twitter
    For Quick Alerts
    ALLOW NOTIFICATIONS  
    For Daily Alerts

    ಅಣ್ಣಾವ್ರನ್ನು 'ರಾಜ್' ಎಂದು ಕರೆಯುತ್ತಿದ್ದ ಏಕೈಕ ನಟಿ ಜಯಂತಿ!

    |

    ಡಾ ರಾಜ್ ಕುಮಾರ್ ಜೊತೆ ಅತಿ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಖ್ಯಾತಿ ಜಯಂತಿ ಅವರದ್ದು. ಅಣ್ಣಾವ್ರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಂಡರಿಬಾಯಿ, ಲೀಲಾವತಿ, ಭಾರತಿ, ಕಲ್ಪನಾ, ಬಿ ಸರೋಜಾದೇವಿ, ಆರತಿ ಹೀಗೆ ಅನೇಕ ನಟಿಯರು ವರನಟನ ಜೊತೆ ನಟಿಸಿದ್ದರೂ, ಜಯಂತಿ ಸ್ವಲ್ಪ ವಿಶೇಷ ಮತ್ತು ವಿಶಿಷ್ಠ ಎನಿಸಿಕೊಂಡಿದ್ದರು.

    Recommended Video

    ಜಯಂತಿ ಒಬ್ರೇ ನಮ್ಮ ಅಪ್ಪಾಜಿ ನ ರಾಜ್ ಅಂತ ಕರೀತಾ ಇದ್ದಿದ್ದು

    ಸಾಮಾನ್ಯವಾಗಿ ರಾಜ್ ಕುಮಾರ್ ಅವರನ್ನು ಯಾವ ನಟಿಯರು ಹೆಸರಿಡಿದು ಮಾತನಾಡಿಸುತ್ತಿರಲಿಲ್ಲವಂತೆ. ಆದರೆ, ಜಯಂತಿ ಅವರು ಮಾತ್ರ 'ರಾಜ್' ಎಂದು ಹೆಸರು ಹೇಳಿಯೇ ಕರೆಯುತ್ತಿದ್ದರು. ಅಣ್ಣಾವ್ರ ಬಗ್ಗೆ ಜಯಂತಿ ಅವರು ಯಾವುದೇ ಸಂದರ್ಭದಲ್ಲೂ ಮಾತನಾಡುವಾಗಲೇ 'ರಾಜ್' ಎಂದೇ ಸಂಭೋದಿಸುತ್ತಿದ್ದರು. ಸಂದರ್ಶನ, ಕಾರ್ಯಕ್ರಮಗಳ ಭಾಷಣ ಹೀಗೆ ಎಲ್ಲಾ ಕಡೆಯೂ 'ರಾಜ್' ಎಂದು ಹೇಳುತ್ತಿದ್ದರು. ಇದೊಂದು ಸಾಕು ಅಭಿನಯ ಶಾರದೆ ಮತ್ತು ಅಣ್ಣಾವ್ರ ಬಾಂಧವ್ಯ ಹೇಗಿತ್ತು ಎಂದು ಹೇಳೋಕೆ. ಮುಂದೆ ಓದಿ...

    ಅಣ್ಣಾವ್ರ ಜೊತೆ ಮೊದಲ ಚಿತ್ರ ಯಾವುದು?

    ಅಣ್ಣಾವ್ರ ಜೊತೆ ಮೊದಲ ಚಿತ್ರ ಯಾವುದು?

    ಜಯಂತಿ ಮತ್ತು ರಾಜ್ ಕುಮಾರ್ ನಟಿಸಿದ ಮೊದಲ ಚಿತ್ರ 'ಚಂದವಳ್ಳಿ ತೋಟ'. 1964ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ಟಿವಿ ಸಿಂಗ್ ಠಾಕೂರ್ ನಿರ್ದೇಶಿಸಿದ್ದರು. ಈ ಚಿತ್ರಕ್ಕೂ ಮುಂಚೆ ಜಯಂತಿ ಕನ್ನಡದಲ್ಲಿ 'ಜೇನು ಗೂಡು' (1963) ಸಿನಿಮಾ ಮಾಡಿದ್ದರು. ಇದು ಕನ್ನಡದಲ್ಲಿ ಜಯಂತಿ ಅವರ ಮೊದಲ ಚಿತ್ರ.

    'ಅಭಿನಯ ಶಾರದೆ' ನಿಧನಕ್ಕೆ ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಸಂತಾಪ'ಅಭಿನಯ ಶಾರದೆ' ನಿಧನಕ್ಕೆ ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಸಂತಾಪ

    'ಬೇಡರ ಕಣ್ಣಪ್ಪ' ನೋಡಿ ಅಚ್ಚರಿಯಾಗಿದ್ದರು

    'ಬೇಡರ ಕಣ್ಣಪ್ಪ' ನೋಡಿ ಅಚ್ಚರಿಯಾಗಿದ್ದರು

    ಕನ್ನಡ ಸಿನಿಮಾಗಳಿಗೂ ಮುಂಚೆಯೇ ತೆಲುಗು ಮತ್ತು ತಮಿಳಿನಲ್ಲಿ ಜಯಂತಿ ಅಭಿನಯಿಸಿದ್ದರು. ಅದಾಗಲೇ ಚಿತ್ರಗಳ ಅವಕಾಶ ಹೆಚ್ಚಾಗಿ ಬರ್ತಿತ್ತು. ಕನ್ನಡದಲ್ಲೂ ಮೊದಲ ಸಿನಿಮಾ ಆದ್ಮೇಲೆ ಹೆಚ್ಚು ಅವಕಾಶ ಬರತೊಡಗಿದವು. ಹೀಗೆ, ಚಂದವಳ್ಳಿ ತೋಟ ಚಿತ್ರಕ್ಕೂ ಮೊದಲು ಒಮ್ಮೆ ಮದ್ರಾಸಿನಲ್ಲಿ ಜಯಂತಿ ಅವರು ಬೇಡರ ಕಣ್ಣಪ್ಪ ಸಿನಿಮಾ ನೋಡಿದ್ದರು. ಆ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಭಗವಾನ್ 'ಇವರೇ ನಿಮ್ಮ ಜೊತೆ ಚಂದವಳ್ಳಿ ತೋಟ ಸಿನಿಮಾ ಮಾಡುವುದು' ಎಂದು ತಿಳಿಸಿದ್ದರಂತೆ.

    ಬದಲಾವಣೆ ನೋಡಿ ಮೂಕವಿಸ್ಮಿತರಂತೆ ಆಗಿದ್ದರು

    ಬದಲಾವಣೆ ನೋಡಿ ಮೂಕವಿಸ್ಮಿತರಂತೆ ಆಗಿದ್ದರು

    'ಬೇಡರ ಕಣ್ಣಪ್ಪ' ಸಿನಿಮಾದಲ್ಲಿ ಕಾಡು ಮನುಷ್ಯನ ಪಾತ್ರದಲ್ಲಿ ರಾಜ್ ಕುಮಾರ್ ಅವರನ್ನು ನೋಡಿದ್ದ ಜಯಂತಿ, ಚಂದವಳ್ಳಿ ತೋಟ ಸಿನಿಮಾ ಸೆಟ್‌ನಲ್ಲಿ ರಾಜ್ ಕುಮಾರ್ ನೋಡಿ ಅಚ್ಚರಿಯಾಗಿದ್ದಂತೆ. ಅಲ್ಲಿ ನೋಡಿದ್ರೆ ಕಾಡು ಮನುಷ್ಯನಂತಿದ್ದರು, ಸೆಟ್‌ನಲ್ಲಿ ಬೇರೆಯದ್ದೇ ರೀತಿ ಇದ್ದಾರೆ. ಬಹುಶಃ ಅವರು ಬೇರೆ, ಇವರು ಬೇರೆ ಎಂದು ಅನಿಸಿತ್ತಂತೆ. ಪಾತ್ರಕ್ಕೆ ತಕ್ಕಂತೆ ರಾಜ್ ಕುಮಾರ್ ಬದಲಾಗುತ್ತಿದ್ದ ರೀತಿ ಕಂಡು ಅಚ್ಚರಿಯಾಗಿದ್ದರು ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

    'ರಾಷ್ಟ್ರ ಪ್ರಶಸ್ತಿ'ಗಿಂತ ಇಂದಿರಾ ಗಾಂಧಿ ಜೊತೆಗಿನ ಫೋಟೋಗೆ ಹೆಚ್ಚು ಹೆಮ್ಮೆ ಪಟ್ಟಿದ್ದರು ಜಯಂತಿ'ರಾಷ್ಟ್ರ ಪ್ರಶಸ್ತಿ'ಗಿಂತ ಇಂದಿರಾ ಗಾಂಧಿ ಜೊತೆಗಿನ ಫೋಟೋಗೆ ಹೆಚ್ಚು ಹೆಮ್ಮೆ ಪಟ್ಟಿದ್ದರು ಜಯಂತಿ

    ರಾಜ್-ಜಯಂತಿ ಸಿನಿಮಾಗಳು

    ರಾಜ್-ಜಯಂತಿ ಸಿನಿಮಾಗಳು

    ಚಂದವಳ್ಳಿ ತೋಟ, ಜೇಡರ ಬಲೆ, ಮಂತ್ರಾಲಯ ಮಹಾತ್ಮೆ, ಮಹಾಸತಿ ಅನಸೂಯ, ಬಹದ್ದೂರ್ ಗಂಡು, ನಂದಗೋಕುಲ, ಶ್ರೀಕೃಷ್ಣ ದೇವರಾಯ, ಮೂರುವರೆ ವಜ್ರಗಳು, ಬೆಟ್ಟದ ಹುಲಿ, ಕಿಲಾಡಿ ರಂಗ, ಇಮ್ಮಡಿ ಪುಲಿಕೇಶಿ, ಬೆಂಗಳೂರು ಮೇಲ್, ಸಿಂಹ ಸ್ವಪ್ನ, ಕ್ರಾಂತಿವೀರ, ಕಸ್ತೂರಿ ನಿವಾಸ, ಕುಲಗೌರವ, ಶ್ರೀರಾಮಾಂಜನೇಯ ಯುದ್ಧ, ಲಗ್ನ ಪತ್ರಿಕೆ, ಬಾಳ ಬಂಧನ, ಮನಸಿದ್ದರೆ ಮಾರ್ಗ, ಚಿಕ್ಕಮ್ಮ, ಚೂರಿ ಚಿಕ್ಕಣ್ಣ, ಪರೋಪಕಾರಿ, ಮುರಿಯದ ಮನೆ, ಪ್ರತಿಜ್ಞೆ, ತುಂಬಿದ ಕೊಡ, ವಾತ್ಸಲ್ಯ, ಪ್ರೇಮಮಯಿ, ಚಕ್ರತೀರ್ಥ, ಪುನರ್ಜನ್ಮ, ದೇವರ ಮಕ್ಕಳು, ನನ್ನ ತಮ್ಮ, ದೇವರಕೊಟ್ಟ ತಂಗಿ ಹೀಗೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಣ್ಣಾವ್ರು-ಜಯಂತಿ ನಟಿಸಿದ್ದಾರೆ.

    English summary
    Kannada Legendary Actress Jayanthi acted more than 40 films with Dr Rajkumar.
    Monday, July 26, 2021, 13:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X