ಸಿನಿಮಾದಿಂದ 'ಬಿಗ್ ಬಾಸ್' ಜಯಶ್ರೀ ಕಿಕ್ ಔಟ್: ನಿರ್ದೇಶಕರ ವಿರುದ್ಧ ಗರಂ.!
Recommended Video

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ಮೇಲೆ ಜಯಶ್ರೀಗೆ ಸ್ಯಾಂಡಲ್ ವುಡ್ ಕೈಬೀಸಿ ಕರೆಯಿತು. ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಉಪ್ಪು ಹುಳಿ ಖಾರ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ ಜಯಶ್ರೀ 'ನಟ ನಟಿಯರು' ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.
ಮಂಜು ಹೆಬ್ಬೂರು ನಿರ್ದೇಶನದ 'ನಟ ನಟಿಯರು' ಸಿನಿಮಾ ಚಿತ್ರೀಕರಣದಲ್ಲಿ ಜಯಶ್ರೀ ಪಾಲ್ಗೊಂಡಿದ್ದರು. ಎರಡು ದಿನ ಶೂಟಿಂಗ್ ಮುಗಿದದ್ದೂ ಆಯ್ತು. ಆದ್ರೆ, ಮೂರನೇ ದಿನ ಆಗಿದ್ದೇ ಬೇರೆ.

'ನಟ ನಟಿಯರು' ಸಿನಿಮಾದ ಚಿತ್ರೀಕರಣ ಮೂರನೇ ದಿನ ಎಲ್ಲಿ ನಡೆಯುತ್ತೆ ಎನ್ನುವ ಬಗ್ಗೆ ಜಯಶ್ರೀಗೆ ಮಾಹಿತಿ ಇರಲಿಲ್ಲ. ಇದಕ್ಕಿದ್ದಂತೆ 'ನಟ ನಟಿಯರು' ಸಿನಿಮಾದ ವಾಟ್ಸ್ ಆಪ್ ಗ್ರೂಪ್ ನಿಂದ ಜಯಶ್ರೀಯನ್ನ ಹೊರ ಹಾಕಲಾಯಿತು. ಜಯಶ್ರೀ ನಂಬರ್ ನ ನಿರ್ದೇಶಕ ಮಂಜು ಹೆಬ್ಬೂರ್ ಬ್ಲಾಕ್ ಮಾಡಿದರು.
ಸಮಸ್ಯೆ ಏನು ಎಂಬುದರ ಬಗ್ಗೆ ವಿವರಿಸದೆ, ಮಾಹಿತಿ ಕೂಡ ನೀಡದೆ ಏಕಾಏಕಿ ಸಿನಿಮಾದಿಂದ ಕಿಕ್ ಔಟ್ ಮಾಡಿರುವುದಕ್ಕೆ ನಿರ್ದೇಶಕ ಮಂಜು ಹೆಬ್ಬೂರ್ ವಿರುದ್ಧ ನಟಿ ಜಯಶ್ರೀ ಗರಂ ಆಗಿದ್ದಾರೆ.
ಅತ್ತ ನಿರ್ದೇಶಕರ ವಿರುದ್ಧ ಜಯಶ್ರೀ ಆರೋಪ ಮಾಡುತ್ತಿದ್ದಾರೆ. ಇತ್ತ ಮಂಜು ಹೆಬ್ಬೂರ್ ಫೋನ್ ಸ್ವಿಚ್ ಆಫ್ ಆಗಿದೆ. ಜಯಶ್ರೀ ರನ್ನ ಮಾತ್ರ ಚಿತ್ರದಿಂದ ಕಿತ್ತು ಹಾಕಲಾಗಿದ್ಯೋ, ಅಥವಾ ಸಿನಿಮಾದ ಚಿತ್ರೀಕರಣವೇ ನಿಂತು ಹೋಗಿದ್ಯೋ.. ಖಚಿತ ಆಗಿಲ್ಲ.


Click it and Unblock the Notifications











