ಜಯಶ್ರೀ 'ಹೀಗೆ' ಮಾಡ್ಲಿಲ್ಲ ಅಂತ ಸಿನಿಮಾದಿಂದ ಕಿತ್ತು ಹಾಕಿದ್ರಾ.?
Recommended Video

''ನಟ ನಟಿಯರು' ಸಿನಿಮಾದಿಂದ ಏಕಾಏಕಿ ನನ್ನನ್ನ ಕಿಕ್ ಔಟ್ ಮಾಡಿದ್ದಾರೆ'' ಅಂತ 'ಬಿಗ್ ಬಾಸ್' ಖ್ಯಾತಿಯ ಜಯಶ್ರೀ ರಾಮಯ್ಯ ಮೊನ್ನೆಯಷ್ಟೇ ನಿರ್ದೇಶಕ ಮಂಜು ಹೆಬ್ಬೂರ್ ವಿರುದ್ಧ ಆರೋಪ ಮಾಡಿದ್ದರು.
ಇದೀಗ ಮಾಧ್ಯಮಗಳ ಜೊತೆಗೆ ಮಾತನಾಡಿರುವ ನಟಿ ಜಯಶ್ರೀ ರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ''ಡ್ರಿಂಕ್ಸ್ ಮಾಡಲು ಹೋಗೋಣ.. ಲಾಂಗ್ ಡ್ರೈವ್ ಗೆ ಹೋಗೋಣ'' ಅಂತೆಲ್ಲಾ ನನ್ನನ್ನ ಕೇಳಿದ್ರು. ಆದ್ರೆ, ನಾನು ಯಾವುದಕ್ಕೂ ಒಪ್ಪಿಕೊಳ್ಳಲಿಲ್ಲ. ಹೀಗಾಗಿ ನನ್ನನ್ನ ಚಿತ್ರದಿಂದ ಕಿತ್ತು ಹಾಕಿದ್ದಾರೆ'' ಅಂತ ಜಯಶ್ರೀ ರಾಮಯ್ಯ ಹೇಳಿದ್ದಾರೆ.
ಸಾಲದಕ್ಕೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿ ನಿರ್ಮಾಪಕ ಹಾಗೂ ನಿರ್ದೇಶಕರ ವಿರುದ್ಧ ದೂರು ಸಲ್ಲಿಸಿದ್ದಾರೆ.

ಘಟನೆ ಬಗ್ಗೆ ಸಂಪೂರ್ಣ ವಿವರ ನೀಡಿರುವ ಜಯಶ್ರೀ, ''ಎರಡು ದಿನ ಶೂಟಿಂಗ್ ಮಾಡಿರುವೆ. ಕಾಸ್ಟ್ಯೂಮ್ ಕೂಡ ಖರೀದಿ ಮಾಡಿದ್ದಾಗಿತ್ತು. ಎಲ್ಲಾ ಆದ್ಮೇಲೆ, ರಾತ್ರೋ ರಾತ್ರಿ ಫೋನ್ ಮಾಡಿ ಪರ್ಫಾಮೆನ್ಸ್ ವಿಡಿಯೋ ಕಳುಹಿಸಿ ಅಂತ ಹೇಳ್ತಾರೆ.''
''ಕೆಲವು ಬಾರಿ ಡ್ರಿಂಕ್ಸ್ ಗೆ ಹೋಗೋಣ, ಲಾಂಗ್ ಡ್ರೈವ್ ಗೆ ಹೋಗೋಣ ಅಂತೆಲ್ಲಾ ಕೇಳಿದರು. ಅದಕ್ಕೆಲ್ಲ ನಾನು ಒಪ್ಪಿಕೊಳ್ಳಲಿಲ್ಲ. ಅದಕ್ಕೆ ಹೀಗೆ ಮಾಡಿದ್ದಾರೆ ಅನ್ಸುತ್ತೆ'' ಎಂದು ಆರೋಪಿಸಿದ್ದಾರೆ ನಟಿ ಜಯಶ್ರೀ ರಾಮಯ್ಯ.
ಅಂದ್ಹಾಗೆ, ಈ ಆರೋಪದ ಬಗ್ಗೆ ನಿರ್ದೇಶಕ ಮಂಜು ಹೆಬ್ಬೂರ್ ಸ್ಪಷ್ಟನೆ ಕೊಟ್ಟಿಲ್ಲ. ವಿವಾದ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದು, ವಾಣಿಜ್ಯ ಮಂಡಳಿ ಅಧ್ಯಕ್ಷರು ಬಗೆಹರಿಸುತ್ತಾರಾ, ನೋಡಬೇಕು.


Click it and Unblock the Notifications











