ಹೊಸ ಉದ್ಯಮಕ್ಕೆ ಕೈ ಹಾಕಿದ ನಟಿ ಕೃಷಿ ತಾಪಂಡ

ಸಿನಿಮಾ ನಟ-ನಟಿಯರು ಸಿನಿಮಾದಲ್ಲಿ ಸಂಪಾದಿಸಿದ ಹಣವನ್ನು ಬೇರೆಡೆಗಳಲ್ಲಿ ಹೂಡಿಕೆ ಮಾಡುವುದು ಸಾಮಾನ್ಯ. ಹಲವು ನಟ-ನಟಿಯರು ರಿಯಲ್‌ ಎಸ್ಟೇಟ್, ಸಿನಿಮಾ ಪ್ರೊಡಕ್ಷನ್ ಹೌಸ್, ಚಿತ್ರಮಂದಿರ, ಮಲ್ಟಿಫ್ಲೆಕ್ಸ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ.

ಕೆಲವು ನಟ-ನಟಿಯರು ತಾವೇ ಸ್ವಂತದ ಉದ್ಯಮ ಆರಂಭಿಸುವ ಛಾತಿ ತೋರುತ್ತಾರೆ. ಅಂಥಹವರ ಸಾಲಿಗೆ ಸೇರಿದ್ದಾರೆ ಕನ್ನಡದ ನಟಿ ಕೃಷಿ ತಾಪಂಡ.

ನಟಿ ಕೃಷಿ ತಾಪಂಡ ಸಿನಿಮಾದ ಜೊತೆಗೆ ಉದ್ಯಮಿಯೂ ಆಗಲು ಹೊರಟಿದ್ದು, ತಮ್ಮದೇ ಆದ ಸ್ವಂತ ಫ್ಯಾಷನ್ ಬ್ರ್ಯಾಂಡ್ ಸ್ಥಾಪಿಸಿದ್ದಾರೆ. ತಮ್ಮ ಫ್ಯಾಷನ್‌ ಬ್ರ್ಯಾಂಡ್‌ಗೆ 'ಬೀರು' ಎಂದು ಹೆಸರಿಟ್ಟಿದ್ದಾರೆ ಕೃಷಿ ತಾಪಂಡ.

Actress Krishi Tapanda Started New Fashion Business

ಅಲ್ಮೇರಾ ಅಥವಾ ವಾರ್ಡ್‌ರೋಬ್‌ಗಳನ್ನು ಗ್ರಾಮ್ಯ ಇಂಗ್ಲೀಷ್‌ನಲ್ಲಿ ಬೀರು ಎಂದು ಕರೆಯುವ ರೂಢಿ ಇದೆ. ಬೆಲೆ ಬಾಳುವ ಸೀರೆ, ಹಣ, ಒಡವೆಗಳನ್ನು ಇಡಲು ಇದನ್ನು ಬಳಸಲಾಗುತ್ತದೆ. ಹಾಗಾಗಿ ತಮ್ಮ ಫ್ಯಾಷನ್ ಬ್ರ್ಯಾಂಡ್‌ಗೆ ಬೀರು ಎಂದು ಹೆಸರಿಟ್ಟಿದ್ದಾರೆ ಕೃಷಿ.

ಕೆಲವು ದಿನಗಳ ಹಿಂದಷ್ಟೆ ತಮ್ಮ ಫ್ಯಾಷನ್ ಬ್ರ್ಯಾಂಡ್‌ನ ಲೋಗೊ ಬಿಡುಗಡೆ ಮಾಡಿರುವ ಕೃಷಿ ತಾಪಂಡ, ಇದೀಗ ನವರಾತ್ರಿ ಹಬ್ಬಕ್ಕೆ ತಮ್ಮ ಬ್ರ್ಯಾಂಡ್‌ನ ಉಡುಪುಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ.

''ನನಗೆ ಮೊದಲಿನಿಂದಲೂ ಫ್ಯಾಷನ್‌ನಲ್ಲಿ ಆಸಕ್ತಿ. ನಾ ತೊಡುವ ಬಟ್ಟೆಗಳ ಬಗ್ಗೆ ನನಗೆ ವಿಶೇಷ ಕಾಳಜಿ. ನಾನು ತೊಡುವ ಬಟ್ಟೆಗಳ ಬಗ್ಗೆ ಜನರು ಸಹ ಸಾಕಷ್ಟು ಬಾರಿ ಕೇಳಿದ್ದಾರೆ. ಅದನ್ನೇ ಆಧಾರವಾಗಿಟ್ಟುಕೊಂಡು ಈಗ ಫ್ಯಾಷನ್ ಬ್ರ್ಯಾಂಡ್ ಸ್ಥಾಪಿಸಿದ್ದೇನೆ'' ಎಂದಿದ್ದಾರೆ ಕೃಷಿ ತಾಪಂಡ.

ಕೃಷಿ ಅವರ ಫ್ಯಾಷನ್‌ ಬ್ರ್ಯಾಂಡ್‌ಗೆ ಫ್ಯಾಷನ್ ಡಿಸೈನರ್ ನಿಖಿತಾ ಭರಣ ಸಾಥ್ ನೀಡಿದ್ದಾರೆ. ''ಕಡಿಮೆ ಮೊತ್ತಕ್ಕೆ ಗುಣಮಟ್ಟದ ಉಡುಪುಗಳನ್ನು ಗ್ರಾಹಕರಿಗೆ ಒದಗಿಸಲಿದ್ದೇವೆ. ನಮ್ಮ ಉಡುಪುಗಳು ಭಿನ್ನವಾಗಿಯೂ ಫ್ಯಾಷನೆಬಲ್ ಆಗಿಯೂ ಕಂಪರ್ಟ್‌ ಆಗಿಯೂ ಇರಲಿವೆ. ನಾವೀಗ 12 ಜನರ ತಂಡ ಮಾತ್ರವೇ ಕೆಲಸ ಮಾಡುತ್ತಿದ್ದೇವೆ. ನವರಾತ್ರಿಗೆ ನಮ್ಮ ಉಡುಪುಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ'' ಎಂದಿದ್ದಾರೆ ಕೃಷಿ ತಾಪಂಡ.

ಕನ್ನಡತಿ ಕೃಷಿ ತಾಪಂಡ, ನಟನೆಗೆ ಪದಾರ್ಪಣೆ ಮಾಡಿದ್ದು ತಮಿಳಿನ ಸಿನಿಮಾ ಮೂಲಕ. 2016ರಲ್ಲಿ ಬಿಡುಗಡೆ ಆದ 'ಅಕೀರ' ಕೃಷಿ ತಾಪಂಡರ ಮೊದಲ ಕನ್ನಡ ಸಿನಿಮಾ. ಆ ನಂತರ 'ಕಹಿ', 'ಎರಡು ಕನಸು', 'ಇರಾ', 'ಕನ್ನಡಕ್ಕಾಗಿ ಒಂದನ್ನು ಒತ್ತಿ', 'ಭರಾಟೆ' ಸಿನಿಮಾಗಳಲ್ಲಿ ಕೃಷಿ ತಾಪಂಡ ನಟಿಸಿದ್ದಾರೆ. ಕೃಷಿ ನಟಿಸಿರುವ 'ಲಂಕೆ' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ.

More from Filmibeat

English summary
Actress Krishi Thapanda launched her own fashion brand name Beeru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X