ನಟಿ ಕಾವ್ಯ ಗೌಡ ಅದ್ದೂರಿ ಮೆಹಂದಿ ಕಾರ್ಯಕ್ರಮ: ಮದುವೆ ಸಂಭ್ರಮ ಬಲು ಜೋರು!
ನಟಿ ಕಾವ್ಯ ಗೌಡ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದಾರೆ. ಅದಕ್ಕೆ ಕಾರಣ ಕಾವ್ಯ ಅವರ ಮದುವೆ ಸಂಭ್ರಮ. ನಟಿ ಕಾವ್ಯ ಗೌಡ ಅವರ ಪರಿವಾರದಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಈಗಾಗಲೇ ಅದ್ದೂರಿ ಮೆಹಂದಿ ಶಾಸ್ತ್ರ ಕೂಡ ನೆರವೇರಿದೆ.
ನವೆಂಬರ್ 29, 30, ಡಿಸೆಂಬರ್ 1 ಮತ್ತು 2ರಂದು ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಲ್ಕು ದಿನದ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎನ್ನುವ ಯೋಜನೆ ಕುಟುಂಬಸ್ಥರಿಗಿದೆ.
ಅಷ್ಟಕ್ಕೂ ಕಾವ್ಯ ಗೌಡ ಅವರ ಕುಟುಂಬದಲ್ಲಿ ಕಿರಿಯ ಮಗಳು. ಹಾಗಾಗಿ ಆಕೆಯ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಎನ್ನುವುದು ಕುಟುಂಬಸ್ಥರ ಆಸೆ ಆಗಿದೆ. ಹಾಗಾಗಿ ಮದುವೆಯ ಪ್ರತೀ ಹಂತದಲ್ಲೂ ಅದ್ಧೂರಿತನ ಎದ್ದು ಕಾಣುತ್ತಿದೆ.

ಅದ್ಧೂರಿಯಾಗಿ ನಡೆದ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮ!
ನಾಲ್ಕು ದಿನಗಳ ಮದುವೆ ಸಂಭ್ರಮ ಆರಂಭ ಆಗಿದೆ. ಸದ್ಯ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮ ಮುಗಿದಿದೆ. ಕಾವ್ಯ ಗೌಡ ನೀಲಿ ಬಣ್ಣದ ಲೆಹೆಂಗಾ ತೊಟ್ಟು ಕಂಗೊಳಿಸಿದ್ದಾರೆ. ಕಾವ್ಯ ಜೊತೆಗೆ ಆಕೆಯ ಭಾವಿ ಪತಿ ಸೋಮಶೇಖರ್ ಕೂಡ ನೀಲಿ ಮತ್ತು ಬಿಳಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ.

ಕಾವ್ಯ ಮದುವೆ ಸಂಭ್ರಮದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ!
ಅದ್ಧೂರಿಯಾಗಿ ನೆರವೇರಿದ ಈ ಮೆಹಂದಿ ಕಾರ್ಯಕ್ರಮದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭಾಗಿ ಆಗಿದ್ದಾರೆ. ಕಪ್ಪು ಮತ್ತು ಗೋಲ್ಡನ್ ಬಣ್ಣದ ಸೀರೆಯಲ್ಲಿ ವಿಜಯಲಕ್ಷ್ಮಿ ಕಾಣಿಸಿಕೊಂಡಿದ್ದಾರೆ. ವಿಜಯಲಕ್ಷ್ಮಿ ಮದುವೆ ಮನೆಯಲ್ಲಿ ಎಲ್ಲರೊಂದಿಗೆ ಹಾಡಿ ಸಂಭ್ರಮಿಸಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಮೆಹಂದಿ ಹಾಕಿಸಿಕೊಂಡು ಭಾವಿ ಪತಿಯೊಂದಿಗೆ ಪೋಸ್ ಕೊಟ್ಟ ಕಾವ್ಯ ಗೌಡ!
ಮೆಹಂದಿ ಕಾರ್ಯಕ್ರಮದಲ್ಲಿ ನಟಿ ಕಾವ್ಯ ಗೌಡ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಕೈ ತುಂಬಾ ಅಂದವಾದ ಮೆಹಂದಿ ಹಾಕಿಕೊಂಡು, ಭಾವಿ ಪತಿಯ ಜೊತೆಗೆ ಕಾವ್ಯ ಸಂಭ್ರಮಿಸಿದ್ದಾರೆ. ಬಳಿಕ ಸಂಗೀತ ಕಾರ್ಯಕ್ರಮದಲ್ಲಿ ಕಾವ್ಯ, ಸೋಮಶೇಖರ್ ಅವರ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಕಾವ್ಯ ಗೌಡ ಅವರ ಸಹೋದರಿ ಭವ್ಯ ಗೌಡ ಮತ್ತು ಕಾವ್ಯ ಸ್ನೇಹಿತರು, ಸಂಬಂಧಿಕರು ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ್ದಾರೆ.

ಅದ್ದೂರಿತನಕ್ಕೆ ಸಾಕ್ಷಿ ಆಯ್ತು ಮೆಹಂದಿ ಕಾರ್ಯಕ್ರಮ!
ನವೆಂಬರ್ 29ರಂದು ನಡೆದ ಕಾವ್ಯ ಗೌಡ ಮತ್ತು ಸೋಮಶೇಖರ್ ಮೆಹಂದಿ ಸಂಭ್ರಮ ಅದ್ದೂರಿತನಕ್ಕೆ ಸಾಕ್ಷಿ ಆದಂತೆ ಇತ್ತು. ಇದಕ್ಕಾಗಿ ಅಂದವಾದ ಮಂಟಪ ಸಿದ್ಧವಾಗಿತ್ತು. ಹಳದಿ, ಹಸಿರು ಮತ್ತು ಕೆಂಪು ಬಣ್ಣದ ಹೂವುಗಳಿಂದ ವೇದಿಕೆಯನ್ನು ಅಲಂಕರಿಸಲಾಗಿತ್ತು. ಮತ್ತೊಂದು ಕಡೆ ಇಡೀ ಹಾಲ್ ಹೂವುಗಳಿಂದ ಸಿಂಗಾರಗೊಂಡಿತ್ತು. ಈ ಸುಂದರ ಅಲಂಕಾರದ ಮಧ್ಯೆ ಕಾವ್ಯ ಮತ್ತು ಸೋಮಶೇಖರ್ ಮಿಂಚಿದ್ದಾರೆ.

ಕಾವ್ಯ ಗೌಡ- ಸೊಮಶೇಖರ್ ಅರೇಂಜ್ ಮ್ಯಾರೇಜ್!
ಸಿನಿಮಾ ತಾರೆಯರು ಅಂದರೆ ಹೆಚ್ಚಾಗಿ ಲವ್ ಮ್ಯಾರೆಜ್ ಮಾಡಿಕೊಳ್ಳುತ್ತಾರೆ. ಆದರೆ ಕಾವ್ಯ ಅವರದ್ದು ಅರೇಂಜ್ ಮ್ಯಾರೇಜ್. ಮನೆಯಲ್ಲಿ ದೊಡ್ಡವರೆ ಹುಡುಗನನ್ನು ನೋಡಿ ಮದುವೆ ನಿಶ್ಚಯ ಮಾಡಿದ್ದಾರೆ. ಸೋಮಾಶೇಖರ್ ಒಬ್ಬ ಉದ್ಯಮಿ. ಈ ಜೋಡಿಯನ್ನು ಒಟ್ಟಿಗೆ ನೋಡಿದರೆ. ಇದು ಹೇಳಿ ಮಾಡಿಸಿದ ಜೋಡಿಯಂತಿದೆ. ಈ ಹಿಂದೆ ಕಾವ್ಯ ಮತ್ತು ಸೋಮಶೇಖರ್ ತಮ್ಮ ಪ್ರೀ ವೆಡ್ಡಿಂಗ್ ಫೊಟೋ ಶೂಟನ್ನು ದುಬೈನಲ್ಲಿ ಮಾಡಿಸಿದ್ದರು. ಜೊತೆಗೆ ಅದ್ಧೂರಿಯಾದ ಬ್ಯಾಚುಲರ್ ಪಾರ್ಟಿಯಲ್ಲೂ ಕಾವ್ಯ ಗಮನ ಸೆಳೆದಿದ್ದರು.

ಇದು ಕಾವ್ಯ ಅವರ ಕನಸಿನ ಮದುವೆ!
ಪ್ರತಿಯೊಬ್ಬರಿಗೂ ತಮ್ಮ ಮದುವೆ ಬಗ್ಗೆ ಹಲವು ಕನಸುಗಳು ಇರುತ್ತವೆ. ಹಾಗೆಯೇ ಕಾವ್ಯ ಅವರು ತಮ್ಮ ಮದುವೆ ಬಗ್ಗೆ ಹಲವು ಕನಸು ಕಟ್ಟಿದ್ದರಂತೆ. ಆ ಕನಸಿನ ಹಾಗೆಯೇ ಇಂದು ನಟಿ ಕಾವ್ಯ ಮದುವೆ ಅದ್ಧೂರಿಯಾಗಿ ನಡೆಯುತ್ತಿದೆ. ಹೀಗೆ ಎಲ್ಲರ ಸಮ್ಮುಖದಲ್ಲಿ ಮದುವೆ ಆಗಬೇಕು ಎನ್ನುವ ಕಾರಣಕ್ಕೆ ಕಾವ್ಯ ಕೊರೊನಾ ಹಾವಳಿ ಕಡಿಮೆ ಆಗುವವರೆಗೂ ಕಾದಿದ್ದಾರೆ. ಇಲ್ಲದಿದ್ದರೆ ಈ ಹಿಂದೆಯೇ ಕಾವ್ಯ ಮದುವೆ ನಡೆಯಬೇಕಿತ್ತು.


Click it and Unblock the Notifications











