ಶ್ರೀರೆಡ್ಡಿಗೆ ಕೌಂಟರ್ ಕೊಟ್ಟಿದ್ದಕ್ಕೆ ಕನ್ನಡ ಚಿತ್ರ ನಟಿ ಕವಿತಾಗೆ ಬೆದರಿಕೆ.!

By Bharath Kumar

'ಕಾಸ್ಟಿಂಗ್ ಕೌಚ್' ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಶ್ರೀರೆಡ್ಡಿಗೆ ಕೌಂಟರ್ ಕೊಟ್ಟಿದ್ದಕ್ಕೆ ಕನ್ನಡ ಚಿತ್ರ ನಟಿ ಕವಿತಾಗೆ ಬೆದರಿಕೆ ಕರೆ ಬರುತ್ತಿದೆಯಂತೆ. ಕಳೆದ ಕೆಲ ವಾರಗಳಿಂದ ತೆಲುಗು ಇಂಡಸ್ಟ್ರಿಯಲ್ಲಿ ದೊಡ್ಡ ಸಂಚಲನ ಸೃಷ್ಟಿಸುತ್ತಿರುವ ಶ್ರೀರೆಡ್ಡಿ ತೆಲುಗು ವಾಣಿಜ್ಯ ಮಂಡಳಿ ಎದುರು ಅರೆನಗ್ನ ಪ್ರತಿಭಟನೆ ಮಾಡಿದ್ದರು.

ಈ ಪ್ರತಿಭಟನೆಯನ್ನ ಖಂಡಿಸಿದ್ದ ಕನ್ನಡ ಹಾಗೂ ಹಿಂದಿ ಖ್ಯಾತಿಯ ಕವಿತಾ ರಾಧೇಶಾಮ್ ತಾನು ಕೂಡ ಅರೆನಗ್ನವಾಗಿ ಫೇಸ್ ಬುಕ್ ನಲ್ಲಿ ಈ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ್ದರು. ಈ ವೇಳೆ ಮಾತನಾಡಿದ್ದ ಕವಿತಾ, ಶ್ರೀರೆಡ್ಡಿ ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ವೈಯಕ್ತಿಕ ವಿಷ್ಯಕ್ಕಾಗಿ ದೊಡ್ಡ ನಟರ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.

Actress Kavita Radheshyam Gets Threat Call

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೀಗ, ನಟಿ ಕವಿತಾಗೆ ಬೆದರಿಕೆ ಕರೆಗಳು ಬರುತ್ತಿದೆಯಂತೆ. ಅಪರಿಚತ ವ್ಯಕ್ತಿಯೊಬ್ಬ ಕರೆ ಮಾಡಿ, 24 ಗಂಟೆಯೊಳಗೆ ಶ್ರೀರೆಡ್ಡಿ ಮೇಡಂಗೆ ಕ್ಷಮಾಪಣೆ ಕೇಳಿ ವಿಡಿಯೋ ಪೋಸ್ಟ್ ಮಾಡು'' ಎಂದು ಬೆದರಿಕೆಯೊಡ್ಡಿರಂತೆ.

ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದರು. ತದ ಪೊಲೀಸರ ಸಲಹೆ ಮೆರೆಗೆ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.

ಕವಿತಾ ರಾಧೇಶಾಮ್ ಬಗ್ಗೆ....
ಕನ್ನಡದಲ್ಲಿ 'ರಾಗಿಣಿ ಐಪಿಎಸ್' ಚಿತ್ರದಲ್ಲಿ ಪಾತ್ರದ ಜೊತೆಗೆ ಐಟಂ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿರುವ ಕವಿತಾ. ನಂತರ ಜಾಗ್ವಾರ್, ಖತರ್ನಾಕ್ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಸದ್ಯ 'ಎಲ್ಲದಕ್ಕೂ ರೆಡಿ' ಎಂಬ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿಗಳಿಸಿಕೊಂಡಿದ್ದಾರೆ ಕವಿತ ರಾಧೇಶಾಮ್.

More from Filmibeat

English summary
Kannada and Bollywood actress Kavita Radheshyam Gets Threat Call From Unknown People. eriler, Kavita Radheshyam react to telugu actress sri reddy, Casting Couch and Pawan Kalyan Controversy in tollywood industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X