»   » ಕರೀನಾ ಕಪೂರ್ ಗರ್ಭಿಣಿ? ಇಬ್ಬರೂ ಆತುರಪಟ್ಟರೆ?

ಕರೀನಾ ಕಪೂರ್ ಗರ್ಭಿಣಿ? ಇಬ್ಬರೂ ಆತುರಪಟ್ಟರೆ?

By: ರವಿಕಿಶೋರ್
Subscribe to Filmibeat Kannada

ಈ ಫೋಟೋ ನೋಡಿದ ಯಾರಿಗೇ ಆಗಲಿ ಈ ಸಣ್ಣ ಅನುಮಾನ ಬರುವುದು ನಿಜ. ಕರೀನಾರನ್ನು ಚೋಟಾ ನವಾಬ್ ಸೈಫ್ ಆಲಿ ಖಾನ್ ಕೈಹಿಡಿದು ಹತ್ತು ತಿಂಗಳ ಮೇಲಾಗುತ್ತಿದೆ. ಇಬ್ಬರ ಕೈಯಲ್ಲೂ ಸಾಕಷ್ಟು ಪ್ರಾಜೆಕ್ಟ್ ಗಳಿವೆ. ಈ ಸಂದರ್ಭದಲ್ಲಿ ಗರ್ಭಿಣಿ? ಇಬ್ಬರೂ ಆತುರಪಟ್ಟರೆ?

ಛೇ! ಛೇ! ಈ ಎಲ್ಲಾ ಪ್ರಶ್ನೆಗಳಿಗೆ ಒಂಚೂರು ಬ್ರೇಕ್ ಹಾಕಿ ಅಸಲಿ ವಿಚಾರಕ್ಕೆ ಬರೋಣ. ಸದ್ಯಕ್ಕೆ ಕರೀನಾ ಕಪೂರ್ ಅವರು 'ಗೋರಿ ತೇರೆ ಪ್ಯಾರ್ ಮೇ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಗೆ ಕರೀನಾ ಈ ಗೆಟಪ್ ನಲ್ಲಿ ಬಂದು ಎಲ್ಲರ ಅಚ್ಚರಿಗೂ ಕಾರಣರಾದರು.


ಆದರೆ ಇದು ರಿಯಲ್ ಅಲ್ಲ, ರೀಲ್. ಚಿತ್ರದ ಸನ್ನಿವೇಶದಲ್ಲಿ ಕರೀನಾ ಗರ್ಭಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಈ ಗೆಟಪ್ ಎನ್ನುತ್ತವೆ ಮೂಲಗಳು. ಸದ್ಯಕ್ಕೆ ನಮಗೆ ಮಕ್ಕಳು ಬೇಕು ಎಂಬ ಆಲೋಚನೆ ಮಾಡಿಲ್ಲ ಎನ್ನುತ್ತಾರೆ ಕರೀನಾ ಕಪೂರ್.

ಐ ಹೇಟ್ ಲವ್ ಸ್ಟೋರೀಸ್ ಚಿತ್ರವನ್ನು ನಿರ್ದೇಶಿದ್ದ ಪುನಿತ್ ಮಲ್ಹೋತ್ರಾ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ನಾಯಕ ನಟ ಇಮ್ರಾನ್ ಖಾನ್. ಈ ಚಿತ್ರದಲ್ಲಿ ಐಟಂ ಹಾಡೂ ಒಂದಿದ್ದು ಇಷಾ ಗುಪ್ತಾ ತಮ್ಮ ಸೊಂಟ ಬಳುಕಿಸುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರವನ್ನು ಶ್ರದ್ಧಾ ಕಪೂರ್ ಪೋಷಿಸಿದ್ದಾರೆ. (ಏಜೆನ್ಸೀಸ್)

English summary
Bollywood actress Kareena Kapoor Khan was recently spotted with a huge baby bump. But she is not pregnant in real life rather it was for a scene in her upcoming film Gori Tere Pyaar Mein with Imran Khan.
Please Wait while comments are loading...