For Quick Alerts
  ALLOW NOTIFICATIONS  
  For Daily Alerts

  ಮದುವೆ ದಿನಾಂಕ ಬಹಿರಂಗಗೊಳಿಸಿದ ನಟಿ ಕಾವ್ಯಾ ಗೌಡ

  |

  ಕೆಲವು ದಿನಗಳ ಹಿಂದಷ್ಟೆ ನಟಿ ಕಾವ್ಯಾ ಗೌಡ, ತಾವು ಮದುವೆ ಆಗಲಿರುವ ಹುಡುಗನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಉದ್ದನೆಯ ಪ್ರೀತಿಪೂರ್ವಕ ಪೋಸ್ಟ್ ಅನ್ನು ಬರೆದಿದ್ದರು.

  ಕೊರೊನಾ‌ ಕಾರಣದಿಂದ ಸಿಂಪಲ್ ಆಗಿ ಮದ್ವೆ ಆಗ್ತಾರಾ ಕಾವ್ಯಾ ಗೌಡ? | Filmibeat Kannada

  ಇದೀಗ ಕಾವ್ಯಾ ಗೌಡ ತಮ್ಮ ಮದುವೆ ದಿನಾಂಕವನ್ನು ಬಹಿರಂಗಗೊಳಿಸಿದ್ದಾರೆ. ಮೇ 13ರಂದು ಕಾವ್ಯಾ ಗೌಡ, ಪೋಷಕರು ಆರಿಸಿರುವ ಹುಡುಗನೊಂದಿಗೆ ವಿವಾಹವಾಗಲಿದ್ದಾರೆ.

  ಬೆಂಗಳೂರಿನ ಉದ್ಯಮಿ ಸೋಮಶೇಖರ್ ಅವರೊಟ್ಟಿಗೆ ಮೇ 13 ರಂದು ಬೆಂಗಳೂರಿನ ಹೋಟೆಲ್ ಒಂದರಲ್ಲಿ ಸರಳವಾಗಿ ಕೆಲವೇ ಮಂದಿಯ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ ಕಾವ್ಯಾ ಗೌಡ.

  ತಮ್ಮ ಮದುವೆ ಬಗ್ಗೆ ಮಾತನಾಡಿರುವ ಕಾವ್ಯಾ ಗೌಡ, 'ನನ್ನ ಪೋಷಕರು ನನಗಾಗಿ ಸೂಕ್ತ ವರನ ಹುಡುಕಾಟದಲ್ಲಿದ್ದರು ಅದೇ ಪ್ರಕ್ರಿಯೆಯಲ್ಲಿ ಸೋಮಶೇಖರ್ ಸೂಕ್ತವೆನಿಸಿ ಅವರನ್ನು ಆರಿಸಿದ್ದಾರೆ' ಎಂದಿದ್ದಾರೆ ಕಾವ್ಯಾ.

  'ನಾನು ಸೋಮಶೇಖರ್ ಅವರೊಟ್ಟಿಗೆ ಮಾತನಾಡಿದ ಬಳಿಕ ನನ್ನ ಪೋಷಕರ ಆಯ್ಕೆ ಬಗ್ಗೆ ಹೆಮ್ಮೆಯಾಯಿತು. ಸೋಮಶೇಖರ್ ಒಬ್ಬ ಅದ್ಭುತ ವ್ಯಕ್ತಿ ಎಂಬುದನ್ನು ಅರಿತುಕೊಂಡೆ. ಅವರೊಟ್ಟಿಗೆ ಜೀವನ ಆರಂಭಿಸಲು ಕಾತರಳಾಗಿದ್ದೇನೆ' ಎಂದಿದ್ದಾರೆ ಕಾವ್ಯಾ ಗೌಡ.

  'ನಾನು ನನ್ನ ಕುಟುಂಬದ ಕಿರಿ ಮಗಳು, ಸೋಮಶೇಖರ್ ಸಹ ಅವರ ಮನೆಯಲ್ಲಿ ಕಿರಿಮಗ ಎರಡೂ ಕುಟುಂಬದವರು ನಮ್ಮ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಯೋಚನೆಯಲ್ಲಿದ್ದರು. ಆದರೆ ಕೊರೊನಾ ಪರಿಸ್ಥಿತಿಯಿಂದ ಅದು ಸಾಧ್ಯವಾಗುತ್ತಿಲ್ಲ. ಕೊರೊನಾ ನಿಯಂತ್ರಣ ನಿಯಮಗಳ ಪ್ರಕಾರವೇ ಕಡಿಮೆ ಜನರ ಸಮ್ಮುಖದಲ್ಲಿ ನಮ್ಮ ಮದುವೆ ನಡೆಯಲಿದೆ' ಎಂದಿದ್ದಾರೆ ಕಾವ್ಯಾ ಗೌಡ.

  ಮದುವೆ ನಂತರ ನಟಿಸುವುದಿಲ್ಲ ಎಂದಿರುವ ಕಾವ್ಯಾ ಗೌಡ. ನಾನು 'ರಾಧಾ ರಮಣ' ಧಾರಾವಾಹಿ ನಂತರ ಯಾವುದೇ ಹೊಸ ಧಾರಾವಾಹಿ, ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ವೈಯಕ್ತಿಕ ಬದುಕನ್ನು ಅನುಭವಿಸುವುದು, ಕುಟುಂಬದವರೊಟ್ಟಿಗೆ ಕಾಲಕಳೆಯುವುದು ನನ್ನ ಉದ್ದೇಶವಾಗಿತ್ತು. ನನ್ನ ಎಂಟು ವರ್ಷ ನಟನಾವೃತ್ತಿ ನನಗೆ ತೃಪ್ತಿ ನೀಡಿದೆ ಅಷ್ಟು ಸಾಕು' ಎಂದಿದ್ದಾರೆ ಕಾವ್ಯಾ.

  ಕಾವ್ಯಾ ಗೌಡ ಅವರು, 'ರಾಧಾ-ರಮಣ', 'ಶುಭ ವಿವಾಹ', 'ಗಾಂಧಾರಿ' ಇನ್ನೂ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಬಕಾಸುರ' ಹೆಸರಿನ ಸಿನಿಮಾದಲ್ಲಿಯೂ ನಟಿಸಿದ್ದಾರೆ.

  English summary
  Serial actress Kavya Gowda marrying businessman Somashekhar on May 13 in Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X