30 ವರ್ಷದ ಈ ನಟಿಗೆ ಸಿಕ್ಕಿದೆ ಶಿವಣ್ಣನ ಜೊತೆ ನಟಿಸೋ ಚಾನ್ಸ್

By Naveen

ಶಿವರಾಜ್ ಕುಮಾರ್ ಅವರ 'ಹರಿಹರ' ಸಿನಿಮಾದ ಟೈಟಲ್ ಬದಲಾಗಿದೆ. ಈ ಚಿತ್ರಕ್ಕೆ 'ದ್ರೋಣ' ಎಂಬ ಟೈಟಲ್ ಫಿಕ್ಸ್ ಆಗಿದೆ. ಜೊತೆಗೆ 'ದ್ರೋಣ' ಚಿತ್ರದ ಕೆಲವು ಫೋಟೋಗಳು ನಿನ್ನೆ ಬಿಡುಗಡೆಯಾಗಿವೆ.

'ದ್ರೋಣ' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಶಿಕ್ಷಕನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಮಲೆಯಾಳಂ ಬೆಡಗಿ ಜೋಡಿಯಾಗಿದ್ದಾರೆ. ಈಗಾಗಲೇ ಶಿವಣ್ಣನ ಜೊತೆಗೆ ಅನೇಕ ಮಲೆಯಾಳಂ ನಟಿಯರು ನಟಿಸಿದ್ದು, ಈಗ ಆ ಸಾಲಿಗೆ ಹೊಸ ಹುಡುಗಿ ಸೇರಿಕೊಂಡಿದ್ದಾರೆ.

ಅಂದಹಾಗೆ, 'ದ್ರೋಣ' ಸಿನಿಮಾದ ನಾಯಕಿ ಯಾರು ಅವರ ಕೆಲವು ಸಂಗತಿಗಳು ಮುಂದಿದೆ ಓದಿ..

ಮಲೆಯಾಳಂ ನಟಿ ಇನಿಯಾ

ಮಲೆಯಾಳಂ ನಟಿ ಇನಿಯಾ

ಶಿವರಾಜ್ ಕುಮಾರ್ ಅವರ 'ದ್ರೋಣ' ಸಿನಿಮಾಗೆ ಮಲೆಯಾಳಂ ನಟಿ ಇನಿಯಾ ಆಯ್ಕೆ ಆಗಿದ್ದಾರೆ. ಮೂಲತಃ ಕೇರಳದವರಾದ ಇನಿಯಾ ಬಾಲ ನಟಿಯಾಗಿ ಟೆಲಿಫಿಲ್ಮ್ ಗಳಲ್ಲಿ ನಟಿಸಿದ್ದಾರೆ. 30 ವರ್ಷ ತುಂಬಿರುವ ಈ ನಟಿ ಬಿ ಬಿ ಎ ಮುಗಿಸಿದ್ದಾರೆ.

ಸೀರಿಯಲ್ ನಿಂದ ಸಿನಿಮಾ

ಸೀರಿಯಲ್ ನಿಂದ ಸಿನಿಮಾ

ನಟಿ ಇನಿಯಾ ಮೊದಲು ಮಲೆಯಾಳಂ ಸೀರಿಯಲ್ ಗಳಲ್ಲಿ ನಟಿಸಿದ್ದರು. ಆ ನಂತರ 2004 ಸಿನಿಮಾ ಜರ್ನಿ ಶುರು ಮಾಡಿದರು. ವಿಶೇಷ ಅಂದರೆ ಇನಿಯಾ ಅವರ ತಂಗಿ ಸ್ವಾತಿ ಕೂಡ ಮಲೆಯಾಳಂ ನಲ್ಲಿ ಕಿರುತೆರೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ರಾಜ್ಯ ಪ್ರಶಸ್ತಿ ಬಂದಿದೆ

ರಾಜ್ಯ ಪ್ರಶಸ್ತಿ ಬಂದಿದೆ

ಪ್ರಮುಖವಾಗಿ ಮಲೆಯಾಳಂ, ತಮಿಳು ಭಾಷೆಗಳಲ್ಲಿ ನಟಿಸಿರುವ ಇನಿಯಾ ತೆಲುಗಿನಲ್ಲಿ ಒಂದು ಸಿನಿಮಾ ಮಾಡಿದ್ದಾರೆ. 'ವಾಘೈ ಸೂಡಾ ವಾ' (Vaagai Sooda Vaa) ಎಂಬ ಸಿನಿಮಾದ ನಟನೆಗಾಗಿ ತಮಿಳುನಾಡು ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಸದ್ಯ ಇನಿಯಾ 40ಕ್ಕೂ ಹೆಚ್ಚು ಭಾಷೆಗಳಲ್ಲಿ ನಟಿಸಿದ್ದಾರೆ.

ಕನ್ನಡದಲ್ಲಿ ಎರಡನೇ ಸಿನಿಮಾ

ಕನ್ನಡದಲ್ಲಿ ಎರಡನೇ ಸಿನಿಮಾ

ಇನಿಯಾ ಸೌತ್ ಚಿತ್ರರಂಗದ ಎಲ್ಲ ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 2015ರಲ್ಲಿ ತೆರೆ ಕಂಡ 'ಆಲೋನ್' ಚಿತ್ರದಲ್ಲಿ ಸಹ ಅವರು ಕಾಣಿಸಿಕೊಂಡಿದ್ದರು. ಅದು ಅವರ ಮೊದಲ ಕನ್ನಡ ಸಿನಿಮಾವಾಗಿದ್ದು, ಆ ನಂತರ ಈಗ 'ದ್ರೋಣ' ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.

ಜೂನ್ 22ಕ್ಕೆ ಸಿನಿಮಾ ಲಾಂಚ್

ಜೂನ್ 22ಕ್ಕೆ ಸಿನಿಮಾ ಲಾಂಚ್

'ದ್ರೋಣ' ಸಿನಿಮಾದ ಮುಹೂರ್ತ ಇದೇ ತಿಂಗಳ 22ಕ್ಕೆ ನಡೆಯಲಿದೆ. ದ್ರೋಣಾ ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರವಾಗಿದ್ದು ಪ್ರಮೋದ್ ಚಕ್ರವರ್ತಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಇನ್ನು ಜಗದೀಶ್ ವಾಲಿ ಚಿತ್ರಕ್ಕೆ ಕ್ಯಾಮೆರಾ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು, ರಾಮಕೃಷ್ ಸಂಗೀತ ನಿರ್ದೇಶಕರಾಗಿದ್ದಾರೆ.

More from Filmibeat

English summary
Malayalam actress Iniya is selected to play lead opposite Kannada Actor Shivaraj kumar in Drona.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X