»   » ಚಿತ್ರಗಳು: 'ಪುಷ್ಪಕ ವಿಮಾನ'ದಲ್ಲಿ ಜೂಹಿ ಅವರ ಗೆಟಪ್ ನೋಡಿದ್ರಾ?

ಚಿತ್ರಗಳು: 'ಪುಷ್ಪಕ ವಿಮಾನ'ದಲ್ಲಿ ಜೂಹಿ ಅವರ ಗೆಟಪ್ ನೋಡಿದ್ರಾ?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿರುವ ರಮೇಶ್ ಅರವಿಂದ್ ಅವರ ನೂರನೇ ಸಿನಿಮಾ 'ಪುಷ್ಪಕ ವಿಮಾನ'ಕ್ಕೆ ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ಎಂಟ್ರಿಯಾಗುತ್ತಿದ್ದಾರೆ ಎಂದು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ.

ಇದೀಗ ನಟಿ ಜೂಹಿ ಚಾವ್ಲಾ ಅವರು ಬೆಂಗಳೂರಿಗೆ ಬಂದು 'ಪುಷ್ಪಕ ವಿಮಾನ' ಚಿತ್ರತಂಡವನ್ನು ಸೇರಿಕೊಂಡಿದ್ದು ಆಯ್ತು, ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿ ಕೊಟ್ಟಿದ್ದು ಆಯ್ತು. ಆದರೆ ಚಿತ್ರದಲ್ಲಿ ಅವರು ಅಭಿಮಾನಿಗಳಿಗೆ ಮಾಡಿರುವ ಮೋಡಿ ಎಂಥದ್ದು ಗೊತ್ತಾ?.


ಹೌದು ನಟಿ ಜೂಹಿ ಚಾವ್ಲಾ ಅವರು 'ಪುಷ್ಪಕ ವಿಮಾನ'ದ 20 ಲಕ್ಷದ ಅದ್ದೂರಿ ಸೆಟ್ಟಲ್ಲಿ ಸುಮಾರು 80 ಸಹ ಕಲಾವಿದರ ಜೊತೆ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿರುವ ಒಂದು ಸ್ಪೆಷಲ್ ಹಾಡಿನ ಶೂಟಿಂಗ್ ನಲ್ಲಿ 5 ದಿನ ಪಾಲ್ಗೊಂಡಿದ್ದರು.['ಪುಷ್ಪಕ ವಿಮಾನ' ಏರ್ತಾರಾ ಕಿಂದರಿ ಜೋಗಿ ಜೂಹಿ ಚಾವ್ಲಾ]


Actress Juhi Chawla's first look In Kannada Movie 'Pushpaka Vimana'

ಚಿತ್ರದ ಬರೀ ಒಂದು ಹಾಡಿನ ಚಿತ್ರೀಕರಣಕ್ಕಾಗಿ ಹಾಗೂ ಸಿನಿಮಾದ ಕೆಲವೇ ಕೆಲವು ದೃಶ್ಯಗಳ ಶೂಟಿಂಗ್ ಗಾಗಿ ಬಂದಿಳಿದಿದ್ದ 'ಪ್ರೇಮ ಲೋಕ'ದ ಶಕುಂತಲಾ ಹಾಡಿನಲ್ಲಿ ಹಾಕಿರುವ ಗೆಟಪ್ ಮೂಲಕ ಮಾತ್ರ ಅಭಿಮಾನಿಗಳನ್ನು ಸಾಕಷ್ಟು ಮೋಡಿ ಮಾಡಿದ್ದಾರೆ.


ಎಂಟು ಮೊಳದ ಕಡು ನೀಲಿ ಬಣ್ಣದ ಸೀರೆಯುಟ್ಟು, ಮೈ ತುಂಬಾ ಭಾರಿ ಒಡವೆ ಹಾಕಿ, ಕೈಯಲ್ಲಿ ಒಂದು ಗಿಟಾರ್ ಹಿಡಿದಿರುವ 'ಕಿಂದರಿ ಜೋಗಿ' ಚೆಲುವೆಯ ಬೆಡಗು-ಬಿನ್ನಾಣ ನೋಡುಗರ ಕಣ್ಸೆಳೆಯುತ್ತಿದೆ.[ಅಪ್ಪ-ಮಗಳ ಮುದ್ದಾದ 'ಪುಷ್ಪಕ ವಿಮಾನ' ನೋಡಿದ್ರಾ?]


ನವ ನಿರ್ದೇಶಕ ಎಸ್.ರವೀಂದ್ರನಾಥ್ ಆಕ್ಷನ್-ಕಟ್ ಹೇಳುತ್ತಿದ್ದಾರೆ. ತಂದೆ-ಮಗಳ ಬಾಂಧವ್ಯವನ್ನು ಸಾರುವ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಮತ್ತು ಬಾಲ ನಟಿ ಯುವಿನಾ ಪಾರ್ಥಿವ ಹಾಗೂ ರಚಿತಾ ರಾಮ್ ಅವರು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದಾರೆ.


ಈಗಾಗಲೇ ಬಿಡುಗಡೆ ಆಗಿರುವ ಜೂಹಿ ಚಾವ್ಲಾ ಅವರ ಫಸ್ಟ್ ಲುಕ್ ಪೋಸ್ಟರ್ ಗಳನ್ನು ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ...


ಪುಷ್ಪಕ ವಿಮಾನದಲ್ಲಿ ಜೂಹಿ ಅವರ ಫಸ್ಟ್ ಲುಕ್

ಪುಷ್ಪಕ ವಿಮಾನದಲ್ಲಿ ಜೂಹಿ ಅವರ ಫಸ್ಟ್ ಲುಕ್

-ಪುಷ್ಪಕ ವಿಮಾನದಲ್ಲಿ ಜೂಹಿ ಅವರ ಫಸ್ಟ್ ಲುಕ್

-ಪುಷ್ಪಕ ವಿಮಾನದಲ್ಲಿ ಜೂಹಿ ಅವರ ಫಸ್ಟ್ ಲುಕ್

ಪುಷ್ಪಕ ವಿಮಾನದಲ್ಲಿ ಜೂಹಿ ಅವರ ಫಸ್ಟ್ ಲುಕ್

ಪುಷ್ಪಕ ವಿಮಾನದಲ್ಲಿ ಜೂಹಿ ಅವರ ಫಸ್ಟ್ ಲುಕ್

-
-'ಪ್ರೇಮ ಲೋಕ'ದಲ್ಲಿ ರವಿಮಾಮ ಜೊತೆ ಜೂಹಿ ಚಾವ್ಲಾ

-'ಪ್ರೇಮ ಲೋಕ'ದಲ್ಲಿ ರವಿಮಾಮ ಜೊತೆ ಜೂಹಿ ಚಾವ್ಲಾ

-
'ಪ್ರೇಮ ಲೋಕ'ದಲ್ಲಿ ರವಿಮಾಮ ಜೊತೆ ಜೂಹಿ ಚಾವ್ಲಾ

'ಪ್ರೇಮ ಲೋಕ'ದಲ್ಲಿ ರವಿಮಾಮ ಜೊತೆ ಜೂಹಿ ಚಾವ್ಲಾ

'ಪ್ರೇಮ ಲೋಕ'ದಲ್ಲಿ ರವಿಮಾಮ ಜೊತೆ ಜೂಹಿ ಚಾವ್ಲಾ

'ಪ್ರೇಮ ಲೋಕ'ದಲ್ಲಿ ರವಿಮಾಮ ಜೊತೆ ಜೂಹಿ ಚಾವ್ಲಾ

-
English summary
Actress Juhi Chawla's first look posters released. Juhi Chawla shot for 5 days for Ramesh Aravind's 100th film 'Pushpaka Vimana'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada