ಕೃತಿ ಮುಡಿಗೇರಿದ 'ಬೆಂಗಳೂರಿಗರ ಬಹುಮೆಚ್ಚುಗೆಯ ನಟಿ' ಕಿರೀಟ

By ಜೇಮ್ಸ್ ಮಾರ್ಟಿನ್

ಬೆಂಗಳೂರು ಟೈಮ್ಸ್ ನವರು ನಡೆಸುವ ಹಾಟ್ ಐಕಾನ್ ಆನ್ ಲೈನ್ ಮತ ಸಮೀಕ್ಷೆಯಲ್ಲಿ ಕೃತಿ ಖರಬಂದ ಅವರು ಮತ್ತೊಮ್ಮೆ ಕಿರೀಟ ಧರಿಸಿದ್ದಾರೆ. 2015ನೇ ಸಾಲಿನ 'ಮೋಸ್ಟ್ ಡಿಸೈರಬಲ್ ವುಮೆನ್' ಎಂದು ಓದುಗರಿಂದ ಕರೆಸಿಕೊಂಡಿದ್ದಾರೆ.

'ಇಲ್ಲೆ ಇಲ್ಲಿ ಎಲ್ಲೋ ನನ್ನ ಮನಸು ಕಾಣೆಯಾಗಿದೆ ಎಂದು ಹಾಡುತ್ತಾ ಗಾಂಧಿನಗರಕ್ಕೆ ಕಾಲಿಟ್ಟ ಬೆಡಗಿ ಕೃತಿ ಯುವಪೀಳಿಗೆಯ ನಂ.1 ಆಯ್ಕೆ ಎನಿಸಿದ್ದಾರೆ. ಚಿರು, ಪ್ರೇಮ ಅಡ್ಡಾ, ಗಲಾಟೆ ಚಿತ್ರಗಳ ನಂತರ ಗೂಗ್ಲಿ ಹಾಗೂ ಸೂಪರ್ ರಂಗಾ ಚಿತ್ರಗಳ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿದರು. ಸದ್ಯಕ್ಕೆ ಮಾಸ್ತಿಗುಡಿ ಅವರ ಬಹುನಿರೀಕ್ಷಿತ ಚಿತ್ರ. [ರಮ್ಯಾ ಕೈ ಜಾರಿದ 'ಹಾಟ್' ಐಕಾನ್ ಪಟ್ಟ ಕೃತಿ ಮುಡಿಗೆ]

Actress Kriti Kharbanda

2013ರಲ್ಲಿ ರಮ್ಯಾ ಅವರನ್ನು ಹಿಂದಿಕ್ಕಿ ಕಿರೀಟ ಧರಿಸಿದ್ದ ಕೃತಿಗೆ ಈ ಬಾರಿ ಮಿಸ್ ಸೂಪರ್ ನ್ಯಾಷನಲ್ 2014 ಆಶಾ ಭಟ್ ಪೈಪೋಟಿ ನೀಡಿದರು. ಮಿಕ್ಕಂತೆ ಐಂದ್ರಿತಾ ರೇ ಮೂರನೇ ಸ್ಥಾನಕ್ಕೇರಿ ಅಚ್ಚರಿ ಮೂಡಿಸಿದ್ದಾರೆ.ದರ್ಶನ್ ಜತೆ ನಟಿಸಿದ್ದ ಊರ್ವಶಿ ರೌಟೆಲಾ ನಾಲ್ಕನೇ ಸ್ಥಾನದಲ್ಲಿದ್ದರೆ, ಮಾಸ್ಟರ್ ಪೀಸ್ ನಟಿ ಶಾನ್ವಿ ಐದನೇ ಸ್ಥಾನ ಪಡೆದಿದ್ದಾರೆ. [ಕಿಚ್ಚ ಸುದೀಪ್ ಹಿಂದಿಕ್ಕಿದ ಯಶ್ ನಂ.1]

ಪಟ್ಟಿಯಲ್ಲಿ ಅದಾ ಶರ್ಮ, ಮಾಜಿ ಸಂಸದೆ ರಮ್ಯ, ಮಂಗಳೂರು ಮೂಲದ ಮಿಸ್ ಸೂಪರ್ ನ್ಯಾಷನಲ್ ಏಷ್ಯಾ ಅಂಡ್ ಓಷಾನಿಯಾ 2015 ಆಫ್ರೀನ್ ರಶೇಲ್ ವಾಜ್, ನಿಧಿ ಸುಬ್ಬಯ್ಯ, ಮೇಘನಾ ರಾಜ್, ಹರ್ಷಿಕಾ ಪೂಣಚ್ಚ, ರಾಧಿಕಾ ಪಂಡಿತ್, ಹರಿಪ್ರಿಯಾ, ರಚಿತಾ ರಾಮ್,ಮಾಡೆಲ್ ಸುಶ್ರುತಿ ಕೃಷ್ಣ, ಪರೂಲ್ ಯಾದವ್,ರಾಗಿಣಿ ದ್ವಿವೇದಿ, ಪ್ರಣೀತಾ ಸುಭಾಶ್, ಮಿಸ್ ದಿವಾ ಯೂನಿವರ್ಸ್ 2014 ನೊಯೊನಿತಾ ಲೊಧ್, ಮಾಡೆಲ್ ರಕ್ಷಿತಾ ಹರಿಮೂರ್ತಿ, ಪ್ರಿಯಾಮಣಿ, ಶ್ರುತಿ ಹರಿಹರನ್,ಮಾಡೆಲ್ ಸಂಜನಾ ಜಿಎಲ್, ರೋಶ್ಮಿತಾ ಹರಿಮೂರ್ತಿ, ಅಮೂಲ್ಯ ಇದ್ದಾರೆ.

ಐಟೈಮ್ಸ್ ವೆಬ್ ತಾಣದಲ್ಲಿ ನಡೆದ ಆನ್ ಲೈನ್ ಸಮೀಕ್ಷೆ ನಡೆಸಲಾಗಿತ್ತು. ಈ ಸ್ಪರ್ಧೆಯಲ್ಲಿ ಚಲನಚಿತ್ರ ನಟಿ, ಮಾಡೆಲ್ ಗಳು ಕಣದಲ್ಲಿದ್ದರು. ಓದುಗರು ತಮ್ಮ ನೆಚ್ಚಿನ ಸ್ಟಾರ್ ಗೆ ಮತ ಹಾಕುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಾಟ್ ಪುರುಷ, ಮಹಿಳೆ ಎಂಬ ಕೆಟಗರಿಯಲ್ಲಿ ಪ್ರತಿ ನಗರ ಹಾಗೂ ಪ್ರತಿ ಚಿತ್ರರಂಗಕ್ಕೂ ಪ್ರತ್ಯೇಕ ಸಮೀಕ್ಷೆ ನಡೆಸಿ ಫಲಿತಾಂಶ ಸೋಮವಾರ (ಏಪ್ರಿಲ್ 25) ಪ್ರಕಟಿಸಲಾಗಿದೆ.

-

-

-

-

-

-

ಕೃತಿ ಮುಡಿಗೆ 'ಬೆಂಗಳೂರಿಗರ ಮೆಚ್ಚುಗೆ ನಟಿ' ಕಿರೀಟ

ಕೃತಿ ಮುಡಿಗೆ 'ಬೆಂಗಳೂರಿಗರ ಮೆಚ್ಚುಗೆ ನಟಿ' ಕಿರೀಟ

-

-

-

-

-

-

-

More from Filmibeat

English summary
Actress Kriti Kharbanda has topped the list of Most Desirable Women 2015. In a poll conducted by Bangalore Times. Miss Supranational 2014 Asha Bhat is runner up. Kriti made it to the hot seat in 2013 edition of poll also. Here are the Bangalore Times 25 Most Desirable Women 2015 list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X