»   » 'ಪುಷ್ಪಕ ವಿಮಾನ' ಏರ್ತಾರಾ ಕಿಂದರಿ ಜೋಗಿ ಜೂಹಿ ಚಾವ್ಲಾ

'ಪುಷ್ಪಕ ವಿಮಾನ' ಏರ್ತಾರಾ ಕಿಂದರಿ ಜೋಗಿ ಜೂಹಿ ಚಾವ್ಲಾ

Posted By:
Subscribe to Filmibeat Kannada

ಬೇಬಿ ಯುವಿನಾ ಮತ್ತು ರಮೇಶ್ ಅರವಿಂದ್ ಜುಗಲ್ ಬಂದಿಯ 'ಪುಷ್ಪಕ ವಿಮಾನ' ಸಿನಿಮಾ ಟೀಸರ್ ಮೂಲಕ ಭಾರಿ ಸದ್ದು ಮಾಡಿದ್ದು, ಇದೀಗ ಮತ್ತೆ ಸುದ್ದಿಯಲ್ಲಿದೆ. ಅಂದಹಾಗೆ ಈ ಬಾರಿ ಸದ್ದು ಮಾಡಿದ್ದು ನಟಿ ಜೂಹಿ ಚಾವ್ಲಾ ಅವರು.

ಹೌದು ನವ ನಿರ್ದೇಶಕ ರವೀಂದ್ರನಾಥ್ ಅವರು ಆಕ್ಷನ್-ಕಟ್ ಹೇಳಿರುವ 'ಪುಷ್ಪಕ ವಿಮಾನ' ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಜೂಹಿ ಚಾವ್ಲಾ ಅವರು ಪ್ರಮುಖ ಪಾತ್ರವೊಂದರಲ್ಲಿ ಮಿಂಚಲಿದ್ದಾರಂತೆ.[ತಮಿಳಿನಲ್ಲೂ ಹಾರಲಿದೆ ರಮೇಶ್-ಯುವಿನಾರ 'ಪುಷ್ಪಕ ವಿಮಾನ']


Actress Juhi Chawla approached for Ramesh's 'Pushpaka Vimana'

ಈಗಾಗಲೇ ನಟಿ ಜೂಹಿ ಚಾವ್ಲಾ ಅವರನ್ನು ಚಿತ್ರತಂಡ ಸಂಪರ್ಕಿಸಿದ್ದು, ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾರೆ. ನಟಿ ಜೂಹಿ ಚಾವ್ಲಾ ಅವರು ಚಿತ್ರದ ಟೀಸರ್ ನೋಡಿ ಇಷ್ಟಪಟ್ಟಿದ್ದು, ಚಿತ್ರದ ಕುರಿತು ಮತ್ತಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಆಸಕ್ತಿ ವಹಿಸಿದ್ದಾರೆ.


ಇನ್ನು ಜೂಹಿ ಅವರು ಚಿತ್ರದ ಬಗ್ಗೆ ಆಸಕ್ತಿ ವಹಿಸಿರುವುದನ್ನು ಕಂಡರೆ ರಮೇಶ್ ಮತ್ತು ಯುವಿನಾರ 'ಪುಷ್ಟಕ ವಿಮಾನ' ಹತ್ತಲು ಗ್ರೀನ್ ಸಿಗ್ನಲ್ ಕೊಡೋದು ಗ್ಯಾರಂಟಿ. ಮೂಲಗಳು ಹೇಳುವಂತೆ ನಟಿ ಜೂಹಿ ಅವರು ವಿಶೇಷ ಪಾತ್ರವೊಂದು ಸೇರಿದಂತೆ ಚಿತ್ರದ ಹಾಡೊಂದರಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರಂತೆ.[ಅಪ್ಪ-ಮಗಳ ಮುದ್ದಾದ 'ಪುಷ್ಪಕ ವಿಮಾನ' ನೋಡಿದ್ರಾ?]


Actress Juhi Chawla approached for Ramesh's 'Pushpaka Vimana'

ಸ್ಯಾಂಡಲ್ ವುಡ್ ನಲ್ಲಿ 'ಪ್ರೇಮ ಲೋಕ', 'ಕಿಂದರಿ ಜೋಗಿ'ಯಂತಹ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ಜೂಹಿ ಅವರು 1991ರಲ್ಲಿ ಬಂದ 'ಶಾಂತಿ ಕ್ರಾಂತಿ' ನಂತರ ಮತ್ತೆ ಕನ್ನಡ ಚಿತ್ರಗಳಲ್ಲಿ ನಟಿಸಿರಲಿಲ್ಲ. ಇದೀಗ 'ಪುಷ್ಪಕ ವಿಮಾನ' ಮೂಲಕ ಮತ್ತೆ ಕನ್ನಡದಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ರು ಅಚ್ಚರಿ ಇಲ್ಲ.


ರಮೇಶ್-ಯುವಿನಾ ಅಭಿನಯದ 'ಪುಷ್ಪಕ ವಿಮಾನ' ಸಿನಿಮಾ ಈಗಾಗಲೇ ಶೇ.75ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿದ್ದು, ಅತೀ ಶೀಘ್ರದಲ್ಲಿ ಗಾಂಧಿನಗರದಲ್ಲಿ 'ವಿಮಾನ' ಹಾರಲಿದೆ.

English summary
Kannada Movie 'Pushpaka Vimana' has been throwing a lot of surprises for its audience. While the teaser starring Ramesh Aravind and child artiste, Yuvina Parthavi has been receiving a lot of appreciation, the latest and inside news is that they have approached Juhi Chawla for a role in the film. The movie is directed by S Ravindranath.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada