'ಕಾಸ್ಟಿಂಗ್ ಕೌಚ್' ನಿಂದ ಬಾಲಿವುಡ್ ಸಿನಿಮಾ ಬಿಟ್ಟರಂತೆ ಹರ್ಷಿಕಾ ಪೂಣಚ್ಚ
Recommended Video

ಸ್ಯಾಂಡಲ್ ವುಡ್, ಟಾಲಿವುಡ್, ಬಾಲಿವುಡ್ ಎಲ್ಲ ಕಡೆ 'ಕಾಸ್ಟಿಂಗ್ ಕೌಚ್' ವಿಚಾರದ್ದೆ ಸುದ್ದಿ. ಇನ್ನು ಈಗ 'ಕಾಸ್ಟಿಂಗ್ ಕೌಚ್' ಬಗ್ಗೆ ಕನ್ನಡ ಮತ್ತೊಬ್ಬ ನಟಿ ಮಾತನಾಡಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ತನಗೆ ಆದ ಕೆಟ್ಟ ಅನುಭವವನ್ನು ಕೇಳಿಕೊಂಡಿದ್ದಾರೆ.
ಇಂದು ಅವರ 'ಚಿಟ್ಟೆ' ಸಿನಿಮಾದ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತು. ಈ ವೇಳೆ ಹರ್ಷಿಕಾ ಪೂಣಚ್ಚ 'ಕಾಸ್ಟಿಂಗ್ ಕೌಚ್' ಬಗ್ಗೆ ಹೇಳಿಕೆ ನೀಡಿದ್ದಾರೆ. ''ನನ್ನ ಬಾಲಿವುಡ್ ಸಿನಿಮಾದ ಬಗ್ಗೆ ಪದೇ ಪದೇ ಎಲ್ಲರು ಕೇಳುತ್ತಿದ್ದಾರೆ. ಆದರೆ ಆ ಸಿನಿಮಾವನ್ನು ನಾನು ಮಾಡುತ್ತಿಲ್ಲ. ಹಿಂದಿಯ ಎರಡು ದೊಡ್ಡ ಸಿನಿಮಾದಲ್ಲಿ ನಾನು ನಟನೆ ಮಾಡಬೇಕಿತ್ತು ಆದರೆ 'ಕಾಸ್ಟಿಂಗ್ ಕೌಚ್' ನಿಂದ ನಾನು ಆ ಸಿನಿಮಾವನ್ನು ಕೈ ಬಿಟ್ಟೆ'' ಎಂದು ಹರ್ಷಿಕಾ ಹೇಳಿಕೊಂಡಿದ್ದಾರೆ.

ಹರ್ಷಿಕಾ ಬಾಲಿವುಡ್ ಸಿನಿಮಾ ಮಾಡುತ್ತಾರೆ ಅಂತ ಎರಡು ವರ್ಷದ ಹಿಂದೆ ದೊಡ್ಡ ಸುದ್ದಿ ಆಗಿತ್ತು. ಅದೇ ರೀತಿ ಹರ್ಷಿಕಾ ಎರಡು ಬಿಗ್ ಬಾಲಿವುಡ್ ಸಿನಿಮಾಗಳಲ್ಲಿ ನಟನೆ ಮಾಡಬೇಕಿತ್ತು. ಆ ಸಿನಿಮಾದ ಫೋಟೋಶೂಟ್, ಅಗ್ರಿಮೆಂಟ್ ಎಲ್ಲ ಮುಗಿದ ನಂತರ ಆ ಪ್ರೋಡಕ್ಷನ್ ಹೌಸ್ ಮ್ಯಾನೆಜರ್ ನೀವು ಕಮಿಟ್ ಮೆಂಟ್ ಗೆ ಒಪ್ಪಬೇಕು ಅಂತ ಹೇಳಿದನಂತೆ. ನಂತರ ಆ ಸಿನಿಮಾ ಬಿಟ್ಟು ಅವರ ಫೋನ್ ಕೂಡ ಹರ್ಷಿಕಾ ತೆಗೆಯಲಿಲ್ಲವಂತೆ.
''ನಾನು ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಿನಿಮಾ ಮಾಡಿದ್ದೇನೆ. ಆದರೆ ಸೌತ್ ಇಂಡಸ್ಟ್ರಿಯಲ್ಲಿ ನನಗೆ ಈ ರೀತಿಯ ಅನುಭವ ಆಗಿಲ್ಲ. ಬಾಲಿವುಡ್ ನಲ್ಲಿ ಮಾತ್ರ ಈ ರೀತಿಯ ನನಗೆ ಕೆಟ್ಟ ಅನುಭವ ಆಗಿದೆ.'' ಎಂದು ಅವರು ತಿಳಿಸಿದ್ದಾರೆ. ಈ ಹಿಂದೆಯೇ ಕನ್ನಡದ ನಟಿಯರಾದ ಶೃತಿ ಹರಿಹರನ್, ಹರಿಪ್ರಿಯಾ, ರಾಗಿಣಿ ದ್ವಿವೇದಿ ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೆ ನೀಡಿದ್ದರು.


Click it and Unblock the Notifications











