For Quick Alerts
  ALLOW NOTIFICATIONS  
  For Daily Alerts

  ತಾರೆ ಹೇಮಶ್ರೀ ಸಾವಿನ ಪ್ರಕರಣ ಇನ್ನೂ ನಿಗೂಢ

  By Rajendra
  |
  ಕಿರುತೆರೆ ನಟಿ ಹೇಮಶ್ರೀ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಾ ಇನ್ನೂ ನಿಗೂಢವಾಗಿ ಉಳಿದಿದೆ. ಶುಕ್ರವಾರ (ಅ.12) ಬಯಲಿಗೆ ಬಂದ ಹೇಮಶ್ರೀ ಸಾವಿನ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರು ಪೋಲಿಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ.

  ಏತನ್ಮಧ್ಯೆ ಹೇಮಶ್ರೀ ಪತಿ ಸುರೇಂದ್ರ ಬಾಬು ಕಾರು ಚಾಲಕ ಸತೀಶ್ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಆತ ಸಿಕ್ಕಿದರೆ ಮಹತ್ವದ ಮಾಹಿತಿ ಲಭ್ಯವಾಗಲಿದೆ. ಆತನಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

  ಪೊಲೀಸ್ ವಶದಲ್ಲಿರುವ ಸುರೇಂದ್ರ ಬಾಬು ಅವರನ್ನೂ ಪೊಲೀಸರು ವಿಚಾರಣೆ ಒಳಪಡಿಸಿದ್ದಾರೆ. ಆದರೆ ಆತನಿಂದ ನಿಖರವಾದ ಮಾಹಿತಿ ಸಿಗುತ್ತಿಲ್ಲ ಎನ್ನಲಾಗಿದೆ. ಸುರೇಂದ್ರ ಬಾಬು ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನುತ್ತವೆ ಮೂಲಗಳು.

  ಇನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಮಂಗಳವಾರ (ಅ.16) ಪೊಲೀಸರ ಕೈಸೇರುವ ಸಾಧ್ಯತೆಗಳಿವೆ. ಹೇಮಶ್ರೀ ಆಪ್ತಗೆಳೆಯ ಎನ್ನಲಾಗಿರುವ ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಆತನನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.

  ಆಂಧ್ರಪದೇಶದ ಅನಂತಪುರದ ಫಾರ್ಮ್ ಹೌಸ್ ಮಾಲೀಕ ಮುರಳಿಯನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹೇಮಶ್ರೀ ಚಿತಾಭಸ್ಮ ವಿಸರ್ಜನೆಗಾಗಿ ವಾರಾಣಾಸಿಗೆ ಹೋಗಿದ್ದ ಅವರ ಪೋಷಕರು ಮಂಗಳವಾರ (ಅ.16) ಬೆಂಗಳೂರಿಗೆ ಹಿಂತಿರುಗುತ್ತಿದ್ದಾರೆ ಎಂಬ ಮಾಹಿತಿಯೂ ಇದೆ. (ಏಜೆನ್ಸೀಸ್)

  English summary
  Kannada small screen actress Hemashree death still mysterious. Her husband R Surendra Babu's car driver Satish is still on the run. The police are awaiting the report of Forensic Science Laboratory to corroborate various theories, including the motive and place of the crime.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X