For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಮರಳಿದ ಮೂರು ತಿಂಗಳ ಬಾಣಂತಿ ಇಷಾ

  By Rajendra
  |

  ಸುಮಾರು ಹದಿನಾಲ್ಕು ವರ್ಷಗಳ ಗ್ಯಾಪ್ ನ ಬಳಿಕ ಬಾಲಿವುಡ್ ಚಾರ್ಮಿಂಗ್ ಹೀರೋಯಿನ್ ಇಷಾ ಕೊಪ್ಪಿಕರ್ ಕನ್ನಡಕ್ಕೆ ಮರಳಿದ್ದಾರೆ. ಕನ್ನಡ ಚಿತ್ರರಸಿಕರಿಗೆ ಇಷಾ ಬಹಳ ಚೆನ್ನಾಗಿ ಪರಿಚಯ ಇರುವಂತಹ ಹೀರೋಯಿನ್. ಇದೀಗ 'ಲೂಟಿ' ಸಿನಿಮಾದಲ್ಲಿ ಅವರು ಖಾಕಿ ಖದರ್ ತೋರಿಸಲು ಮತ್ತೆ ಬಣ್ಣ ಹಚ್ಚಿದ್ದಾರೆ.

  ಕ್ರೇಜಿಸ್ಟಾರ್ ರವಿಚಂದ್ರನ್ ಅವರ 'ಓ ನನ್ನ ನಲ್ಲೆ', ವಿಷ್ಣು ಅವರ 'ಸೂರ್ಯವಂಶ' ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದ ಚೆಲುವೆ ಇವರು. ಈ ಎರಡು ಸಿನಿಮಾಗಳ ಜೊತೆಗೆ ' ಹ್ಞೂಂ ಅಂತೀಯಾ ಊಹ್ಞೂಂ ಅಂತೀಯಾ' ಸಿನಿಮಾ ಮಾಡಿಹೋಗಿದ್ದ ಇಷಾ, ಇದೀಗ 14 ವರ್ಷಗಳ ಬಳಿಕ 'ಲೂಟಿ' ಸಿನಿಮಾ ಮೂಲಕ ಚಿತ್ರರಸಿಕರ ಹೃದಯ ಲೂಟಿ ಮಾಡಲು ಆಗಮಿಸಿದ್ದಾರೆ.

  ಮೂರು ತಿಂಗಳ ಹಿಂದಷ್ಟೇ ತಾಯಿಯಾಗಿದ್ದ ಇಷಾ ಇನ್ನೂ ಬಾಣಂತನದ ಸುಖವನ್ನು ಅನುಭವಿಸುತ್ತಿದ್ದಾರೆ. ಚಿತ್ರದ ಹಾಡನ್ನು ಮುಗಿಸುವ ಸಲುವಾಗಿ ಬಾಣಂತನವನ್ನೂ ಲೆಕ್ಕಿಸದೆ ಇಷಾ ಹೆಜ್ಜೆ ಹಾಕಿರುವುದು ವಿಶೇಷ. ಈ ಚಿತ್ರದ ಹಾಡು ಕಲರ್ ಫುಲ್ ಆಗಿ ಮೂಡಿಬಂದಿದ್ದು ಶೀಘ್ರದಲ್ಲೇ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.

  ಮೂರು ತಿಂಗಳ ಬಾಣಂತಿಯಾದರೂ ತಮ್ಮ ಸೊಂಟವನ್ನು ಹದಿನಾರರ ಬಾಲೆಯರು ನಾಚುವಂತೆ ಬಳುಕಿಸಿ ಚಿತ್ರರಸಿಕರ ಗಮನಸೆಳೆದಿದ್ದಾರೆ. ಚಿತ್ರದಲ್ಲಿ ಅವರದು ಪೊಲೀಸ್ ಆಫೀಸರ್ ಪಾತ್ರ. ಮೂರು ತಿಂಗಳ ಬಾಣಂತಿಯ ಮಸ್ತ್ ಡಾನ್ಸ್ ನೋಡಲು ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುವಂತಾಗಿದೆ.

  ಖಳನಟರ ಅಡ್ಡಕ್ಕೆ ಎಂಟ್ರಿಕೊಡುವ ಇಮ್ಯಾಜಿನೇಷನ್ ಸಾಂಗ್ ಇದು. ಅಂಡರ್ ಕವಲ್ ಕಾಪ್ ಆಗಿ ಅವರು ಬಂದು ಈ ಹಾಡಿನಲ್ಲಿ ಹೆಜ್ಜೆ ಹಾಕುವಂತಹ ಸನ್ನಿವೇಶವಿದು ಎನ್ನುತ್ತಾರೆ ಹಾಡಿಗೆ ನೃತ್ಯ ಸಂಯೋಜನೆ ಮಾಡಿರುವ ಇಮ್ರಾನ್ ಸರ್ದಾರಿಯಾ. ಕಂಠೀರವ ಸ್ಟುಡಿಯೋದಲ್ಲಿ ಹಾಡನ್ನು ಚಿತ್ರೀಕರಣ ಮಾಡಿಕೊಳ್ಳಲಾಗಿದೆ.

  ಗಿರೀಶ್ ಕಂಪ್ಲಾಪುರ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ಈ ಹಾಡಿನಲ್ಲಿ ಧ್ರುವ ಶರ್ಮಾ ಸಹ ಇದ್ದಾರೆ. ಸಾಮಾನ್ಯವಾಗಿ ತಾಯಿಯಾದ ಮೇಲೆ ಬಹುತೇಕ ತಾರೆಗಳು ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೆ. ಆದರೆ ಇಷಾ ಮಾತ್ರ ಐಟಂ ಗರ್ಲ್ ನೆನಪಿಸುವಂತೆ ಹೆಜ್ಜೆ ಹಾಕಿ ಎಲ್ಲರ ಗಮನಸೆಳೆದಿರುವುದು ವಿಶೇಷ. (ಫಿಲ್ಮಿಬೀಟ್ ಕನ್ನಡ)

  English summary
  Bollywood’s Khallas girl Isha Koppikar made her mark in Kannada films with O Nanna Nalle, Suryavamsha and Hoo Anthiya Uhoo Anthiya back in 2000. Isha is now back in action as Durga Bhavani in the film Looti to be directed by Girish Kamplapur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X