'ಜೋಗಿ' ಚಿತ್ರದ ನಾಯಕಿ ಜನಿಫರ್ ಸಿನಿಮಾರಂಗದಿಂದ ದೂರ ಆಗಿದ್ದೇಕೆ? ಈಗ ಎಲ್ಲಿದ್ದಾರೆ? ಇಲ್ಲಿದೆ ಮಾಹಿತಿ
'ಎಲ್ಲೋ ಜೋಗಪ್ಪ ನಿನ್ನ ಅರಮನೆ...' ಎಂದು ಹಾಡುತ್ತ, ಕುಣಿಯುತ್ತ ಕನ್ನಡ ಸಿನಿಮಾ ಪ್ರೀಯರ ಹೃದಯಗೆದ್ದಿದ್ದ ನಟಿ ಜನಿಫರ್ ಕೊತ್ವಾಲ್ ಈಗ ಸಿನಿಮಾರಂಗದಿಂದನೆ ಮಾಯವಾಗಿದ್ದಾರೆ. ಜನಿಫರ್ ಎಲ್ಲಿದ್ದಾರೆಂದು ಚಿತ್ರಪ್ರಿಯರು ಹುಡುಕುತ್ತಿದ್ದಾರೆ. ಜೋಗಿ ಸಿನಿಮಾದಲ್ಲಿ ಜನಿಫರ್ ಅಭಿನಯ, ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಚೊಚ್ಚಲ ಸಿನಿಮಾದಲ್ಲಿಯೇ ಕನ್ನಡಾಭಿಮಾನಿಗಳ ಮನಗೆದ್ದಿದ್ದ ಜನಿಫರ್ ಈಗ ಕನ್ನಡ ಸಿನಿಮಾರಂಗದಿಂದನೇ ದೂರ ಆಗಿದ್ದಾರೆ.
ಜನಿಫರ್ ಬಣ್ಣದ ಲೋಕದಿಂದ ದೂರ ಆಗಿ ಸುಮಾರು 8 ವರ್ಷಗಳಾಗಿದೆ. ಜನಿಫರ್ ಕೊನೆಯದಾಗಿ 2012ರಲ್ಲಿ ರಿಲೀಸ್ ಆದ ಹುಲಿ ಸಿನಿಮಾದಲ್ಲಿ ಅಭಿನಯಿಸಿದ್ದರು. ಆ ನಂತರ ಮತ್ತೆ ಕನ್ನಡ ಸಿನಿಮಾರಂಗದ ಕಡೆ ಮುಖಮಾಡಿಲ್ಲ. ಸಿನಿಮಾದಿಂದ ದೂರ ಆದರು ಜೋಗಿ ಸಿನಿಮಾದ ಸಕ್ಸಸ್ ಮರೆಯಲು ಸಾಧ್ಯವಿಲ್ಲ. 15ನೇ ವರ್ಷ ಪೂರೈಸಿರುವ ಜೋಗಿ ಸಿನಿಮಾವನ್ನು ಜನಿಫರ್ ನೆನಪಿಸಿಕೊಂಡಿದ್ದಾರೆ. ದೂರದ ಮುಂಬೈನಲ್ಲಿರುವ ಜನಿಫರ್ ಈಗ ಹೇಗಿದ್ದಾರೆ, ಏನ್ಮಾಡುತ್ತಿದ್ದಾರೆ? ಈ ವರದಿ ಓದಿ..

15ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ
ಮುಂಬೈ ಮೂಲದ ನಟಿ ಜನಿಫರ್ ಖ್ಯಾತಿಗಳಿಸಿದ್ದು ಕನ್ನಡ ಸಿನಿಮಾರಂಗದಲ್ಲಿ. 1983ರಲ್ಲಿ ಜನಿಸಿದ ಜನಿಫರ್ ವಿದ್ಯಾಭ್ಯಾಸ ಸಹ ಮುಂಬೈನಲ್ಲಿ ಮಾಡಿ ಮುಗಿಸಿದ್ದಾರೆ. ಅರ್ಥಶಾಸ್ತ್ರದಲ್ಲಿ ಪದವಿ ಮಾಡಿರುವ ಜನಿಫರ್ ಓದಿನ ಜೊತೆಗೆ ಮಾಡಲಿಂಗ್ ನಲ್ಲಿಯೂ ಗುರುತಿಸಿಕೊಂಡಿದ್ದರು. 15ನೇ ವಯಸ್ಸಿನಲ್ಲಿಯೆ ಜನಿಫರ್ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. 'ಜಸ್ಟ್ ಮೊಹಬ್ಬತ್' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಮಿಂಚುತ್ತಾರೆ.

ಜೋಗಿ ಮೂಲಕ ಕನ್ನಡಕ್ಕೆ ಪಾದಾರ್ಪಣೆ
ಹಿಂದಿಯ ಯಾದಿನ್ ಸಿನಿಮಾದ ಗೆಸ್ಟ್ ಪಾತ್ರದ ಮೂಲಕ ಬೆಳ್ಳಿ ಪರದೆಯಲ್ಲಿ ಮೊದಲು ಕಾಣಿಸಿಕೊಳ್ಳುತ್ತಾರೆ. ಹಿಂದಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಜನಿಫರ್ ನಂತರ ಜೋಗಿ ಚಿತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಜೋಗಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ತಂದುಕೊಟ್ಟಿದೆ. ಬಳಿಕ ಜನಿಫರ್ ಗೆ ಕನ್ನಡದಲ್ಲಿ ಸಿನಿಮಾ ಆಫರ್ ಗಳು ಜಾಸ್ತಿ ಆಯಿತು.

ಸ್ಟಾರ್ ನಟರ ಜೊತೆ ಅಭಿನಯ
ಜೋಗಿ ಸಿನಿಮಾ ಸಕ್ಸಸ್ ನ ಬಳಿಕ ಜನಿಫರ್ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ಖ್ಯಾತ ನಟರಾದ ಶಿವರಾಜ್ ಕುಮಾರ್, ದರ್ಶನ್, ಉಪೇಂದ್ರ, ರವಿಚಂದ್ರನ್, ರಮೇಶ್ ಅರವಿಂದ್ ಸೇರಿದ್ದಂತೆ ಸಾಕಷ್ಟು ಸ್ಟಾರ್ ಕಲಾವಿದರ ಜೊತೆ ತೆರೆಹಂಚಿಕೊಂಡಿದ್ದಾರೆ. ಆದೇಶ

ಐಟಂ ಡ್ಯಾನ್ ಗೆ ಕರೆಯಬೇಡಿ, ಅತಿಥಿ ಪಾತ್ರ ಮಾಡಿಲ್ಲ
ಬಹುಬೇಡಿಕೆಯ ನಟಿಯಾಗಿ ಕನ್ನಡ ಸಿನಿಪ್ರಿಯಕರ ಗಮನಸೆಳೆಸಿದ್ದ ಜನಿಫರ್ ದಿಢೀರನೆ ಮಾಯವಾಗಿದ್ದಾರೆ. 2012ರಲ್ಲಿ ರಿಲೀಸ್ ಆದ ಹುಲಿ ಸಿನಿಮಾದ ನಂತರ ಮತ್ತೆ ಕಾಣಿಸಿಕೊಂಡಿಲ್ಲ. ಡಿಸ್ಕ್ ಇಂಜುರಿಯ ಬಳಿಕ ಬಣ್ಣದ ಲೋಕದಿಂದ ದೂರ ಆದ ಜನಿಫರ್ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ, ಐಟಂ ಹಾಡುಗಳಿಗೆ ಕರೆಯಬೇಡಿ, ಅತಿಥಿ ಪಾತ್ರಗಳಲ್ಲಿ ನಟಿಸಲು ಇಷ್ಟವಿಲ್ಲ ಎಂದು ಒಮ್ಮೆ ಹೇಳಿದ್ದರು.

ಬೆಂಗಳೂರಿನ ಈ ಘಟನೆಯಿಂದ ಬೇಸರವಾಗಿದ್ದರು
ಜನಿಫರ್ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಒಮ್ಮೆ ಬೆಂಗಳೂರಿನ ಎಂ ಜಿ ರೋಡಿನಲ್ಲಿ ನಡೆದ ಘಟನೆಯಿಂದ ಜನಿಫರ್ ತುಂಬಾ ಬೇಸರ ಮಾಡಿಕೊಂಡಿದ್ದರು. ಇಂಟರ್ನೆಂಟ್ ಕೆಫೆಗೆ ಹೋದಾಗ ಜೆನಿಫರ್ ಹಿಂದೆ ಸಾಕಷ್ಟು ಜನರು ಬಂದಿದ್ದರಂತೆ. ಆಗ ಕೆಫೆ ಮಾಲಿಕ ಜನಿಫರ್ ಗೆ ಹೊರಗೆ ಹೋಗಿ ಎಂದಿದ್ದರಂತೆ. ಇದರಿಂದ ಜನಿಫರ್ ತುಂಬಾ ಬೇಸರವಾಗಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ
ಜನಿಫರ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. ತರಹೇವಾರಿ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿದ್ದಾರೆ. ಟ್ರಕ್ಕಿಂಗ್, ಟ್ರಿಪ್, ಪಾರ್ಟಿ ಅಂತ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸೆಲೆಬ್ರಿಟಿ ಎನ್ನುವುದನ್ನು ಮರೆತು ಸಾಮಾನ್ಯರಾಗಿ ಮುಂಬೈನಲ್ಲಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಜೋಗಿ ಮೂಲಕ ಮೋಡಿ ಮಾಡಿದ್ದ ಜನಿಫರ್ ಮತ್ತೆ ಸಿನಿಮಾರಂಗಕ್ಕೆ ಬರುವುದು ಅನುಮಾನ. ಜನಿಫರ್ ಫೇಸ್ ಬುಕ್ ಅಥವಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಿನಿಮಾ ಬಗ್ಗೆ ಯಾವುದೆ ಪೋಸ್ಟ್ ಗಳನ್ನು ಹಾಕುವುದಿಲ್ಲ. ಸಿನಿಮಾದ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ.

15ನೇ ವರ್ಷದ ಸಂಭ್ರಮ ಹಂಚಿಕೊಂಡ ಜನಿಫರ್
ಜೋಗಿ ಸಿನಿಮಾದ 15ನೇ ವರ್ಷದ ಸಂಭ್ರಮಾಚರಣೆಯನ್ನು ಜನಿಫರ್ ನೆನಪಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಜೋಗಿ ಸಿನಿಮಾದ ಬಗ್ಗೆ ಹಂಚಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳು ಕಳುಹಿಸಿರುವ ಪ್ರೀತಿಯ ಸಂದೇಶವನ್ನು ಶೇರ್ ಮಾಡಿದ್ದಾರೆ. 15 ವರ್ಷದ ನೆನಪನ್ನು ಸ್ಟೇಟಸ್ ಮೂಲಕ ವ್ಯಕ್ತಪಡಿಸಿದ್ದಾರೆ. ಜನಿಫರ್ ಸಿನಿಮಾರಂಗದಿಂದ ದೂರವಾಗಿದ್ದು ಅಭಿಮಾನಿಗಳು ಮಾತ್ರ ಜನಿಫರ್ ಅವರನ್ನು ಮರೆತಿಲ್ಲ.


Click it and Unblock the Notifications











