Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮದುವೆಯಾದ ಐದೇ ದಿನಕ್ಕೆ ಸಿಹಿಸುದ್ದಿ ಕೊಟ್ಟ 'ಜಾಕಿ' ಭಾವನಾ

ಜಾಕಿ ಭಾವನಾ ಕಳೆದ ಐದು ದಿನಗಳ ಹಿಂದೆಯಷ್ಟೇ ಕನ್ನಡ ಸಿನಿಮಾ ನಿರ್ಮಾಪಕ ನವೀನ್ ಜೊತೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ. ಕರ್ನಾಟಕದ ಸೊಸೆ ಆಗಿರುವ ನಟಿ ಭಾವನಾ ಈಗಾಗಲೇ ಬೆಂಗಳೂರಿಗೆ ಬಂದಾಗಿದೆ.
ಕೇರಳದಲ್ಲಿ ಮದುವೆ ಹಾಗೂ ಆರತಕ್ಷತೆ ಮುಗಿಸಿರುವ ನವ ಜೋಡಿ ಫೆಬ್ರವರಿ 4ರಂದು ಕನ್ನಡ ಸಿನಿಮಾರಂಗದ ಕಲಾವಿದರಿಗೆ ಹಾಗೂ ಸ್ನೇಹಿತರಿಗಾಗಿ ಆರತಕ್ಷತೆಯನ್ನ ಆಯೋಜಿಸಿದೆ. ಮದುವೆಯಾಗಿ ಇನ್ನೂ ವಾರ ಕಳೆಯುವ ಮುನ್ನವೇ ನಟಿ ಭಾವನಾ ತಮ್ಮ ಅಭಿಮಾನಿಗಳಿಗೆ ಹಾಗೂ ಕನ್ನಡಿಗರಿಗೆ ಸಿಹಿ ಸುದ್ದಿಯನ್ನ ನೀಡಿದ್ದಾರೆ.
ಪುಷ್ಪಕ ವಿಮಾನ ಏರಿದ ಪ್ರಜ್ವಲ್ ದೇವರಾಜ್
ಮದುವೆ ಸಂಭ್ರಮದಲ್ಲೇ ನಟಿ ಕೊಟ್ಟ ಆ ಸಿಹಿಸುದ್ದಿ ಏನು? ಬೆಂಗಳೂರಿಗೆ ಬಂದ ತಕ್ಷಣ ಈ ವಿಚಾರವನ್ನ ಅಭಿಮಾನಿಗಳಿಗೆ ಭಾವನಾ ನೀಡಿದ್ದೇಕೆ? ಇವೆಲ್ಲವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಮದುವೆಯ ಸಂಭ್ರಮದಲ್ಲೇ ಸಿಹಿ ಸುದ್ದಿ
ನಟಿ ಜಾಕಿ ಭಾವನಾ ಮದುವೆಯ ನಂತರ ಅಭಿನಯಿಸುವ ಮೊದಲ ಸಿನಿಮಾ ಬಗ್ಗೆ ಸುದ್ದಿ ಕೊಟ್ಟಿದ್ದಾರೆ. ಖುಷಿ ವಿಚಾರ ಅಂದರೆ ಕರ್ನಾಟಕದ ಸೊಸೆ ಆಗಿರುವ ಭಾವನಾ ಅಭಿನಯಿಸುತ್ತಿರುವುದು ಕನ್ನಡ ಚಿತ್ರದಲ್ಲಿ.

ಪ್ರಜ್ವಲ್ ಜೊತೆ ಭಾವನಾ ಅಭಿನಯ
ಪ್ರಜ್ವಲ್ ದೇವರಾಜ್ ಅಭಿನಯದ 30ನೇ ಚಿತ್ರದಲ್ಲಿ ಭಾವನಾ ನಾಯಕಿಯಾಗಿ ಅಭಿನಯಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈಗಾಗಲೇ ಸಿನಿಮಾದ ಮಹೂರ್ತ ಮಾಡಿರುವ ಚಿತ್ರತಂಡ ಫೆಬ್ರವರಿ ಅಂತ್ಯದಲ್ಲಿ ಚಿತ್ರೀಕರಣ ಶುರು ಮಾಡಲಿದ್ದಾರೆ.

ಅಭಿನಯಿಸಿದ ಸಿನಿಮಾಗಳು ಹಿಟ್
ಜಾಕಿ, ಅಣ್ಣ ಬಾಂಡ್, ಬಚ್ಚನ್, ವಿಷ್ಣುವರ್ಧನ ಹೀಗೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಭಾವನಾ ಕನ್ನಡಕ್ಕೆ ಲಕ್ಕಿ ನಟಿ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಆಕ್ಟ್ ಮಾಡಿರುವ ಎಲ್ಲಾ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿವೆ.

ಪಾತ್ರಕ್ಕೆ ಜೀವ ತುಂಬುವ ನಟಿ
ಮಲೆಯಾಳಂ ಸಿನಿಮಾರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ಭಾವನಾ ತಾವು ಅಭಿನಯಿಸುವ ಪಾತ್ರಗಳಿಗೆ ಜೀವ ತುಂಬುವಂತಹ ನಟಿ. ಯಾವುದೇ ಪಾತ್ರವನ್ನ ನಿರ್ವಹಿಸುವಂತಹ ಸಾಮರ್ಥ್ಯವನ್ನು ಹೊಂದಿದ್ದಾರೆ ಇದೇ ಕಾರಣದಿಂದ ಚಿತ್ರಕ್ಕೆ ಭಾವನಾ ಅವರನ್ನ ಆಯ್ಕೆ ಮಾಡಿಕೊಂಡಿದೆ ಸಿನಿಮಾತಂಡ.

ಸಿನಿಮಾ ಬಗ್ಗೆ ಮಾಹಿತಿ
ಪುಷ್ಪಕ ವಿಮಾನ ಚಿತ್ರವನ್ನ ನಿರ್ಮಾಣ ಮಾಡಿದ ಎ ಆರ್ ವಿಖ್ಯಾತ್, ಪ್ರಜ್ವಲ್ ಅಭಿನಯದ 30ನೇ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ನವ ನಿರ್ದೇಶಕ ನರಸಿಂಹ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದು ಮಫ್ತಿ ಸಿನಿಮಾ ಖ್ಯಾತಿಯ ನವೀನ್ ಕುಮಾರ್ ಕ್ಯಾಮೆರಾ ವರ್ಕ್ ಮಾಡಲಿದ್ದಾರೆ.