ಪುನೀತ್ ರಾಜ್‌ಕುಮಾರ್‌ ನೆನೆದು ಬಿಕ್ಕಿಬಿಕ್ಕಿ ಅತ್ತ ಹರ್ಷಿಕಾ ಪೂಣಚ್ಚ!

ನಟ ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್ ಇಲ್ಲವಾಗಿ ದಿನಗಳು ಕಳೆಯುತ್ತಿವೆ, ವಾರಗಳು ಉರುಳುತ್ತಲಿವೆ. ಆದರೆ ಪುನೀತ್ ರಾಜಕುಮಾರ್ ಅವರು ಇನ್ನಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಇನ್ನೂ ಹಲವರಿಗೆ ಅವರ ಸಾವಿನ ನೋವನ್ನು ತೀರಿಸಿಕೊಳ್ಳಲು ಕೂಡ ಆಗುತ್ತಿಲ್ಲ. ಸಾಕಷ್ಟು ಮಂದಿ ಅಪ್ಪು ಬಗ್ಗೆ ಮಾತನಾಡುತ್ತಲೇ ಇದ್ದಾರೆ, ಅಪ್ಪು ಗುಣಗಾನ ಮಾಡುತ್ತಲೇ ಇದ್ದಾರೆ.

ಕನ್ನಡದ ನಟಿ ಹರ್ಷಿಕಾ ಪೂಣಚ್ಚ ಕೂಡ ಪುನೀತ್ ರಾಜ್‌ಕುಮಾರ್‌ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಅಪ್ಪು ಇಲ್ಲವಾದ ದಿನದಿಂದ ಇಲ್ಲಿ ತನಕ ಹರ್ಷಿಕಾ ಪೂಣಚ್ಚ ಅವರಿಗೆ ಆ ಸುದ್ದಿಯನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.

ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಲೈವ್‌ ಬಂದು ನಟಿ ಹರ್ಷಿಕಾ ಪೂಣಚ್ಚ ಪುನೀತ್‌ರಾಜ್‌ಕುಮಾರ್‌ ಅವರನ್ನು ನೆನೆಪು, ಅವರೊಂದಿಗೆ ಕಳೆದ ಸಮಯವನ್ನು ನೆನೆದು ಅತ್ತಿದ್ದಾರೆ.

ಅಪ್ಪು ನೆನಪುಗಳನ್ನು ಹಂಚಿಕೊಂಡ ನಟಿ ಹರ್ಷಿಕಾ!

ಅಪ್ಪು ನೆನಪುಗಳನ್ನು ಹಂಚಿಕೊಂಡ ನಟಿ ಹರ್ಷಿಕಾ!

ನಟಿ ಹರ್ಷಿಕಾ ಪೂಣಚ್ಚ ಅಪ್ಪು ಜೊತೆಗಿನ ನೆನಪುಗಳನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ. ಪುನೀತ್ ರಾಜಕುಮಾರ್ ಇನ್ನಿಲ್ಲ ಎಂದಾಗ ಅವರಿಗೆ ಆದಂತಹ ಆಘಾತದ ಬಗ್ಗೆ ಹರ್ಷಿಕಾ ಪೂಣಚ್ಚ ಹೇಳಿಕೊಂಡಿದ್ದಾರೆ.

ಜೊತೆಗೆ ಪುನೀತ್‌ ರಾಜ್‌ಕುಮಾರ್‌ ಅವರೊಂದಿಗೆ ಕಳೆದಂತಹ ಸಮಯದ ಬಗ್ಗೆ, ಅಪ್ಪು ವ್ಯಕ್ತಿತ್ವದ ಬಗ್ಗೆ ಹರ್ಷಿಕಾ ಪೂಣಚ್ಚ ಮಾತನಾಡಿದ್ದಾರೆ.

ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡುತ್ತಾ ನಟಿ ಹರ್ಷಿಕಾ ಪೂಣಚ್ಚ ಭಾವುಕರಾದರು. ಜೊತೆಗೆ ದುಖಃ ತಡೆಯದೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಪುನೀತ್ ರಾಜಕುಮಾರ್ ಅವರ ಜೊತೆಗೆ 'ಜಾಕಿ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜಾಕಿ ಚಿತ್ರದ ಶೂಟಿಂಗ್ ವೇಳೆ ಅಪ್ಪು ಜೊತೆಗೆ ಕಳೆದ ಸಮಯದ ಬಗ್ಗೆ ಹರ್ಷಿಕಾ ವಿವರಿಸಿದ್ದಾರೆ.

'ಜಾಕಿ' ಶೂಟಿಂಗ್ ಕ್ಲೈಮ್ಯಾಕ್ಸ್‌ನಲ್ಲಿ ನಡೆದಿದ್ದು ಏನು?

'ಜಾಕಿ' ಶೂಟಿಂಗ್ ಕ್ಲೈಮ್ಯಾಕ್ಸ್‌ನಲ್ಲಿ ನಡೆದಿದ್ದು ಏನು?

ನಟ ಪುನೀತ್‌ ರಾಜ್‌ಕುಮಾರ್‌ ತಮ್ಮ ಜೊತೆಗೆ ಇರುವ ಕಲಾವಿದರನ್ನು ಹೇಗೆ ಕಾಳಜಿ ಇಂದ ನೋಡಿ ಕೊಳ್ಳುತ್ತಾ ಇದ್ದರು ಎನ್ನುವುದನ್ನು ಹರ್ಷಿಕಾ ಪೂಣಚ್ಚ ಹಂಚಿಕೊಂಡಿದ್ದಾರೆ. "ಜಾಕಿ ಸಿನಿಮಾದ ಶೂಟಿಂಗ್ ಕ್ಲೈಮ್ಯಾಕ್ಸ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ಮತ್ತು ನನ್ನನ್ನು ಒಂದು ಗುಂಡಿಗೆ ಹಾಕುತ್ತಾರೆ. ನಮ್ಮನ್ನ ಗುಂಡಿ ಒಳಗೆ ಹಾಕಿ, ಆಮೇಲೆ ಮೇಲೆ ಮಣ್ಣು ಹಾಕಿ ಮುಚ್ಚುತ್ತಾರೆ. ಒಂದಷ್ಟು ಸೆಕೆಂಡ್ ನಾವು ಇಬ್ಬರು ಒಳಗೆ ಇರಬೇಕಿತ್ತು. ಇಬ್ಬರು ಉಸಿರು ಹಿಡಿದು ಇರಬೇಕಿತ್ತು. ಆಮೇಲೆ ನಮ್ಮನ್ನು ಆಚೆ ತೆಗೆದರು. ಹೊರ ಬಂದ ಮೇಲೆ ಅಪ್ಪು ಅವ್ರ ಮುಖದ ಮೇಲೆ ಮಣ್ಣು ಇದೆ, ಅವರ ಮೈ ಎಲ್ಲಾ ಮಣ್ಣಿದೆ. ಆದರೆ ಅವರು ನನ್ನ ಮುಖವನ್ನು ಮೊದಲು ಒರೆಸುತ್ತಾರೆ, ನೀರು ಹಾಕಿ ಹರ್ಷಿಕಾ ನೀನು ಚೆನ್ನಾಗಿ ಇದ್ದೀಯಾ, ಉಸಿರಾಡು ಅಂತಾರೆ. ಇಂಥಹ ಒಳ್ಳೆಯ ಗುಣ ಇರುವ, ದೇವತಾ ಮನುಷ್ಯನ್ನು ಕರೆದುಕೊಳ್ಳುವಷ್ಟು ಕ್ರೂರಿ ಯಾಕೆ ಆಗುತ್ತಾನೆ ದೇವರು" ಎಂದಿದ್ದಾರೆ.

ಹರ್ಷಿಕಾಗೆ ಮೊದಲು ನೋಡಿದ್ದೇ ಅಪ್ಪು ವ್ಯಾನಿಟಿ ವ್ಯಾನ್!

ಹರ್ಷಿಕಾಗೆ ಮೊದಲು ನೋಡಿದ್ದೇ ಅಪ್ಪು ವ್ಯಾನಿಟಿ ವ್ಯಾನ್!

" ಜಾಕಿ ಸಿನಿಮಾದ ಫೈಟ್‌ ದೃಶ್ಯ ಚಿತ್ರೀಕರಣದ ವೇಳೆ ನಾನು ಸೆಟ್‌ನಲ್ಲಿ ಕುಳಿತುಕೊಂಡಿದ್ದೆ. ಆದ ಪುನೀತ್‌ ಸರ್‌ ನನ್ನನ್ನು ನೋಡಿ, ಯಾಕೆ ಆಚೆ ಇದ್ದೀಯ ಹರ್ಷಿಕಾ ನನ್ನ ವ್ಯಾನಿಟಿ ವ್ಯಾನ್‌ನಲ್ಲಿ ರೆಸ್ಟ್‌ ಮಾಡು. ಅಲ್ಲಿ ಏನು ಬೇಕೋ ತಿನ್ನು ಆರಾಮಾಗಿರು. ನಿನ್ನ ದೃಶ್ಯದ ಚಿತ್ರೀಕರಣ ಬಂದಾಗ ಕರೆಯುತ್ತಾರೆ ಎಂದು ಹೇಳಿದ್ದರು. ಇದೇ ಮಾತನ್ನ ನನ್ನ ಅಮ್ಮನಿಗೂ ಅಪ್ಪು ಸರ್ ಹೇಳಿದ್ದರು" ಎಂದು ಜಾಕಿ ಚಿತ್ರದ ಶೂಟಿಂಗ್‌ ಸಂದರ್ಭಗಳನ್ನು ಹರ್ಷಿಕಾ ನೆನಪಿಸಿಕೊಂಡಿದ್ದಾರೆ.

ದೇವತಾ ಮನುಷ್ಯನನ್ನು ದೇವರು ಯಾಕೆ ಕರೆದುಕೊಂಡರು: ಹರ್ಷಿಕಾ ಪೂಣಚ್ಚ!

ದೇವತಾ ಮನುಷ್ಯನನ್ನು ದೇವರು ಯಾಕೆ ಕರೆದುಕೊಂಡರು: ಹರ್ಷಿಕಾ ಪೂಣಚ್ಚ!

"ಎಷ್ಟೋ ಜನ ಇದಾರೆ, ಬೇರೆ ಅವರಿಗೆ ನೋವು ಮಾಡುತ್ತಾರೆ. ಹೆಣ್ಣು ಮಕ್ಕಳಿಗೆ ಹಿಂಸೆ ಮಾಡುತ್ತಾರೆ. ಚಿಕ್ಕ ಮಕ್ಕಳನ್ನು ರೇಪ್ ಮಾಡುತ್ತಾರೆ. ಸಾಕಷ್ಟು ವಿಕೃತ ಮಸ್ಸುಗಳಿವೆ ಅವರು ಆರಾಮಾಗಿ ಇರುತ್ತಾರೆ. ಸಾಕಷ್ಟು ವರ್ಷ ಬದುಕುತ್ತಾರೆ. ಆದರಿಗೆ ಏನು ಆಗಲ್ಲ. ಆದರೆ ಪುನೀತ್‌ ಸರ್ ಅಂತಹ ಒಳ್ಳೆಯವರನ್ನು ಯಾಕೆ ದೇವರು ಇಷ್ಟು ಬೇಗ ಕರೆದುಕೊಂಡು ಬಿಟ್ಟ..?" ಎಂದು ನಟಿ ಹರ್ಷಿಕಾ ಕಣ್ಣೀರು ಹಾಕಿದ್ದಾರೆ.

"ನನ್ನ ತುಂಬಾ ಜನ ಕೇಳಿದರು ಅಪ್ಪು ಸರ್‌ ಅವರನ್ನು ನೋಡಲು ಹೋಗಿಲ್ಲವಾ ಅಂತ? ವಿಚಾರ ಗೊತ್ತಾದ ಕೂಡಲೇ ತಡಿಯೋಕೆ ಆಗಿಲ್ಲ. ಆಸ್ಪತೆಗೆ ಹೋದಾಗಲು ಅವರ ಕಾಲು ಮುಟ್ಟಿ ನಮಸ್ಕರಿಸಿದರೂ ಅವರಿಲ್ಲ ಎನ್ನುವುದನ್ನು ನಂಬುವುದಕ್ಕೆ ಆಗಲಿಲ್ಲ".

"ಅಪ್ಪು ಸರ್‌ ಅವರು ತುಂಬಾ ಜನಕ್ಕೆ ಕ್ಲೋಸ್ ಇದ್ದರು. ಯಾವಾಗ ಸಿಕ್ಕರು ಅವರು ತುಂಬಾ ಖುಷಿ ಇಂದ ನಗುನಗುತ್ತಾ ಮಾತಡುತ್ತಾ ಇದ್ದರು. ಯಾವಾಗಲು ಆರೋಗ್ಯದ ಬಗ್ಗೆ ವಿಚಾರಿಸುತ್ತಾ ಇರುತ್ತಿದ್ದರು. ನಾನು ಆಸ್ಪತ್ರೆಗೆ ಹೋದಾಗ ಅವರು ಏಳುತ್ತಾರೆ, ಮಾತು ಆಡುತ್ತಾರೆ . ಹೇಗಿದಿಯಾ ಹರ್ಷಿಕಾ ಅಂತ ಕೇಳುತ್ತಾರೆ ಅಂತ ನಿರೀಕ್ಷೆ ಮಾಡುತ್ತಾ ಇದ್ದೆ. ಆದರೆ ಇವರು ಎದ್ದೇಳಲಿ ಇಲ್ಲ". ಎಂದು ಹೇಳುತ್ತಾ ನಟಿ ಹರ್ಷಿಕಾ ಪೂಣಚ್ಚ ಭಾವುಕರಾದರು.

More from Filmibeat

English summary
Actress Harshika Poonacha Emotional Talk About Puneeth Rajkumar In Her Insta Live,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X