ಕನ್ನಡ ಕಲಿತ ಜಾಕ್ವೆಲಿನ್ ಬೆಂಗಳೂರಿಗೆ ಬರ್ತಿದ್ದಾರೆ!
ನಟ ಕಿಚ್ಚ ಸುದೀಪ್ ಅಭಿನಯದ 'ವಿಕ್ರಂತ್ ರೋಣ' ಸಿನಿಮಾ ದಿನದಿಂದ ದಿನಕ್ಕೆ ಹೆಚ್ಚಿನ ಹೈಪ್ ಪಡೆದುಕೊಳ್ಳುತ್ತಾ ಇದೆ. ಒಂದಲ್ಲಾ ಒಂದು ವಿಚಾರದ ಮೂಲಕ ಸದ್ದು ಮಾಡುತ್ತಾ ಇರುತ್ತೆ. ಅದರಲ್ಲೂ ನಟಿ ಜಾಕ್ವೆಲಿನ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಡಾನ್ಸ್ ಮಾಡಿರುವ 'ಗಡಂಗ್ ರಕ್ಕಮ್ಮ' ಹಾಡು ವೈರಲ್ ಆಗಿದೆ.
ಜೊತೆಗೆ ನಟ ಸುದೀಪ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕನ್ನಡವನ್ನು ಕಳಿಸಿ ಕೊಟ್ಟಿದ್ದರು. ನಟಿ ಜಾಕ್ವೆಲಿನ್ ಕನ್ನಡವನ್ನು ಕಲಿತು ಹಾಗೆ ಹೇಳಿ ಸೈ ಎನಿಸಿಕೊಂಡಿದ್ದರು. ಈಗ ಮತ್ತೆ ಈ ಜೋಡಿ ಕನ್ನಡದ ವಿಚಾರಕ್ಕೆ ಸುದ್ದಿ ಹಾಡುತ್ತಾ ಇದೆ.
ಈ ಬಾರಿ ಜಾಕ್ವೆಲಿನ್ ಮತ್ತೆ ಕನ್ನಡ ಮಾತನಾಡಿದ್ದಾರೆ. ಈ ಬಾರಿ ಕೊಂಚ ಉದ್ದನೆಯ ಡೈಲಾಗ್ ಹೇಳಿದ್ದಾರೆ ಜಾಕ್ವೆಲಿನ್. 'ವಿಕ್ರಾಂತ್ ರೋಣ' ಸಿನಿಮಾದ ಬಗ್ಗೆ ಮಾತಾನಾಡಿ ಎಲ್ಲರೂ ಸಿನಿಮಾ ನೋಡುವಂತೆ ಹೇಳಿದ್ದಾರೆ. ಇರದ ಜೊತೆಗೆ ಮತ್ತೊಂದು ವಿಚಾರ ರಿವೀಲ್ ಮಾಡಿದ್ದಾರೆ. ಅದು ಏನು ಎನ್ನುವುದನ್ನು ಮುಂದೆ ಓದಿ...
ಮುದ್ದಾಗಿ ಕನ್ನಡ ನುಡಿದ ಜಾಕ್ವೆಲಿನ್!
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತೆ ಕನ್ನಡ ಮಾತಾಡಿದ್ದಾರೆ. ಈ ಬಾರಿ ಸುದೀಪ್ ಗೆ ಜಾಕ್ವೆಲಿನ್ ಏನನ್ನೂ ಹೇಳಿಕೊಟ್ಟಿಲ್ಲ. ಸ್ವತಃ ಜಾಕ್ವೆಲಿನ್ ತಾನೆ ಒಂದಷ್ಟು ಕನ್ನಡ ಪದಗಳನ್ನು ಕಲಿತು ಮಾತನಾಡಿದ್ದಾರೆ. "ನಮಸ್ಕಾರ ಎಲ್ಲರಿಗೂ.. ರಾ..ರಾ. ರಕ್ಕಮ್ಮ ದೊಡ್ಡ ಹಿಟ್ ಆಗಿದೆ. ಊರಲ್ಲಿ ಎಲ್ಲಾ ಇನ್ಮೇಲೆ ಒಂದೇ ಹೆಸರು ವಿಕ್ರಾಂತ್ ರೋಣ." ಎಂದು ಕನ್ನಡದಲ್ಲಿ ಹೇಳಿದ್ದಾರೆ ಜಾಕ್ವೆಲಿನ್.

ಸದ್ಯದಲ್ಲೇ ಬೆಂಗಳೂರಿಗೆ ಜಾಕ್ವೆಲಿನ್!
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವ್ರನ್ನ ನೀವೂ ನೋಡಬೇಕು, ಭೇಟಿ ಮಾಡಬೇಕು ಎಂದು ಕೊಂಡಿದ್ದರೆ, ಅದು ಸದ್ಯದಲ್ಲೇ ನೆರವೇರಲಿದೆ. ಬೆಂಗಳೂರಿನಲ್ಲಿ ಇರುವವರಿಗೆ ಇದೊಂದು ಅವಕಾಶ 'ವಿಕ್ರಾಂತ್ ರೋಣ' ಸಿನಿಮಾದ ಮೂಲಕ ಸಿಗಲಿದೆ. ಹೌದು ಯಾಕೆಂದರೆ ನಟಿ ಜಾಕ್ವೆಲಿನ್ ಬೆಂಗಳೂರಿಗೆ ಬರುತ್ತಿದ್ದಾರೆ. ಸದ್ಯದಲ್ಲೆ ದಿನಾಂಕವನ್ನು ಚಿತ್ರತಂಡ ಪ್ರಕಟ ಮಾಡಲಿದೆ. ಈ ವಿಚಾರವನ್ನು ನಟಿ ಜಾಕ್ವೆಲಿನ್ ತಮ್ಮ ಹೊಸ ವಿಡಿಯೋದಲ್ಲಿ ರಿವೀಲ್ ಮಾಡಿದ್ದಾರೆ.
ಮೊದಲ ವಿಡಿಯೋದಲ್ಲಿ ಏನಿತ್ತು!
ಕಳೆದ ಬಾರಿಯ ವಿಡಿಯೋದಲ್ಲಿ ಸುದೀಪ್ ಜಾಕ್ವೆಲಿನ್‌ಗೆ ಕನ್ನಡ ಮಾತಡಲು ಹೇಳಿಕೊಟ್ಟಿದ್ದರು. "ಕರ್ನಾಟಕದ ಎಲ್ಲಾ ನನ್ನ ಸ್ನೇಹಿತರಿಗೆ ಈ ಜಾಕ್ವೆಲಿನ್ ಮಾಡುವ ನಮಸ್ಕಾರಗಳು. ರಕ್ಕಮ್ಮ ಬೇಗ ಬರ್ತಾ ಇದಿನಿ." ಎಂದು ಕನ್ನಡದಲ್ಲಿ ಹೇಳುವಂತೆ ಜಾಕ್ವೆಲಿನ್‌ಗೆ ಸುದೀಪ್ ಸವಾಲು ಹಾಕುತ್ತಾರೆ. ತೊದಲು ನುಡಿಯಲ್ಲೇ ಜಾಕ್ವೆಲಿನ್ ಸುದೀಪ್ ಹೇಳಿಕೊಟ್ಟ ಕನ್ನಡದ ನುಡಿಗಳನ್ನು ಕನ್ನಡದಲ್ಲೇ ಹೇಳುತ್ತಾರೆ.

ಜುಲೈ 28ರಿಂದ 'ವಿಕ್ರಾಂತ್ ರೋಣ'ನ ಅಬ್ಬರ!
ಇನ್ನು ವಿಕ್ರಾಂತ್ ರೋಣ ಸಿನಿಮಾ ಜುಲೈ 28ಕ್ಕೆ ತೆರೆಗೆ ಬರಲಿದೆ. ಸಿನಿಮಾ ರಿಲೀಸ್‌ಗೆ ಇನ್ನು ಎರಡು ತಿಂಗಳು ಬಾಕಿ ಇದೆ. ಆದರೆ ಅದಾಗಲೇ ಸಿನಿಮಾದ ಪ್ರಚಾರವನ್ನು ಚಿತ್ರತಂಡ ಆರಂಭಿಸಿದೆ. ವಿಕ್ರಾಂತ್ ರೋಣ ಮೊದಲ ಹಾಡು ರಕಮ್ಮ ಹಿಟ್ ಲಿಸ್ಟ್ ಸೇರಿದೆ. ಚಿತ್ರದ ಮುಂದಿನ ಅಪ್ಡೇಟ್‌ಗಾಗಿ ಸಿನಿಪ್ರೇಕ್ಷಕರು ಕಾಯುತ್ತಾ ಇದ್ದಾರೆ.


Click it and Unblock the Notifications











