For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್‌ ಸ್ಟಾರ್ ಯಶ್ ಬಗ್ಗೆ ಹರ್ಷಿಕಾ ಪೂಣಚ್ಚ ಹೇಳಿದ್ದು ಹೀಗೆ

  |

  ಮುದ್ದು ನಟಿ ಹರ್ಷಿಕಾ ಪೂರ್ಣಿಕಾ, 'ಕನ್ನಡ ಫಿಲ್ಮಿಬೀಟ್' ಫೇಸ್‌ಬುಕ್ ಪೇಜ್‌ನಲ್ಲಿ ಲೈವ್ ಬಂದು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.

  ಲೈವ್ ಸಮಯದಲ್ಲಿ ಅಭಿಮಾನಿಗಳು ಹರ್ಷಿಕಾ ಪೂಣಚ್ಚ ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು. ಅಭಿಮಾನಿಯೊಬ್ಬ ನಟ ಯಶ್ ಬಗ್ಗೆ ಅಭಿಪ್ರಾಯ ತಿಳಿಸಿ ಎಂದು ಮನವಿ ಮಾಡಿದ.

  ಇದಕ್ಕೆ ಉತ್ತರಿಸಿದ ಹರ್ಷಿಕಾ ಪೂಣಚ್ಚ ಸಿನಿಮಾ ಉದ್ಯಮದ ತಮ್ಮ ಹಿರಿಯ ಸಹೋದ್ಯೋಗಿ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು.

  ಯಶ್ ಬಗ್ಗೆ ಸ್ವತಃ ಗೌರವಾಧರಗಳನ್ನು ಹೊಂದಿರುವ ಹರ್ಷಿಕಾ ಪೂಣಚ್ಚ, ಯಶ್ ಅವರ ಅಭಿನಯ, ಅಭಿವೃದ್ಧಿ ಎಲ್ಲವುದರ ಬಗ್ಗೆಯೂ ಮಾತನಾಡಿದರು.

  ಯಶ್ ಜೊತೆ ಒಂದು ಸಿನಿಮಾದಲ್ಲಿ ನಟನೆ

  ಯಶ್ ಜೊತೆ ಒಂದು ಸಿನಿಮಾದಲ್ಲಿ ನಟನೆ

  ಯಶ್ ಅವರ ಜೊತೆ ನಾನು ತಮಸ್ಸು ಸಿನಿಮಾದಲ್ಲಿ ನಟಿಸಿದ್ದೇನೆ, ಅವರೊಟ್ಟಿಗೆ ನನ್ನದು ಒಂದೇ ಸೀನ್ ಇತ್ತು. ಆದರೆ ಆ ನಂತರ ಇಬ್ಬರೂ ಒಟ್ಟಿಗೆ ನಟಿಸಲು ಸಾಧ್ಯವಾಗಿಲ್ಲ. ಆದರೆ ಅವರ ಬೆಳವಣಿಗೆಯನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ ಎಂದರು ಹರ್ಷಿಕಾ ಪೂಣಚ್ಚ.

  ಯಶ್ ಪ್ರಗತಿ ನೋಡಿ ಹೆಮ್ಮೆ ಎನಿಸುತ್ತದೆ

  ಯಶ್ ಪ್ರಗತಿ ನೋಡಿ ಹೆಮ್ಮೆ ಎನಿಸುತ್ತದೆ

  ಸಿನಿಮಾ ಹಿನ್ನೆಲೆಯಿಲ್ಲದೆ ಬಂದವರಿಗೆ ಯಶ್ ಆದರ್ಶ. ಅವರು ಬೆಳೆದು ಬಂದ ರೀತಿ ಅನುಕರಣನೀಯ. ಧಾರಾವಾಹಿಗಳಿಂದ ಕರಿಯರ್ ಪ್ರಾರಂಭಿಸಿ ಇಲ್ಲಿವರೆಗೆ ಅವರು ಬೆಳೆದಿರುವುದು ಖುಷಿ ಎನಿಸುತ್ತದೆ ಎಂದು ಹೇಳಿದರು.

  ಯಶ್ ಎಲ್ಲದರಲ್ಲೂ ಪರ್ಫೆಕ್ಟ್

  ಯಶ್ ಎಲ್ಲದರಲ್ಲೂ ಪರ್ಫೆಕ್ಟ್

  ಯಶ್ ಅವರು ಎಲ್ಲದರಲ್ಲೂ ಪರ್ಫೆಕ್ಟ್. ಚೆನ್ನಾಗಿ ಕಾಣುತ್ತಾರೆ, ಚೆನ್ನಾಗಿ ಡೈಲಾಗ್ ಹೇಳುತ್ತಾರೆ. ಅದ್ಭುತವಾಗಿ ನರ್ತಿಸುತ್ತಾರೆ, ಅವರ ಅಭಿನಯ ಸೂಪರ್, ಸಖತ್ ಆಗಿ ಫೈಟ್ ಮಾಡುತ್ತಾರೆ. ಅವರು ಪೂರ್ಣಪ್ರಮಾಣದ ಪ್ಯಾಕೆಜ್ ಎಂದರು ಹರ್ಷಿಕಾ.

  ಕೆಜಿಎಫ್ 2 ಖಂಡಿತಾ ನೋಡ್ತೀನಿ

  ಕೆಜಿಎಫ್ 2 ಖಂಡಿತಾ ನೋಡ್ತೀನಿ

  ಕೆಜಿಎಫ್ 2 ನೋಡ್ತೀರಾ? ಎಂದು ಮತ್ತೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹರ್ಷಿಕಾ, ಖಂಡಿತಾ ನೋಡ್ತೇನೆ. ಕೆಜಿಎಫ್ ಚಿತ್ರ ಕನ್ನಡ ಸಿನಿಮಾರಂಗವನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾದ ಚಿತ್ರ. ಹಾಗಾಗಿ ಕೆಜಿಎಫ್ 2 ಅನ್ನು ನೋಡಿಯೇ ನೋಡುತ್ತೇನೆ ಎಂದರು.

  English summary
  Actress Harshika Poonacha talked about actor Yash. She said his development in industry is inspirational to many.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X