For Quick Alerts
  ALLOW NOTIFICATIONS  
  For Daily Alerts

  ಸಹಾಯ ಮಾಡಿದರೂ ಟ್ರೋಲ್ ಆದ 'ವಜ್ರಕಾಯ' ನಟಿ ಕಾರುಣ್ಯಾ

  |

  ಕೊರೊನಾ ಸಂಕಷ್ಟಕ್ಕೆ ಸಿಲುಕಿರುವವರಿಗೆ ಕೆಲವು ಸ್ಯಾಂಡಲ್‌ವುಡ್ ನಟ-ನಟಿಯರು ಬೀದಿಗಿಳಿದು ಸಹಾಯ ಮಾಡುತ್ತಿದ್ದಾರೆ. ನಟಿ ಕಾರುಣ್ಯಾ ರಾಮ್ ಸಹ ಇದೇ ದಾರಿ ಅನುಸರಿಸಿದ್ದಾರೆ.

  ಅಜ್ಜಿ ಜೊತೆ ಬೆಣ್ಣೆ ಕಡೆಯೋದನ್ನ ಕಲಿತ ಮಗಧೀರ | Ram Charan in Kitchen

  ರಾಜಕಾರಣಿಗಳೊಂದಿಗೆ ಜೊತೆ ಸೇರಿ ಅವಶ್ಯಕತೆ ಇದ್ದವರಿಗೆ ದಿನಸಿ ಕಿಟ್, ತರಕಾರಿಗಳನ್ನು ವಿತರಿಸಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಸಹ ನಟಿ ಕಾರುಣ್ಯಾ ನೆಟ್ಟಿಗರ ಕೈಲಿ ಟ್ರೋಲ್ ಆಗಿದ್ದಾರೆ.

  ಹೌದು, ಹೀಗೆ ನೆಟ್ಟಿಗರ ಕೈಲಿ ಬುದ್ಧಿಹೇಳಿಸಿಕೊಳ್ಳುವುದಕ್ಕೆ ಕಾರಣ ಒಂದು ಫೋಟೊ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಫೊಟೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.

  ಸಿದ್ದರಾಮಯ್ಯ ಜೊತೆ ಕಾರುಣ್ಯಾ ಫೊಟೊ

  ಸಿದ್ದರಾಮಯ್ಯ ಜೊತೆ ಕಾರುಣ್ಯಾ ಫೊಟೊ

  ಸಿದ್ದರಾಮಯ್ಯ ಅವರ ಪಕ್ಕದಲ್ಲಿ ನಿಂತು ಫೊಟೊ ತೆಗೆಸಿಕೊಂಡಿರುವ ಕಾರುಣ್ಯಾ ರಾಮ್, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಆದರೆ ಚಿತ್ರದಲ್ಲಿ ಸಿದ್ದರಾಮಯ್ಯ ಅವರು ಮಾಸ್ಕ್ ಹಾಕಿಕೊಂಡಿದ್ದರೆ, ಕಾರುಣ್ಯಾ ರಾಮ್ ಮಾಸ್ಕ್ ಧರಿಸಿಲ್ಲ.

  ಸಾಮಾಜಿಕ ಅಂತರ ಕಾಯ್ದುಕೊಳ್ಳಿರೆಂದು ಕಮೆಂಟ್‍

  ಸಾಮಾಜಿಕ ಅಂತರ ಕಾಯ್ದುಕೊಳ್ಳಿರೆಂದು ಕಮೆಂಟ್‍

  ಇದನ್ನು ಎತ್ತಿತೋರಿಸಿರುವ ಕೆಲವರು, ಕಮೆಂಟ್‌ನಲ್ಲಿ ನಟಿಗೆ ಪಾಠ ಮಾಡಿದ್ದಾರೆ. 'ಸಿದ್ದರಾಮಯ್ಯ ಅವರು ಮಾಸ್ಕ್ ಧರಿಸಿದ್ದಾರೆ, ನೀವೇಕೆ ಮಾಸ್ಕ್ ಧರಿಸಿಲ್ಲ' ಎಂದಿದ್ದಾರೆ. ಸಾಮಾಜಿಕ ಅಂತರ ಸಹ ಕಾಪಾಡಿಕೊಂಡಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಎಂಎಲ್‌ಸಿ ನಾರಾಯಣಸ್ವಾಮಿ ಅವರೊಂದಿಗೆ ಕಿಟ್ ವಿತರಣೆ

  ಎಂಎಲ್‌ಸಿ ನಾರಾಯಣಸ್ವಾಮಿ ಅವರೊಂದಿಗೆ ಕಿಟ್ ವಿತರಣೆ

  ಇನ್ನು ದಿನಸಿ ಕಿಟ್ ವಿತರಿಸಿರುವ ಬಗ್ಗೆ ಬರೆದುಕೊಂಡಿರುವ ಕಾರುಣ್ಯಾ ರಾಮ್, ಎಂಎಲ್‌ಸಿ ನಾರಾಯಣ ಸ್ವಾಮಿ ಅವರು 10,000 ಮಂದಿಗೆ ದಿನಸಿ ಕಿಟ್ ವಿತರಿಸಿದ್ದಾರೆ, ಲಾಕ್‌ಡೌನ್ ಆರಂಭವಾದಾಗಿನಿಂದಲೂ ಆಹಾರದ ವ್ಯವಸ್ಥೆಯನ್ನು ದಿನವೂ ಮಾಡುತ್ತಿದ್ದಾರೆ. ಇವರ ಕೆಲಸ ಶ್ಲಾಘಿಸಲು ಸಿದ್ದರಾಮಯ್ಯ ಸಹ ಆಗಮಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ ಕಾರುಣ್ಯಾ ರಾಮ್.

  ಹಲವು ಸಿನಿಮಾಗಳಲ್ಲಿ ನಟಿಸಿರುವ ಕಾರುಣ್ಯಾ

  ಹಲವು ಸಿನಿಮಾಗಳಲ್ಲಿ ನಟಿಸಿರುವ ಕಾರುಣ್ಯಾ

  ನಟಿ ಕಾರುಣ್ಯಾ ರಾಮ್ ವಜ್ರಕಾಯ, ಕಿರಗೂರಿನ ಗಯ್ಯಾಳಿಗಳು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಮನೆ ಮಾರಾಟಕ್ಕಿದೆ, ನರಸಿಂಹ ಸೇರಿ ಕೆಲವು ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಬಿಗ್‌ಬಾಸ್ ಸೀಸನ್‌ 4 ನಲ್ಲೂ ಅವರು ಭಾಗವಹಿಸಿದ್ದರು.

  English summary
  Actress Karunya Ram distributed food kit, but trolled for not wearing mask while taking photo with former CM Siddaramaiah.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X