ಪೋಲ್ ಡ್ಯಾನ್ಸ್ ಮಾಡಿದ ಗೂಗ್ಲಿ ಬೆಡಗಿ ಕೃತಿ ಕರಬಂಧ
ರಾಕಿಂಗ್ ಸ್ಟಾರ್ ಯಶ್ ಗೆ 'ಗೂಗ್ಲಿ' ಹಾಕಿದ್ದ ನಟಿ ಕೃತಿ ಕರಬಂಧ ಬಾಲಿವುಡ್ ನಲ್ಲಿ ಸಿನಿಮಾಗಳನ್ನು ಮಾಡಿದ್ದಾರೆ. ಇತ್ತ ಇದೀಗ ಕೃತಿ ಕರಬಂಧ ಮಾಡಿರುವ ಡ್ಯಾನ್ಸ್ ಎಲ್ಲರ ಕಣ್ಣು ಕುಕ್ಕುತ್ತಿದೆ.
ಅನೇಕ ನಟಿಯರು ಫಿಟ್ನಸ್ ಗಾಗಿ ಪೋಲ್ ಡ್ಯಾನ್ಸ್ ಮಾಡುತ್ತಾರೆ. ಈಗ ಕೃತಿ ಕರಬಂಧ ಕೂಡ ಪೋಲ್ ಡ್ಯಾನ್ಸ್ ಪ್ರದರ್ಶಸಿದ್ದಾರೆ. ಪೋಲ್ ಡ್ಯಾನ್ಸ್ ಮಾಡಿದ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕೃತಿ ಹಂಚಿಕೊಂಡಿದ್ದಾರೆ. ಕೃತಿ ಪೋಲ್ ಡ್ಯಾನ್ಸ್ ನೋಡಿ ಫ್ಯಾನ್ಸ್ ಬೆರಗಾಗಿದ್ದಾರೆ. ಅನೇಕರು ಕೃತಿ ಅವರ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ.
ಅಂದಹಾಗೆ, ನಟಿ ಕೃತಿ ಕರಬಂಧ ಕನ್ನಡದಲ್ಲಿ ಶಿವರಾಜ್ ಕುಮಾರ್, ಯಶ್, ಉಪೇಂದ್ರ, ದುನಿಯಾ ವಿಜಯ್ ಜೊತೆಗೆ ತೆರೆ ಹಂಚಿಕೊಂಡ ಖ್ಯಾತಿ ಪಡೆದಿದ್ದಾರೆ. ಸದ್ಯ ಕೃತಿ ಕೈನಲ್ಲಿ ನಾಲ್ಕು ಸಿನಿಮಾಗಳು ಇವೆ.

ಯಶ್ ಅಭಿನಯದ 'ರಾಣ' ಸಿನಿಮಾಗೆ ಕೃತಿ ನಾಯಕಿ ಎಂಬ ಸುದ್ದಿ ಕೂಡ ಒಂದು ಕಡೆ ಇದೆ. ಜೊತೆಗೆ ಹಿಂದಿಯಲ್ಲಿ 'ಹೌಸ್ ಫುಲ್ 4' ಸಿನಿಮಾದಲ್ಲಿ ಕೂಡ ಅವರು ನಟಿಸುತ್ತಿದ್ದಾರೆ.
English summary
kannada actress, 'Googly' movie fame Kriti Kharbanda did pole dance.


Click it and Unblock the Notifications