ಡಾಲಿ 'ಭೈರವ ಗೀತ' ಚಿತ್ರಕ್ಕೆ ಸಿಕ್ಕಾಯ್ತು ನಾಯಕಿ
Recommended Video

ಸ್ಪೆಷಲ್ ಸ್ಟಾರ್ ಡಾಲಿ ಧನಂಜಯ ಅಭಿನಯದ ತೆಲುಗು ಸಿನಿಮಾ 'ಭೈರವ-ಗೀತ' ಚಿತ್ರೀಕರಣ ಭರದಿಂದ ಸಾಗಿದೆ. ನವ ನಿರ್ದೇಶಕ ಸಿದ್ದಾರ್ಥ್ ಆಕ್ಷನ್ ಕಟ್ ನಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿದೆ.
'ಭೈರವ ಗೀತ' ಸಿನಿಮಾ ನಿರ್ಮಾಪಕ ರಾಮ್ ಗೋಪಾಲ್ ವರ್ಮ ಅವ್ರೇ ನಾಯಕಿಯನ್ನು ಆಯ್ಕೆ ಮಾಡಿದ್ದಾರೆ. ಡಾಲಿ ಜೊತೆ ಗೀತ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿಯ ಹೆಸರು ಇರಾ.

ಇರಾ, ಆರ್ ಜಿ ವಿ ಪ್ರೊಡಕ್ಷನ್ ನಿಂದಲೇ ತಮ್ಮ ವೃತ್ತಿ ಜೀವನ ಆರಂಭಿಸುತ್ತಿದ್ದಾರೆ. ಹೈದ್ರಾಬಾದ್ ಹಳ್ಳಿಯೊಂದರಲ್ಲಿ ಚಿತ್ರೀಕರಣ ಶುರುವಾಗಿದ್ದು ಇರಾ ಕೂಡ ಈಗಾಗಲೇ ಶೂಟಿಂಗ್ ನಲ್ಲಿ ಭಾಗಿ ಆಗಿದ್ದಾರೆ.

ರಾಮ್ ಗೋಪಾಲ್ ವರ್ಮ ಹಾಗೂ ಭಾಸ್ಕರ್ ಜಂಟಿಯಾಗಿ ಭೈರವ-ಗೀತಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಆರ್ ಜಿ ವಿ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಸಿದ್ದಾರ್ಥ್ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹಿಂಸಾಚಾರ ಪೀಡಿತ ವರ್ಗದಲ್ಲಿ ಪ್ರೀತಿ ಕಥೆ ಹೇಳುವ ಚಿತ್ರ ಭೈರವ ಗೀತ. ದಬ್ಬಾಳಿಕೆ ಮಾಡುವ ಭೂ ಮಾಲೀಕನ ಮಗಳ ಪಾತ್ರವನ್ನು ಇರಾ ಕಾಣಿಸಿಕೊಳ್ಳುತ್ತಿದ್ದಾರೆ


Click it and Unblock the Notifications











