For Quick Alerts
  ALLOW NOTIFICATIONS  
  For Daily Alerts

  ಕಮಲಾ ಕುಮಾರಿಗೆ ಜಯಂತಿ ಹೆಸರು ಸಿಕ್ಕಿದ್ದು ಹೇಗೆ?

  |

  ಅಭಿನಯ ಶಾರದೆ, ಬೋಲ್ಡ್ ಅಂಡ್ ಬ್ಯೂಟಿಫುಲ್ ತಾರೆ ಎಂದೆಲ್ಲಾ ಗುರುತಿಸಿಕೊಂಡಿದ್ದ ಜಯಂತಿ ಅವರ ಮೊದಲು ಹೆಸರು ಕಮಲಾ. ಚಿತ್ರರಂಗಕ್ಕೆ ಬರುವುದಕ್ಕೂ ಮುಂಚೆ ಜಯಂತಿ ಹೆಸರು ಕಮಲಾ ಕುಮಾರಿ ಆಗಿತ್ತು. ಶಾಲಾ ದಿನಗಳಲ್ಲಿ ಎರಡು ಜಡೆ ಕಮಲಾ ಕುಮಾರಿ ಎಂದೇ ಗುರುತಿಸಿಕೊಂಡಿದ್ದರು.

  Recommended Video

  ರಾಜ್ ಕುಮಾರ್ ಜೊತೆಗೆ 45 ಚಿತ್ರಗಳಲ್ಲಿ ನಟಿಸಿ ದಾಖಲೆ ಬರೆದಿದ್ರು ಜಯಂತಿ

  ಸಿನಿಮಾದಲ್ಲಿ ನಟಿಸಬೇಕು ಎನ್ನುವ ಆಸೆ ಕಮಲಾಗೂ ಇರಲಿಲ್ಲ, ಅವರ ಕುಟುಂದವರಿಗೂ ಇರಲಿಲ್ಲ. ಆದರೆ, ಡ್ಯಾನ್ಸ್ ಮೇಲೆ ಆಸಕ್ತಿ ಬೆಳಸಿಕೊಂಡ ಕಮಲಾಗೆ ಅಮ್ಮನಿಂದಲೂ ಪ್ರೋತ್ಸಾಹ ದೊರೆತಿತ್ತು. ಡ್ಯಾನ್ಸ್ ಮೇಲೆ ಹೆಚ್ಚಿನ ತರಬೇತಿಗಾಗಿ ಚೆನ್ನೈಗೆ ತೆರಳಿದರು. ಅಲ್ಲಿ ಚಂದ್ರಕಲಾ ಎಂಬ ನೃತ್ಯಗುರುಗಳ ಬಳಿ ಡ್ಯಾನ್ಸ್ ತರಬೇತಿಗಾಗಿ ಸೇರಿಕೊಂಡರು. ಚಂದ್ರಕಲಾ ನೃತ್ಯ ಹೇಳಿಕೊಡುವುದರ ಜೊತೆಗೆ ಸಿನಿಮಾದಲ್ಲಿಯೂ ನಟಿಸುತ್ತಿದ್ದರು.

  'ರಾಷ್ಟ್ರ ಪ್ರಶಸ್ತಿ'ಗಿಂತ ಇಂದಿರಾ ಗಾಂಧಿ ಜೊತೆಗಿನ ಫೋಟೋಗೆ ಹೆಚ್ಚು ಹೆಮ್ಮೆ ಪಟ್ಟಿದ್ದರು ಜಯಂತಿ'ರಾಷ್ಟ್ರ ಪ್ರಶಸ್ತಿ'ಗಿಂತ ಇಂದಿರಾ ಗಾಂಧಿ ಜೊತೆಗಿನ ಫೋಟೋಗೆ ಹೆಚ್ಚು ಹೆಮ್ಮೆ ಪಟ್ಟಿದ್ದರು ಜಯಂತಿ

  ದಕ್ಷಿಣ ಭಾರತದ ಖ್ಯಾತ ನಟಿ ಮನೋರಮಾ ಆಗ ಕಮಲಾ ಅವರ ಸೀನಿಯರ್. ಹೀಗೆ, ಒಂದು ಸಲ ತಮ್ಮ ಗುರುಗಳಾದ ಚಂದ್ರಕಲಾ ಅವರೊಂದಿಗೆ ಶೂಟಿಂಗ್ ನೋಡಲು ಎಲ್ಲರು ಹೋಗಿದ್ದರು. ಆಗಲೇ ನಿರ್ದೇಶಕ ವೈ ಆರ್ ಸ್ವಾಮಿ, ಕಮಲಾ (ಜಯಂತಿ) ಅವರನ್ನು ನೋಡಿದರು. ಮುಂದೆ ಓದಿ...

  ವೈಆರ್ ಸ್ವಾಮಿ ಆಯ್ಕೆ ಮಾಡಿಕೊಂಡರು

  ವೈಆರ್ ಸ್ವಾಮಿ ಆಯ್ಕೆ ಮಾಡಿಕೊಂಡರು

  ವೈಆರ್ ಸ್ವಾಮಿ 'ಜೇನುಗೂಡು' ಚಿತ್ರಕ್ಕಾಗಿ ಹೊಸ ನಟಿಯೊಬ್ಬರನ್ನು ಹುಡುಕುತ್ತಿದ್ದರು. ಅದಾಗಲೇ ಆ ಚಿತ್ರಕ್ಕೆ ಪಂಡರಿಬಾಯಿ, ಮತ್ತು ಚಂದ್ರಕಲಾ ಎನ್ನುವ ನಾಯಕಿಯರು ಆಯ್ಕೆಯಾಗಿದ್ದರು. ಇನ್ನೊಬ್ಬ ಹೊಸ ಕಲಾವಿದೆ ಬೇಕಿತ್ತು. ನಾನು ಸ್ನೇಹಿತರ ಜೊತೆಯಲ್ಲಿ ನಿಂತಿದ್ದನ್ನು ನೋಡಿ ವೈಆರ್ ಸ್ವಾಮಿ 'ಸಿನಿಮಾದಲ್ಲಿ ನಟಿಸುತ್ತೀಯಾ' ಎಂದರು ಕೇಳಿದರಂತೆ. ಆಮೇಲೆ ಅವರ ತಂದೆ-ತಾಯಿ ಬಳಿಯೂ ಚರ್ಚಿಸಿದರಂತೆ. ಆರಂಭದಲ್ಲಿ ಪೋಷಕರು ಒಪ್ಪಿಲಿಲ್ಲ. ಆಮೇಲೆ ವೈಆರ್ ಸ್ವಾಮಿ ಒತ್ತಾಯ ಮಾಡಿ ಒಪ್ಪಿಸಿದರು.

  ಎರಡನೇ ಚಿತ್ರದಲ್ಲಿ ಹೆಸರು ಬದಲಾವಣೆ

  ಎರಡನೇ ಚಿತ್ರದಲ್ಲಿ ಹೆಸರು ಬದಲಾವಣೆ

  'ಚಂದವಳ್ಳಿ ತೋಟ' ಸಿನಿಮಾ ಮಾಡುವ ಸಂದರ್ಭದಲ್ಲಿ ಕಮಲಾ ಕುಮಾರಿ ಎನ್ನುವ ಹೆಸರು ಬದಲಾವಣೆ ಮಾಡಲಾಯಿತು. ಕಮಲಾ ಕುಮಾರಿ ಬದಲು ಜಯಂತಿ ಎನ್ನುವ ಹೆಸರು ಮರುನಾಮಕರಣ ಮಾಡಿಕೊಂಡರು. ಜಯಂತಿ ಎನ್ನುವುದು ತ್ರಿದೇವಿಯ ಹೆಸರು ಆಗಿತ್ತಂತೆ.

  ಸ್ಕ್ರೀನ್ ಮೇಲೆ ಕಮಲಾ (ಜಯಂತಿ)

  ಸ್ಕ್ರೀನ್ ಮೇಲೆ ಕಮಲಾ (ಜಯಂತಿ)

  ಕಮಲಾ ಕುಮಾರಿ ಎನ್ನುವ ಹೆಸರು ತುಂಬಾ ಉದ್ದ ಇತ್ತು ಎಂದು ಬದಲಾಯಿಸಿದರು. ಕಮಲಾ ಎನ್ನುವ ಹೆಸರು ಸಹಜವಾಗಿ ಅದೃಷ್ಟವಾಗಿರಲಿಲ್ಲ. ಆ ಹೆಸರಿನಲ್ಲಿ ಯಾರೂ ಯಶಸ್ಸು ಕಾಣುತ್ತಿರಲಿಲ್ಲ ನಂಬಿಕೆ. ಹಾಗಾಗಿ, ಜಯಂತಿ ಹೆಸರು ಇಡಲಾಯಿತು. ಅಲ್ಲಿಂದ ಜಯಂತಿ ಎನ್ನುವ ಹೆಸರಿನ ಜೊತೆಗೆ (ಕಮಲಾ ಕುಮಾರಿ) ಎಂದು ಸ್ಕ್ರೀನ್ ಮೇಲೆ ಬಂತು. ದಿನ ಕಳೆದಂತೆ ಜಯಂತಿ ಮಾತ್ರ ಉಳಿದುಕೊಂಡಿತು.

  ಅಣ್ಣಾವ್ರನ್ನು 'ರಾಜ್' ಎಂದು ಕರೆಯುತ್ತಿದ್ದ ಏಕೈಕ ನಟಿ ಜಯಂತಿ!ಅಣ್ಣಾವ್ರನ್ನು 'ರಾಜ್' ಎಂದು ಕರೆಯುತ್ತಿದ್ದ ಏಕೈಕ ನಟಿ ಜಯಂತಿ!

  ಬೋಲ್ಡ್ ಅಂಡ್ ಬ್ಯೂಟಿಫುಲ್ ಖ್ಯಾತಿ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಖ್ಯಾತಿ

  ಆಗಿನ ಸಮಯಕ್ಕೆ ನಟಿಯರು ಮಡಿವಂತಿಕೆ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಿದ್ದರು. ಆದರೆ ಜಯಂತಿ ಅದನ್ನು ಮೀರಿ ಪಾತ್ರಗಳನ್ನು ನಿರ್ವಹಿಸಿದ್ದರು. ಬಹಳ ಬೋಲ್ಡ್ ಆಗಿ, ರೊಮ್ಯಾಂಟಿಕ್ ಪಾತ್ರಗಳಲ್ಲಿಯೂ ಲವಲವಿಕೆಯಿಂದ ಅಭಿನಯಿಸುತ್ತಿದ್ದರು. ಮಿಸ್ ಲೀಲಾವತಿ ಚಿತ್ರದಲ್ಲಿ ಸ್ವಿಮ್ ಸೂಟ್ ಧರಿಸಿ ಬೆರಗುಗೊಳಿಸಿದ್ದರು. ಜಯಂತಿ ಅವರ ಈ ಪಾತ್ರಗಳು ಅವರಿಗೆ 'ಬೋಲ್ಡ್ ಅಂಡ್ ಬ್ಯೂಟಿಫುಲ್' ಎಂಬ ಖ್ಯಾತಿ ತಂದುಕೊಡ್ತು. ಜೊತೆಗೆ ಅವರ ನಟನೆ ಪ್ರತಿಭೆ ಹಿನ್ನೆಲೆ 'ಅಭಿನಯ ಶಾರದೆ' ಎಂಬ ಬಿರುದು ಸಿಕ್ಕಿತು.

  English summary
  Actress Jayanthi real name is Kamala Kumari? How did get new name.
  Monday, July 26, 2021, 15:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X