ ಟೈಮ್ ಫ್ಯಾಮಿಲಿಗೆ. ಆದ್ರಿಂದ ಮದುವೆ ಆದ್ಮೇಲೆ ಒಂದು ಚಿಕ್ಕ ವಿರಾಮ ಖಂಡಿತ ಇರುತ್ತೆ' ಎಂದು ತಿಳಿಸಿದ್ದಾರೆ.

    ಒಳ್ಳೆ ಪಾತ್ರಗಳಿಗೆ ಹುಡುಕಾಟ

    ಒಳ್ಳೆ ಪಾತ್ರಗಳಿಗೆ ಹುಡುಕಾಟ

    'ನಾನು ಇಂಡಸ್ಟ್ರಿ ಬ್ಯಾಕ್‌ಗ್ರೌಂಡ್ ಇಲ್ದೇ ಬಂದೆ. ಆದ್ರೆ ಚಿಕ್ ವಯಸ್ಸಿಂದ್ಲೂ ನಾನು ಕಲ್ಚರಲ್ ಆಕ್ಟಿವಿಟಿಗಳಲ್ಲಿ ಮಾಡ್ತಿದ್ರಿಂದ ನಂಗೆ ಸ್ಟೇಜ್ ಫಿಯರ್ ಇರ್ಲಿಲ್ಲ. ಇಂಡಸ್ಟ್ರಿನ ನಾನು ಸೆಲೆಕ್ಟ್ ಮಾಡ್ಕೊಂಡೆ ಅನ್ನೋದ್ಕಿಂತ ಇಂಡಸ್ಟ್ರಿನೇ ನನ್ನ ಸೆಲೆಕ್ಟ್ ಮಾಡ್ಕೊಳ್ತು ಅನ್ಬೋದು. ಕಲೆ ಅನ್ನೋದು ಅಡಿಕ್ಷನ್. ಒಳ್ಳೇ ಪಾತ್ರ ಮಾಡಿದ್ರೆ ಸಿಗೋ ತೃಪ್ತಿನೇ ಬೇರೆ. ಅದ್ಕೆ ಯಾವಾಗ್ಲೂ ಅಂಥ ಪಾತ್ರಗಳ ಹುಡುಕಾಟದಲ್ಲೇ ಇರ್ತೀನಿ' ಎಂದು ತಮ್ಮ ಸಿನಿ ಪಯಣದ ಬಗ್ಗೆ ಹೇಳಿಕೊಂಡಿದ್ದಾರೆ.

    English summary
    Actress Haripriya said if the fate wants i can be in politics and no one can deny it.
    Tuesday, April 14, 2020, 10:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X