ಕಾರು ಡ್ರೈವರ್ ಜೊತೆ ಹೀರೋಯಿನ್ ಪುತ್ರಿ ಎಸ್ಕೇಪ್

By ಅನಂತರಾಮು, ಹೈದರಾಬಾದ್

Kavitha Daughter love marriage
ಪ್ರೇಮಕ್ಕೆ ಕಣ್ಣಿಲ್ಲ ಎನ್ನುತ್ತಾರೆ ಕಣ್ಣಾರೆ ಕಂಡವರು. ಆದರೆ ಪ್ರೇಮಿಗಳು ಮಾತ್ರ ಯಾರಿಗೂ ಕಿವಿನೂ ಕೊಡಲ್ಲ, ಬಾಯಿ ಮಾಡಲ್ಲ. ಮೊಳೆ ಇಲ್ಲದೆ ಇಷ್ಟೆಲ್ಲಾ ಸುತ್ತಿ ಯಾಕೆ ಅಂತೀರಾ. ಅಸಲಿ ಕಥೆ ಏನೆಂದರೆ ತೆಲುಗಿನ ಜನಪ್ರಿಯ ಪೋಷಕ ನಟಿ ಕವಿತಾ ಅವರ ಮಗಳು ಮಾಧುರಿ (21) ಡ್ರೈವರ್ ಒಬ್ಬರ ಜೊತೆ ಪರಾರಿಯಾಗಿದ್ದಾರೆ.

ಹೈದರಾಬಾದಿನಲ್ಲಿ ಎಂ.ಎಡ್ ಮಾಡುತ್ತಿರುವ ಮಾಧುರಿ ಕಾರು ಚಾಲಕನಾದ ಅಲಕಾಪಲ್ಲಿ ರಾಜ್ ಕುಮಾರ್ (28) ಎಂಬುವವರನ್ನು ಮನಸಾರೆ ಪ್ರೀತಿಸುತ್ತಿದ್ದರು. ಅದ್ಯಾವ ಘಳಿಗೆಯಲ್ಲಿ ಇವರಿಬ್ಬರ ನಡುವೆ ಪ್ರೇಮಾಂಕುರವಾಯಿತೋ ಏನೋ ಗೊತ್ತ್ತಿಲ್ಲ.

ಸಿಕಿಂದ್ರಾಬಾದ್ ನಲ್ಲಿ ರಾಜ್ ಕುಮಾರ್ ಖಾಸಗಿ ಕಂಪನಿಯೊಂದರಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಇವರಿಬ್ಬರೂ ಒಬ್ಬರನ್ನೊಬ್ಬರು ಗುಟ್ಟಾಗಿ, ಗಾಢವಾಗಿ ಪ್ರೀತಿಸಿಕೊಳ್ಳುತ್ತಿದ್ದರು.

ಅದು ಹೇಗೋ ಏನೋ ಈ ವಿಷಯ ಹುಡುಗಿ ತಾಯಿ ಕಿವಿಗೆ ಬಿದ್ದಿದೆ. ಇವರಿಬ್ಬರ ಮದುವೆಗೆ ಕವಿತಾ ವಿರೋಧ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಮದುವೆ ಬಗ್ಗೆ ಗಲಾಟೆಯೋ ಆಗಿದೆ. ಎರಡು ದಿನಗಳ ಹಿಂದಷ್ಟೇ ಮಾಧುರಿ ಮನೆಯಿಂದ ಓಡಿಹೋಗಿದ್ದಾರೆ.

ಕರೀಂನಗರದ ಪೆದ್ದಪಲ್ಲಿ ದೇವಸ್ಥಾನದಲ್ಲಿ ಮಾಧುರಿ ಹಾಗೂ ರಾಜ್ ಕುಮಾರ್ ಮದುವೆಯಾಗಿದ್ದಾರೆ. ದಲಿತ ಮುಖಂಡರೊಬ್ಬರ ಸಮ್ಮುಖದಲ್ಲಿ ಇವರಿಬ್ಬರೂ ಒಂದಾಗಿದ್ದಾರೆ. ಆದರೆ ಮಾಧುರಿ ಅವರ ತಾಯಿ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಪಂಜಾಗುಟ್ಟ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ರಾಜ್ ಕುಮಾರ್ ಹಾಗೂ ದಲಿತ ಮುಖಂಡರನ್ನು ಬಂಧಿಸಿ ಹೈದರಾಬಾದಿಗೆ ಕರೆತಂದಿದ್ದಾರೆ. ಈಗ ಮಾಧುರಿ ಮತ್ತು ರಾಜ್ ಕುಮಾರ್ ಅವರನ್ನು ಒಂದು ಮಾಡಬೇಕು ಎಂದು ಕೆಲವು ದಲಿತ ಸಂಘಟನೆಗಳು ಪ್ರಯತ್ನಿಸುತ್ತಿವೆ.

ಪೋಷಕ ನಟಿಯಾಗಿ ಕವಿತಾ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತೆಲುಗು ದೇಶಂ ಪಕ್ಷದ ಕಾರ್ಯಕರ್ತೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಆದರೆ ಮಾಧುರಿ ಮಾತ್ರ ತಮ್ಮ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಕಾರಣ ತಾವು ಪ್ರೇಮ ವಿವಾಹ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

More from Filmibeat

English summary
Telugu character actress Kavitha's daughter Madhuri has married Raju at Peddapally in Karimnagar district a couple of days back. The couple, who has been seeing each other since three years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X